ETV Bharat / state

ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಸಿದ್ದರಾಮಯ್ಯಗೆ ಅಚ್ಛೇದಿನ್ ಬರಲ್ಲ ಎಂದ ಸಿಎಂ

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್​ನವರಿಗೆ ನೈತಿಕತೆಯಿಲ್ಲ. ನೀವು ಏನೇನೋ ಹೇಳಿ ಮತ ಗಳಿಸಬೇಕು ಅಂತಾ ಮಾಡಿದ್ದೀರಿ. ಅದು ಈ ಮಣ್ಣಿನಲ್ಲಿ ಸಾಧ್ಯವಿಲ್ಲ. ನಿಮ್ಮ ಮೇಲೆ ಜನರು ವಿಶ್ವಾಸವಿಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕರ ವಿರುದ್ಧ ಸಿಎಂ ಬೊಮ್ಮಾಯಿ ಹರಿಹಾಯ್ದಿದ್ದಾರೆ.

ಬೊಮ್ಮಾಯಿ
ಬೊಮ್ಮಾಯಿ
author img

By

Published : Oct 17, 2021, 7:45 PM IST

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರ ಕೈ ವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇಂದು ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆಸಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರು ಅಭ್ಯರ್ಥಿ ಶಿವರಾಜ ಸಜ್ಜನರ್​ ಪರ ಮತಯಾಚಿಸಿದ್ದಾರೆ.

ಹಾನಗಲ್​ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಮತಯಾಚನೆ

‘ಹಾನಗಲ್ ಕ್ಷೇತ್ರದ ಜನರು ಬುದ್ಧಿವಂತರು’

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಲ್ಕು ದಶಕಗಳ ಕಾಲ ಸಿ.ಎಂ. ಉದಾಸಿಯವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮತ್ಯಾರು ಅವರಿಗೆ ಸಾಟಿಯಿಲ್ಲ ಎಂದು ಉದಾಸಿಯವರ ಗುಣಗಾನ ಮಾಡಿದ್ರು. ಉದಾಸಿಯವರು ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್​ನವರು, ಈ ಕ್ಷೇತ್ರವನ್ನು ಸಂಪೂರ್ಣವಾಗಿ ನೋಡಿಲ್ಲ. ನಿನ್ನೆ, ಮೊನ್ನೆ ಬಂದು ದೊಡ್ಡ ಸಾಧನೆ ಮಾಡಿದಂತೆ ಮತ ಕೇಳುತ್ತಿದ್ದಾರೆ. ಈ ಕ್ಷೇತ್ರದ ಜನರು ಬಹಳ ಬುದ್ಧಿವಂತರಿದ್ದು, ಕಾಂಗ್ರೆಸ್ಸಿಗರಂಥ ಎಷ್ಟೋ ಜನರನ್ನು ನೋಡಿದ್ದಾರೆ ಎಂದರು.

ಬಿಜೆಪಿ ಬಡವರ ಪರ

ಯಡಿಯೂರಪ್ಪ ಸರ್ಕಾರ ಕೋವಿಡ್​ಅನ್ನು ಯಶಸ್ವಿಯಾಗಿ ನಿಭಾಯಿಸಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಸರ್ಕಾರ ಫುಡ್ ಕಿಟ್​ಗಳನ್ನು ವಿತರಿಸಿದ್ದು, ಬಡವರ ಪರ ನಿಂತಿದೆ. ಕಾಂಗ್ರೆಸ್​ನವರು ಏನು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದ್ರು. ನೀವು ಕೆರೆಗಳನ್ನ ತುಂಬಿಸಬೇಕು ಅಂತಾ ದಿವಂಗತ ಉದಾಸಿ ಅಣ್ಣನವರಿಗೆ ಹೇಳಿದ್ರಿ. ಆಗ ಉದಾಸಿ ಅಣ್ಣನವರು ಮತ್ತು ನಾನು ಸೇರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಬಾಳಂಬೀಡ ಮತ್ತು ಹಿರೇಕಾಂಶಿ ಯೋಜನೆ ಜಾರಿಗೊಳಿಸಿದೆವು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬರುವ ವರ್ಷದಲ್ಲಿ ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ರು.

ಕ್ಷೇತ್ರದ ಎಲ್ಲಾ ಜನ್ರು ಅಡಿಕೆ ಬೆಳಿಬೇಕು

ಅಡಿಕೆ ಬೆಲೆ ಗಗನಕ್ಕೇರಿದ್ದು, ಬೆಳೆಗಾರರು ಸಂತಸದಿಂದ್ದಾರೆ. ರೈತರು ನಮ್ಮ ಕ್ಷೇತ್ರದಲ್ಲಿಯೂ ಹೆಚ್ಚಾಗಿ ಅಡಿಕೆ ಬೆಳೆಯಬೇಕು. ತಲೆಗೆ ರೇಷ್ಮೆ, ಕಾಲಿಗೆ ಜರ್ಕಬುರ್ಕ(ಕೊಲ್ಲಾಪುರ) ಚಪ್ಪಲಿ ಹಾಕಿಕೊಳ್ಳಬೇಕು. ನಮ್ಮದು ರೈತಪರ ಸರ್ಕಾರ ಎಂದರು.

ಕಾಂಗ್ರೆಸ್ಸಿಗರು ಬೆಂಜ್ ಕಾರಿನ ಗಿರಾಕಿಗಳು

ಸಿದ್ದರಾಮಯ್ಯ ಕೈಯಲ್ಲಿ ಬಾರುಕೋಲಿದ್ದರೆ, ಡಿಕೆಶಿ ಕೈಯಲ್ಲಿ ಹಗ್ಗ ಇರುತ್ತೆ. ಅವರು ಒಮ್ಮೊಮ್ಮೆ ಸೈಕಲ್ ಮೇಲೆ ಬರ್ತಾರೆ. ಒಮ್ಮೊಮ್ಮೆ ಟಾಂಗಾದಲ್ಲಿ ಬರ್ತಾರೆ. ಇವ್ರೆಲ್ಲಾ ಬೆಂಜ್ ಕಾರಿನ ಗಿರಾಕಿಗಳಾಗಿದ್ದು, ಇವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.

