ಹಾವೇರಿ: ಹೆಣ್ಣು ನೋಡಲು ಹೊರಟವರು ಹೆಣವಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಕ್ರಾಸ್‌ನಲ್ಲಿ ನಡೆದಿದೆ.
ಹೊಸರಿತ್ತಿಯ 28 ವರ್ಷದ ಜಗದೀಶ ದೀಪಾಳಿ ಮತ್ತು ಅವರ ಚಿಕ್ಕಪ್ಪ ಹನುಮಂತಪ್ಪ ದೀಪಾಳಿ (60) ಮೃತಪಟ್ಟವರು ಎನ್ನಲಾಗಿದೆ. ಮೂಲತಃ ಹೊಸರಿತ್ತಿಯವರಾದ ಇವರು ಕನ್ಯೆ ನೋಡಲು ಇಂದು ರಾಣೆಬೆನ್ನೂರಿಗೆ ಹೊರಟಿದ್ದರು. ಚೌಡಯ್ಯದಾನಪುರ ಕ್ರಾಸ್ ಬಳಿ ಗುತ್ತಲಕ್ಕೆ ಬರುತ್ತಿದ್ದ ಸಾರಿಗೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಿಕ್ಕಪ್ಪ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಜಗದೀಶ್ ಇಂದು ಕನ್ಯೆ ನೋಡಲು ರಾಣೆಬೆನ್ನೂರಿಗೆ ಬೈಕ್‌ನಲ್ಲಿ ತನ್ನ ಚಿಕ್ಕಪ್ಪ ಹನುಮಂತಪ್ಪನನ್ನ ಕರೆದುಕೊಂಡು ಹೊರಟಿದ್ದ. ಆದರೆ ಇದೀಗ ಬಾರದ ಲೋಕಕ್ಕೆ ತೆರಳಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತಂತೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.