ರಾಣೇಬೆನ್ನೂರು: ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.
ಶನಿವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಪೂಜಾರ ಪರ ಆರ್.ಶಂಕರ್ ಮತಯಾಚನೆಗೆ ತೆರಳಿದಾಗ ಈ ಪ್ರಸಂಗ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಅನರ್ಹ, ಅನರ್ಹ ಎಂದು ಘೋಷಣೆ ಕೂಗಿ ನಂತರ ಕಾರ್ಯಕರ್ತರು ಪ್ರಚಾರ ವಾಹನದಿಂದ ಕೆಳಗಿಳಿಯುವಂತೆ ಆಗ್ರಹಿಸಿದ್ದಾರೆ. ಇದರಿಂದ ಮುಜಗರಕ್ಕೆ ಒಳಗಾದ ಆರ್.ಶಂಕರ್ ಅರ್ಧಕ್ಕೆ ಭಾಷಣ ಮುಗಿಸಿದ್ದಾರೆ.
ನಂತರ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಭಾಷಣ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವೋಟ್ ಫಾರ್ ಕಾಂಗ್ರೆಸ್, ವೋಟ್ ಫಾರ್ ಕಾಂಗ್ರೆಸ್ ಅಂತ ಜೋರಾಗಿ ಕೂಗಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.