ಹಾವೇರಿ: ಇಂದು ಅಕ್ಷಯ ತೃತೀಯ, ಈ ದಿನ ಚಿನ್ನ ಖರೀದಿಸಿದರೆ ಅದು ಅಕ್ಷಯವಾಗುತ್ತೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಎರಡು ವರ್ಷಗಳಿಂದ ಕೊರೊನಾ ಭೀತಿ ಅಕ್ಷಯ ತೃತೀಯ ಸಂಭ್ರಮವನ್ನ ಕಸಿದುಕೊಂಡಿದೆ.
ನಗರದಲ್ಲಿ ಕಳೆದ ವರ್ಷ ಕೊರೊನಾ ಮೊದಲ ಅಲೆಯಿಂದ ತತ್ತರಿಸಿದ್ದ ಜನ ಚಿನ್ನ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ವರ್ಷ ಅಕ್ಷಯ ತೃತೀಯಾಗೆ ಎರಡನೇ ಅಲೆ ಸಂಕಷ್ಟ ತಂದೊಡ್ಡಿದೆ. ಪ್ರತಿ ವರ್ಷ ಅಕ್ಷಯ ತೃತೀಯಾ ದಿನದಂದೆ ಜನರು ಬಂಗಾರ ಸೇರಿದಂತೆ ಆಭರಣಗಳ ಖರೀದಿಯಲ್ಲಿ ಮುಗಿಬೀಳುತ್ತಿದ್ದರು. ಇದರಿಂದ ನಗರದಲ್ಲಿ ಈ ದಿನ ಕೋಟ್ಯಾಂತರ ರೂಪಾಯಿ ವ್ಯವಹಾರವಾಗುತ್ತಿತ್ತು.
ಓದಿ:12ನೇ ತರಗತಿ ಪರೀಕ್ಷೆ ರದ್ದು ಕೋರಿ ಸುಪ್ರೀಂಕೋರ್ಟ್ನಲ್ಲಿ ಸರ್ಜಿ ಸಲ್ಲಿಕೆ
ಆದರೆ ಪ್ರಸ್ತುತ ಎರಡನೇ ಅಲೆಯ ಕಾರಣ ಲಾಕ್ಡೌನ್ ಘೋಷಿಸಲಾಗಿದೆ. ಪರಿಣಾಮ ಬಂಗಾರದ ಅಂಗಡಿಗಳೆಲ್ಲ ಬಂದ್ ಆಗಿವೆ. ಚಿನ್ನ ಖರೀದಿಸುವ ಗ್ರಾಹಕರಿಗೆ ಮತ್ತು ಬಂಗಾರದ ಅಂಗಡಿ ಮಾಲೀಕರು ಸಹ ವ್ಯಾಪಾರ ಮಾಡಲಾಗದೆ ನಿರಾಸೆ ಅನುಭವಿಸಿದ್ದಾರೆ.