ETV Bharat / state

ಕರ್ಫ್ಯೂ ಎಫೆಕ್ಟ್​: ಹಾವೇರಿಯಲ್ಲಿ ಕುಸಿದ ಮದ್ಯ ವ್ಯಾಪಾರ - liquor trade Declined at haveri

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂವಿನ ಹಿನ್ನೆಲೆ ಹಾವೇರಿಯಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಮದ್ಯದಂಗಡಿಗಳತ್ತ ಮುಖಮಾಡುತ್ತಿದ್ದಾರೆ ಎನ್ನಲಾಗಿದೆ.

curfew-effect-liquor-trade-declined-in-haveri
ಹಾವೇರಿಯಲ್ಲಿ ಕುಸಿದ ಮದ್ಯ ವ್ಯಾಪಾರ
author img

By

Published : May 3, 2021, 7:52 PM IST

ಹಾವೇರಿ: ಕಳೆದ ವರ್ಷ ರಾಜ್ಯದಲ್ಲಿಯೇ ಅತಿಹೆಚ್ಚು ಮದ್ಯ ಮಾರಾಟವಾಗಿದ್ದ ಕೀರ್ತಿ ಜಿಲ್ಲೆಗೆ ಸಲ್ಲಿತ್ತು. ಆದರೆ ಈ ವರ್ಷ ಕೊರೊನಾ 2ನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಕರ್ಫ್ಯೂ ಮೊರೆ ಹೋಗಿರುವುದರಿಂದ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ವರ್ಷ ವ್ಯಾಪಾರ ಕುಸಿತಗೊಂಡಿದೆ ಎಂಬ ಮಾತುಗಳು ಕೇಳಿಬಂದಿವೆ.

ಹಾವೇರಿಯಲ್ಲಿ ಕುಸಿದ ಮದ್ಯ ವ್ಯಾಪಾರ

ಸರ್ಕಾರದ ನಿಯಮಾವಳಿಗಳನ್ನು ಪಾಲಿಸುತ್ತಿರುವ ಮದ್ಯದಂಗಡಿ ಮಾಲೀಕರು, ಮುಂಜಾನೆ 6 ರಿಂದ 10 ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯುತ್ತಿದ್ದಾರೆ. ಕಳೆದ ಬಾರಿ ಜನದಟ್ಟಣೆ ಕಂಡಿದ್ದ ಹಾವೇರಿಯ ಹಲವು ಮಾಲೀಕರು ತಮ್ಮ ಮದ್ಯದಂಗಡಿ ಮುಂದೆ ಬ್ಯಾರಿಕೇಡ್ ಹಾಕಿದ್ದಾರೆ. ಆದರೆ ಅವರ ನಿರೀಕ್ಷೆಯಂತೆ ಮದ್ಯಪಾನಿಗಳು ಅಂಗಡಿಗಳ ಕಡೆ ಸುಳಿಯುತ್ತಿಲ್ಲ ಎನ್ನಲಾಗಿದೆ.

ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಅಂಗಡಿಗಳತ್ತ ಮುಖಮಾಡುತ್ತಿದ್ದಾರೆ. ಮುಂಜಾನೆ ಮದ್ಯಪಾನ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲದೇ ಪಾರ್ಸಲ್ ಸೇವೆ ಇರುವುದರಿಂದ ತಮ್ಮ ಗಳಿಕೆಯೂ ಕುಸಿದಿದೆ ಎಂದು ಮದ್ಯದಂಗಡಿ ಮಾಲೀಕರು ಅಭಿಪ್ರಾಯಪಡುತ್ತಿದ್ದಾರೆ.

ಓದಿ: ವಧು-ವರನಿಗೆ ಮಾಸ್ಕ್ ಹಾರ ಹಾಕಿ ಕೊರೊನಾ ಜಾಗೃತಿ ಮೂಡಿಸಿದ ಪೋಷಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.