ಹಾವೇರಿ: ಶಿಗ್ಗಾಂವಿ ಪಟ್ಟಣದ ಗೌಡರ ಓಣಿ ನಿವಾಸಿಯಾಗಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಗೆ ಈಗ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ.
15 ವರ್ಷದ ರೋಗಿ ಸಂಖ್ಯೆ 8,644 ಆಗಿರುವ ವಿದ್ಯಾರ್ಥಿನಿಯಲ್ಲಿ ಜೂನ್ 20ರಂದು ಸೋಂಕು ದೃಢಪಟ್ಟಿತ್ತು. ರೋಗಿ ಸಂಖ್ಯೆ 6,832ರ ಸಂಪರ್ಕದಿಂದ ಸೋಂಕು ಹರಡಿತ್ತು ಎನ್ನಲಾಗಿದೆ.
ಸದ್ಯಕ್ಕೆ ಹಾವೇರಿಯ ಕೋವಿಡ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೂರಕ ಪರೀಕ್ಷೆಯ ವೇಳೆ ಈಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದ್ದು, ಪ್ರಥಮ ಅವಕಾಶವೆಂದು ಪರಿಗಣಿಸಲಾಗುತ್ತದೆ ಎನ್ನಲಾಗಿದೆ.