ಹಾವೇರಿ : ಜಿಲ್ಲೆಯ ಕೊರೊನಾ ಪ್ರಕರಣಗಳ ಕುರಿತು ರಾಜ್ಯ ಮತ್ತು ಜಿಲ್ಲೆಯ ಹೆಲ್ತ್ ಬುಲೆಟಿನ್‌ಗಳಲ್ಲಿ ಶುಕ್ರವಾರ ಗೊಂದಲ ಸೃಷ್ಟಿಯಾಗಿದೆ.
ರಾಜ್ಯ ಬುಲೆಟಿನ್‌ನಲ್ಲಿ ಹಾವೇರಿಯಲ್ಲಿ 19 ಪ್ರಕರಣ ದೃಢಪಟ್ಟಿವೆ ಎಂದು ತಿಳಿಸಲಾಗಿದೆ. ಆದರೆ, ಜಿಲ್ಲಾ ಬುಲೆಟಿನ್ 18 ಪ್ರಕರಣ ಎಂದು ಖಚಿತಪಡಿಸಿದೆ. ಬೆಂಗಳೂರಿನಲ್ಲಿ ದಾಖಲಾದ ಹಾವೇರಿ ಮೂಲದ ಸೋಂಕಿತ ವ್ಯಕ್ತಿ ಈ ಗೊಂದಲಕ್ಕೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ವ್ಯಕ್ತಿ ಇಲ್ಲವಾದ್ದರಿಂದ ಜಿಲ್ಲಾಡಳಿತ 18 ಪ್ರಕರಣ ಮಾತ್ರ ದೃಢಪಡಿಸಿದೆ. ಆದರೆ, ವ್ಯಕ್ತಿ ಹಾವೇರಿಗೆ ಸೇರಿದವರು ಎಂದು ರಾಜ್ಯ ಬುಲೆಟಿನ್‌ನಲ್ಲಿ 19 ಪ್ರಕರಣ ದೃಢಪಟ್ಟಿವೆ. ಜಿಲ್ಲೆಯಲ್ಲಿ ಈವರೆಗೂ 6 ಮಂದಿ ಗುಣಮುಖರಾಗಿದ್ದು, 13 ಸಕ್ರಿಯ ಪ್ರಕರಣಗಳಿವೆ (ರಾಜ್ಯ ಬುಲೆಟಿನ್ ಮಾಹಿತಿ ಪ್ರಕಾರ).