ಹಾನಗಲ್: ಎಮ್ಮೆಗಳನ್ನ ಕರೆದುಕೊಂಡು ಬರಲು ನದಿಗೆ ಹಾರಿದ ನವವಿವಾಹಿತನೊಬ್ಬ ನೀರು ಪಾಲಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ನಡೆದಿದೆ.
ಚಂದ್ರು ದಳವಾಯಿ (25) ನೀರು ಪಾಲಾಗಿರುವ ವ್ಯಕ್ತಿ. ಮೂರು ದಿನಗಳಿಂದ ವರದಾ ನದಿಯಲ್ಲಿ ಸಿಲುಕಿದ್ದ ಮೂರು ಎಮ್ಮೆಗಳನ್ನ ಕರೆದುಕೊಂಡು ಬರುತ್ತೇನೆ ಎಂದು ನದಿ ನೀರಿಗೆ ಜಿಗಿದಿದ್ದ ಚಂದ್ರು ನದಿಯ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ.
ನದಿಯ ನಡುವೆ ಇರುವ ಅರಣ್ಯದಲ್ಲಿ ಎಮ್ಮೆಗಳು ಮೇಯಲು ಹೋಗಿದ್ದವು. ಚಂದ್ರು ಮೂರು ತಿಂಗಳು ಹಿಂದಷ್ಟೇ ಮದುವೆಯಾಗಿದ್ದ. ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಅಲ್ಲಿಯೇ ಉಳಿದಿದ್ದ ಎಮ್ಮೆಗಳನ್ನ ರಕ್ಷಣೆ ಮಾಡಲು ತೆರಳಿದ್ದ ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಘಟನೆ ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.