ETV Bharat / state

ಅಂಗಡಿ ಬಾಡಿಗೆ ಮನ್ನಾ ಮಾಡಲು ಆಗ್ರಹಿಸಿ ಹಾವೇರಿಯಲ್ಲಿ ವರ್ತಕರ ಪ್ರತಿಭಟನೆ

author img

By

Published : Jul 13, 2020, 12:45 PM IST

ಕೋವಿಡ್​ನಿಂದಾಗಿ ವ್ಯಾಪಾರಕ್ಕೆ ಅಡೆತಡೆ ಉಂಟಾಗಿದ್ದು, ಅಂಗಡಿಗಳ ಬಾಡಿಗೆ ಮನ್ನಾ ಮಾಡುವಂತೆ ಹಾವೇರಿ ಬಸ್ ನಿಲ್ದಾಣದ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.

ಹಾವೇರಿಯಲ್ಲಿ ವರ್ತಕರ ಪ್ರತಿಭಟನೆ
ಹಾವೇರಿಯಲ್ಲಿ ವರ್ತಕರ ಪ್ರತಿಭಟನೆ

ಹಾವೇರಿ: ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅಡೆತಡೆ ಉಂಟಾಗಿದ್ದು, ಅಂಗಡಿಗಳ ಬಾಡಿಗೆ ಮನ್ನಾ ಮಾಡುವಂತೆ ಬಸ್ ನಿಲ್ದಾಣದ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.

ಕೋವಿಡ್​ನಿಂದಾಗಿ ಮಾರ್ಚ್ ತಿಂಗಳಿನಿಂದ ವ್ಯಾಪಾರ ಕುಸಿದಿದೆ. ಬಾಡಿಗೆ ದುಪ್ಪಟ್ಟು ಕೇಳುತ್ತಾರೆ. ನಮಗೆ ಜೀವನ ನಡೆಸುವುದೇ ಕಷ್ಟವಾಗಿದ್ದು, ಅಂಗಡಿ ಬಾಡಿಗೆ ಮನ್ನಾ ಮಾಡಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ. ಎಲ್ಲಾ ಅಂಗಡಿಗಳ ಮುಂದೆ ಭಿತ್ತಿಪತ್ರ ಅಂಟಿಸಿದ ವರ್ತಕರು, ಬಾಡಿಗೆ ಮನ್ನಾ ಆಗುವವರೆಗೂ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಹಾವೇರಿಯಲ್ಲಿ ವರ್ತಕರ ಪ್ರತಿಭಟನೆ

ಸಂಕಷ್ಟದ ಸಂದರ್ಭದಲ್ಲಿ ನಾವು ಅಂಗಡಿ ತೆರೆದಿದ್ದೆವು. ಆದರೆ ಸಾರಿಗೆ ಅಧಿಕಾರಿಗಳು ಬಾಡಿಗೆ ಕಟ್ಟುವಂತೆ ಪೀಡಿಸುತ್ತಿದ್ದಾರೆ. ಕೊರೊನಾದಿಂದ ವ್ಯಾಪಾರ ಇಳಿಕೆಯಾಗಿದ್ದು, ವಹಿವಾಟು ಸುಧಾರಿಸುವವರೆಗೆ ತಮ್ಮ ಮಳಿಗೆಗಳ ಬಾಡಿಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.