ಹಾವೇರಿ: ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ಹಾವೇರಿ ಜಿಲ್ಲೆಯ ಹಲವು ಗ್ರಾಮಗಳ ಜನರು ತಮ್ಮ ಗ್ರಾಮಗಳಿಗೆ ದಿಗ್ಬಂದನ ಹಾಕಿಕೊಂಡಿದ್ದಾರೆ. ಹಾವೇರಿಯ ಶಿರಮಾಪುರ, ಸೋಮಾಪುರ, ಬುಳ್ಳಾಪುರ, ಹಳ್ಳೂರು, ದೇವಗೊಂಡನಕಟ್ಟಿ, ಹಿರೇಬಾಸೂರು ಸೇರಿದಂತೆ ವಿವಿಧ ಗ್ರಾಮಗಳ ಜನರು ಗ್ರಾಮಕ್ಕೆ ಯಾರೂ ಬರದಂತೆ ಹಾಗೂ ಗ್ರಾಮದಿಂದ ಯಾರೂ ಹೊರಹೋಗದಂತೆ ದಿಗ್ಬಂದನ ಹಾಕಿಕೊಂಡಿದ್ದಾರೆ.
ಗ್ರಾಮದ ಹೊರವಲಯದಲ್ಲಿರೋ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿ ಬೇರೆ ಗ್ರಾಮದ ಯಾರೂ ಪ್ರವೇಶ ಮಾಡದಂತೆ ಹಾಗೂ ಗ್ರಾಮದಿಂದ ಯಾರೂ ಹೊರ ಹೋಗದಂತೆ ಪ್ಲ್ಯಾನ್ ಮಾಡಿದ್ದಾರೆ. ಆ ಮೂಲಕ ಎಲ್ಲರೂ ಮನೆಯಲ್ಲಿ ಇರಿ, ಮನೆ ಬಿಟ್ಟು ಹೊರಗೆ ಓಡಾಡಬೇಡಿ. ಎಲ್ಲರೂ ಸೇರಿ ಕೊರೊನಾ ಸೋಂಕು ಹರಡೋದನ್ನ ತಡೆಗಟ್ಟೋಣ ಅಂತಾ ಮನವಿ ಮಾಡ್ತಿದ್ದಾರೆ.