ಹಾವೇರಿ : ಕೊರೊನಾ ಕರಿನೆರಳು ನೇತ್ರದಾನದ ಮೇಲೂ ಬಿದ್ದಿದೆ. ಜಿಲ್ಲೆಯಲ್ಲಿ ಅಂದರ ಬಾಳಿಗೆ ಬೆಳಕಾಗಬೇಕಿದ್ದ ನೂರಾರು ಕಣ್ಣುಗಳು ಮಣ್ಣುಪಾಲಾಗುತ್ತಿವೆ.
ಕೊರೊನಾದಿಂದಾಗಿ ಕೇಂದ್ರ ಸರ್ಕಾರ ನೇತ್ರದಾನ ನಿಷೇಧಿಸಿದ್ದು, ಯಾರೂ ನೇತ್ರದಾನ ಮಾಡುವಂತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಅಧಿಕವಾಗುತ್ತಿದ್ದು,ಕೊರೊನಾ ಕಣ್ಮರೆಯಾಗುವವರೆಗೆ ನೇತ್ರದಾನ ಅಸಾಧ್ಯವಾಗಿದೆ. ಇದರಿಂದಾಗಿ ಕಾರ್ನಿಯಾ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಇನಷ್ಟು ದಿನ ಅಂದರಾಗಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಹಲವು ಸಂಘಟನೆಗಳು ನೇತ್ರದಾನ ಕುರಿತಂತೆ ಜನರಲ್ಲಿ ತಿಳಿವಳಿಕೆ ಮೂಡಿಸಿವೆ. ಸಾವನ್ನಪ್ಪಿದ ನಂತರ ನೇತ್ರದಾನ ಕುರಿತಂತೆ ವಾಗ್ದಾನ ಪತ್ರ ಸಹ ಬರೆಸಿಕೊಂಡಿವೆ. ಆದರೆ, ಈ ರೀತಿ ವಾಗ್ದಾನ ಪತ್ರ ಬರೆಸಿಕೊಂಡ ಸಂಘಟನೆಗಳಿಗೆ ಇದೀಗ ನೇತ್ರದಾನ ಪಡೆಯಲು ಆಗುತ್ತಿಲ್ಲ. ಕೊರೊನಾದಿಂದಾಗಿ ಕೇಂದ್ರ ಸರ್ಕಾರ ನೇತ್ರದಾನ ಮಾಡುವುದನ್ನ ನಿಷೇಧಿಸಿದೆ. ಇದರಿಂದಾಗಿ ನೂರಾರು ಕಣ್ಣುಗಳು ಮಣ್ಣುಪಾಲಾಗುತ್ತಿವೆ. ಇಲ್ಲವೇ ಬೆಂಕಿಗಾಹುತಿಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಅಧಿಕಾರಿಗಳು.
ನೇತ್ರದಾನ ಕಾರ್ನಿಯಾ ಸಮಸ್ಯೆ ಇರುವ ಅಂಧಿರಿಗೆ ಮಹತ್ತರವಾಗಿದೆ. ಮೃತ ವ್ಯಕ್ತಿಗಳಿಂದ ಪಡೆದ ಕಣ್ಣುಗಳನ್ನು ಇವರಿಗೆ ಹಾಕಲಾಗುತ್ತದೆ. ಆದರೆ, ಕೊರೊನಾ ಆರ್ಭಟದ ನಡುವೆ ನೇತ್ರದಾನ ಇಲ್ಲದಂತಾಗಿದೆ. ತಾವು ಕಷ್ಟಪಟ್ಟು ಜನರಲ್ಲಿ ತಿಳಿವಳಿಕೆ ಜಾಗೃತಿ ಮೂಡಿಸಿ ನೇತ್ರದಾನದ ಬಗ್ಗೆ ವಾಗ್ದಾನ ಪತ್ರ ಬರೆಸಿಕೊಂಡಿರುತ್ತೇವೆ. ಆದರೆ ಕೊರೊನಾದಿಂದ ಈ ಎಲ್ಲ ಶ್ರಮ ಹಾಳಾಗಿದೆ. ನೂರಾರು ಕಾರ್ನಿಯಾ ಅಂದರಿಗೆ ಬೆಳಕಾಗ ಬೇಕಿದ್ದ ಕಣ್ಣುಗಳು ಮಣ್ಣುಪಾಲಾಗುತ್ತಿರುವುದು ಬೇಸರ ತರಿಸಿದೆ ಎನ್ನುತ್ತಾರೆ ಸಂಘಟಕರು. ಜಿಲ್ಲೆಯಲ್ಲಿ ವರ್ಷಕ್ಕೆ 40 ಜನರಾದರೂ ನೇತ್ರದಾನ ಮಾಡುತ್ತಿದ್ದರು. ಆದರೆ, ಕಳೆದ ಮೂರು ತಿಂಗಳಿಂದ ನೇತ್ರದಾನ ಮಾಡುವಂತಿಲ್ಲ. ಇದರಿಂದಾಗಿ ಕೊರೊನಾ ವಾಗ್ದಾನ ಪತ್ರ ಬರೆದು ಸಾವನ್ನಪ್ಪಿದವರು ನೇತ್ರ ತಗೆಯದಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನೇತ್ರದಾನ ಸಂಘಟಕರು.
ರಕ್ತದಾನಕ್ಕೂ ಬ್ರೇಕ್ : ಕೊರೊನಾದಿಂದ ನೇತ್ರದಾನ ಅಷ್ಟೇ ಅಲ್ಲ ರಕ್ತದಾನ ಸಹ ಬಂದ್ ಆಗಿದೆ. ವೈಯಕ್ತಿಕವಾಗಿ ವ್ಯಕ್ತಿಗಳು ರಕ್ತಭಂಡಾರಕ್ಕೆ ಬಂದು ರಕ್ತದಾನ ಮಾಡಿ ಹೋಗುವ ಪರಿಸ್ಥಿತಿ ಇದೆ. ಇದರಿಂದ ಹಿಮೋಪಿಲಿಯಾ, ಅಪಘಾತದಲ್ಲಿ ಗಾಯಗೊಂಡವರು, ಗರ್ಭಿಣಿಯರಿಗೆ ರಕ್ತ ಸಿಗುತ್ತಿಲ್ಲ. ಕೊರೊನಾದಿಂದಾಗಿ ರಕ್ತದಾನ ಶಿಬಿರಗಳು ಸಹ ಬಂದ್ ಆಗಿವೆ. ರಕ್ತ ನೀಡಲು ರಕ್ತದಾನಿಗಳ ಸಿದ್ದವಾಗಿರುವಾಗ ರಕ್ತದಾನ ಮಾಡದಂತೆ ಪರಿಸ್ಥಿತಿ ನಿರ್ಮಾಣವಾಗಿರುವುದು ಕೊರೊನಾ ಮಾನವೀಯ ಮನಸ್ಸುಗಳಿಗೆ ನೋವು ತಂದಿದೆ.