ನಾನು ನಿಮ್ಮ ಮನೆಯ ಮಗ, ಮಣ್ಣಿನ ಮಗ

ನಾನು ನಿಮ್ಮ ಮನೆಯ ಮಗ, ಮಣ್ಣಿನ ಮಗ. ಶಿವರಾಜ ಸಜ್ಜನರಿಗೆ ಮತ ನೀಡಿ. ಶಿವರಾಜ ಸಜ್ಜನರಿಗೆ ಕೊಡುವ ಮತ, ಪ್ರಧಾನಿ ಮೋದಿ, ಬಿಎಸ್​ವೈಗೆ ನೀಡಿದಂತೆ. ದಯವಿಟ್ಟು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದ್ರು.

ನಾವು ಈ ಭೂಮಿಯ ಮೇಲೆ ಆಳವಾಗಿ ಬೇರು ಬಿಟ್ಟವರು

ಸಿದ್ದರಾಮಣ್ಣನವರೇ, ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಾಗ ಕೆರೆಗಳು ತುಂಬಿದ್ದನ್ನು ನೋಡ್ರಿ, ಕೋವಿಡ್ ಆಸ್ಪತ್ರೆಗೆ ಹೋಗಿ ಏನೇನಾಗಿದೆ ನೋಡಿ ಬನ್ನಿ. ಜನರ ವಿಶ್ವಾಸ ಗಳಿಸಿ ಇಲ್ಲಿಗೆ ಬಂದು ನಿಂತಿದ್ದೇವೆ. ನಾವು ಈ ಭೂಮಿಯ ಮೇಲೆ ಆಳವಾಗಿ ಬೇರು ಬಿಟ್ಟವರು. ಇಲ್ಲೇ ಬದುಕುತ್ತೇವೆ, ಇಲ್ಲೇ ಸಾಯ್ತೇವೆ. ನಿಮ್ಮ ಜತೆಗೆ ಬದುಕಿ ಬಾಳಿ, ನಿಮ್ಮ ಜತೆ ಸಾಯೋರಿಗೆ ಮತ ಕೊಡ್ತೀರೋ, ಇಲ್ವೋ ತೀರ್ಮಾನ ಮಾಡಿ ಎಂದರು.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್​ನವರಿಗೆ ನೈತಿಕತೆಯಿಲ್ಲ. ನೀವು ಏನೇನೋ ಹೇಳಿ ಮತ ಗಳಿಸಬೇಕು ಅಂತಾ ಮಾಡಿದ್ದೀರಿ. ಅದು ಈ ಮಣ್ಣಿನಲ್ಲಿ ಸಾಧ್ಯವಿಲ್ಲ. ನಿಮ್ಮ ಮೇಲೆ ಜನರು ವಿಶ್ವಾಸವಿಟ್ಟಿಲ್ಲ ಎಂದು ಪ್ರತಿಪಕ್ಷದವರ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಅಚ್ಛೇದಿನ್ ಬರಲ್ಲ

ಸಿದ್ದರಾಮಯ್ಯನವ್ರು, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡಿದ್ರೆ ದೊಡ್ಡ ಮನುಷ್ಯ ಆಗ್ತಾರೆ ಅಂತಾ ತಿಳ್ಕೊಂಡಿದ್ದಾರೆ. ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯಗೆ ಅಚ್ಛೇದಿನ್ ಬರೋದಿಲ್ಲ. ಕಾಂಗ್ರೆಸ್​ನಲ್ಲಿ ಪಿಸುಮಾತು ಶುರುವಾಗಿದೆ. ಯಾಕೆಂದರೆ, ಸೋನಿಯಾ ಗಾಂಧಿಯವರು, ಸಿದ್ದರಾಮಯ್ಯಗೆ ದಿಲ್ಲಿಗೆ ಬರುವಂತೆ ಹೇಳಿದ್ರು. ದೆಹಲಿ ಬದಲು ಇಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸಿದ್ದರಾಮಯ್ಯ ಪಿಸುಮಾತು ಶುರು ಮಾಡಿದ್ದಾರೆ ಎಂದು ಟಾಂಗ್​ ನೀಡಿದರು.

‘ಕಾಂಗ್ರೆಸ್ ಮುಗಿಸಲು ಕಾಂಗ್ರೆಸ್​ನವರೇ ಸಾಕು’

ಕಾಂಗ್ರೆಸ್​ ಮುಗಿಸಲು ಕಾಂಗ್ರೆಸ್​ನವರೇ ಸಾಕು. 10 ಕೋಟಿ ರೈತ ಕುಟುಂಬಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ಫಲ ಸಿಗುತ್ತಿದೆ ಇದು ಅಚ್ಛೇ ದಿನ ಅಲ್ವಾ?. ಆಯುಷ್ಮಾನ ಭಾರತದಲ್ಲಿ ಸಾಕಷ್ಟು ಹಣ ಖರ್ಚು‌ ಮಾಡಿದ್ದೇವೆ, ಇದು ಅಚ್ಛೇ ದಿನ ಅಲ್ವಾ?. ಜನರಿಗೆ ಇದು ಅಚ್ಛೇ ದಿನ ಬಂದರೆ ಕಾಂಗ್ರೆಸ್​​ನವರಿಗೆ ಸರಿ ಇರೋದಿಲ್ಲ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.