ಹಾವೇರಿ:ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಶಾಸಕ ರಾಜಶೇಖರ ಸಿಂಧೂರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿರೋ ನಿವಾಸದಲ್ಲಿ ಇವತ್ತು ಬೆಳಗ್ಗೆ ಹೃದಯಾಘಾತದಿಂದ ಮಾಜಿ ಶಾಸಕ ರಾಜಶೇಖರ ಸಿಂಧೂರ ನಿಧನರಾಗಿದ್ದರು.
ಪಾರ್ಥೀವ ಶರೀರದ ಅಂತಿಮ ದರ್ಶನದ ನಂತರ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜಶೇಖರ ಸಿಂಧೂರ ನನ್ನ ಅತ್ಯಂತ ಆತ್ಮೀಯ ಸ್ನೇಹಿತರು, ಸಹೋದರ ಸಮಾನರು. ನಮ್ಮ ಮನೆತನದ ಸಂಬಂಧ ಮೂರು ಪೀಳಿಗೆಗೆ ಇದೆ. ಸಹೋದರನನ್ನ ಕಳೆದುಕೊಂಡು ನಾವು ಬಡವರಾಗಿದ್ದೇವೆ. ಸಿಎಂ ಆಗಿ ಸವಣೂರಿಗೆ ಬಂದು ಅವರ ಅಂತಿಮ ದರ್ಶನ ಪಡೆಯುತ್ತೇನೆ ಅಂದುಕೊಂಡಿರ್ಲಿಲ್ಲ. ಇದರಿಂದ ನನಗೆ ಅತ್ಯಂತ ನೋವಾಗಿದೆ, ಬಹಳ ದುಃಖವಾಗಿದೆ ಎಂದ್ರು.
ಸಿಂಧೂರ ಅವರು ಸಾವಯವ ಕೃಷಿ, ನೀರು ಕೊಯ್ಲು ಸೇರಿದಂತೆ ಕೃಷಿಯಲ್ಲಿನ ವಿನೂತನ ಪ್ರಯೋಗಗಳ ಮೂಲಕ ಹೆಸರು ವಾಸಿಯಾಗಿದ್ದರು. ಇಡೀ ರೈತರಿಗೆ ಪ್ರೇರಣೆ ಆಗಿದ್ದರು. ರಾಜಶೇಖರ ಸಿಂಧೂರ ಶಾಸಕರಾಗಿದ್ದಾಗ ರೈತರ ಸಹಕಾರಿ ಸಾಲವನ್ನಾ ತಾವೇ ತುಂಬಿ ಮನ್ನಾ ಮಾಡಿಸಿದ್ದರು. ಇದು ದೇಶದಲ್ಲೇ ಮಾದರಿ ಆಗಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ.ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ಬೇಡಿಕೊಳ್ಳುವೆ ಎಂದು ಹೇಳಿದ್ರು. ಪಾರ್ಥೀವ ಶರೀರದ ದರ್ಶನ ಪಡೆದ ನಂತರ ಸಿಎಂ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದರು.