ETV Bharat / state

9ಲಕ್ಷ ಕೊಟ್ಟು ತಂದ ಹೋರಿಗೆ ಹರ್ಷನ ಹೆಸರು.. 'ರಾಣೆಬೆನ್ನೂರು ಕಾ ರಾಜ' ಜೊತೆ ಸಮಯ ಕಳೆದ ಹರ್ಷ ಕುಟುಂಬ

ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷನ ಹೆಸರಿಟ್ಟ ಹೋರಿ ಏಳು ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದು, ಏಳರಲ್ಲೂ ಬಂಗಾರದ ಉಂಗುರ, ಗಣೇಶ ಲಾಂಚನ, ಬೈಕ್ ಚಕ್ಕಡಿ ಸೇರಿದಂತೆ ವಿವಿಧ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಹೋರಿಗೆ ಈ ರೀತಿ ಹೆಸರಿಟ್ಟಿರುವುದು ಹರ್ಷ ಅವರ ಕುಟುಂಬಕ್ಕೆ ಸಹ ಸಂತಸ ತಂದಿದೆ.

Ranebennuru Ka raja
ಪ್ರಕಾಶ ಬುರಡಿಕಟ್ಟಿ ಅವರ ರಾಣೆಬೆನ್ನೂರು ಕಾ ರಾಜಾ
author img

By

Published : Jun 2, 2022, 10:02 AM IST

Updated : Jun 2, 2022, 1:03 PM IST

ಹಾವೇರಿ: ಉತ್ತರಕರ್ನಾಟಕದ ಪ್ರಮುಖ ಜಾನಪದ ಕ್ರೀಡೆಯೆಂದರೆ ಹೋರಿಬೆದರಿಸುವ ಸ್ಪರ್ಧೆ. ಈ ಸ್ಪರ್ಧೆಗಾಗಿ ಅನ್ನದಾತರು ಲಕ್ಷ ಲಕ್ಷ ಹಣ ನೀಡಿ ಹೋರಿಗಳನ್ನು ಸಾಕುತ್ತಾರೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಡೆಯುವ ಹೋರಿಬೆದರಿಸುವ ಸ್ಪರ್ಧೆಯಲ್ಲಿ ತಮ್ಮ ನೆಚ್ಚಿನ ಹೋರಿಗಳೊಂದಿಗೆ ರೈತರು ಪಾಲ್ಗೊಳ್ಳುತ್ತಾರೆ. ಇದಕ್ಕಾಗಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಕಾಶ್​ ಬುರಡಿಕಟ್ಟಿ ಎಂಬ ರೈತ ಕಳೆದ ಡಿಸೆಂಬರ್​ನಲ್ಲಿ ತಮಿಳುನಾಡಿನಿಂದ ಸುಮಾರು 9 ಲಕ್ಷ ರೂಪಾಯಿ ಹಣ ನೀಡಿ ಹೋರಿಯನ್ನು ಖರೀದಿಸಿ ತಂದಿದ್ದಾರೆ.

ಹರ್ಷನ ನೆನಪಿಗೆ ಮರುನಾಮಕರಣ: ಹೋರಿಗೆ ರಾಣೆಬೆನ್ನೂರು ಕಾ ರಾಜಾ ಎಂದು ಹೆಸರಿಟ್ಟಿದ್ದಾರೆ. ಕಳೆದ ಆರು ತಿಂಗಳಿಂದ ಈ ಹೋರಿಯನ್ನು ಸ್ಪರ್ಧೆಗೆ ಬಿಡಲಾಗುತ್ತಿದೆ. ಈ ಹೋರಿಗೆ ಶಿವಮೊಗ್ಗದಲ್ಲಿ ಮೃತಪಟ್ಟ ಹಿಂದೂ ಹೋರಾಟಗಾರ ಹರ್ಷನ ಸವಿನೆನಪಿಗಾಗಿ ಹರ್ಷ ಎಂದು ಮರುನಾಮಕರಣ ಮಾಡಲಾಗಿದೆ. ಈ ಹೆಸರಿಟ್ಟ ನಂತರ ರಾಣೆಬೆನ್ನೂರು ಕಾ ರಾಜಾ ಹಿಂತಿರುಗಿ ನೋಡಿಲ್ಲಾ ಎನ್ನುತ್ತಾರೆ ಪ್ರಕಾಶ್​. ಹರ್ಷನ ಹೆಸರು ಹೊತ್ತ ರಾಣೆಬೆನ್ನೂರು ಕಾ ರಾಜಾ ಇದೀಗ ಹೋರಿಬೆದರಿಸುವ ಸ್ಪರ್ಧೆಯಲ್ಲಿ ಇತಿಹಾಸ ಮಾಡುತ್ತಿದೆ ಎನ್ನುತ್ತಾರೆ ಹೋರಿಯ ಅಭಿಮಾನಿಗಳು. ಹರ್ಷನ ಹೆಸರಿಟ್ಟ ಈ ಹೋರಿ ಅಖಾಡಕ್ಕೆ ಇಳಿದರೆ ಸಾಕು ಎದುರಾಳಿಗಳು ಹಿಂದೆ ಸರಿಯುತ್ತಾರೆ. ಕೊಬ್ಬರಿ ಹರಿಯಲು ಬಂದ ಪೈಲ್ವಾನರು ಸಹ ಹೋರಿ ಹಿಡಿಯಲು ಒಂದು ಸಲ ಯೋಚನೆ ಮಾಡುತ್ತಾರೆ.

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಣೆಬೆನ್ನೂರು ಕಾ ರಾಜನ ಓಟ

ರಾಣೆಬೆನ್ನೂರು ಕಾ ರಾಜಾ ಇದೀಗ ಹರ್ಷನ ಹೆಸರಲ್ಲಿ ಹೆಚ್ಚು ಪ್ರಸಿದ್ಧತೆ ಪಡೆದುಕೊಳ್ಳುತ್ತಿದೆ. ಹರ್ಷನ ಹೆಸರಿಟ್ಟ ಹೋರಿ ಏಳು ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದು, ಏಳರಲ್ಲೂ ಬಂಗಾರದ ಉಂಗುರ, ಗಣೇಶ ಲಾಂಚನ, ಬೈಕ್ ಚಕ್ಕಡಿ ಸೇರಿದಂತೆ ವಿವಿಧ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಹೋರಿಗೆ ಈ ರೀತಿ ಹೆಸರಿಟ್ಟಿರುವುದು ಹರ್ಷ ಅವರ ಕುಟುಂಬಕ್ಕೆ ಸಹ ಸಂತಸ ತಂದಿದೆ.

ಹೋರಿಗೆ ಹರ್ಷನ ಹೆಸರಿಟ್ಟಿರುವುದು ತಿಳಿದ ಹರ್ಷ ಕುಟುಂಬದ ಸದಸ್ಯರು ರಾಣೆಬೆನ್ನೂರಿಗೆ ಆಗಮಿಸಿ ಹೋರಿಯೊಂದಿಗೆ ಸಮಯ ಕಳೆದಿದ್ದಾರೆ. ಹರ್ಷನ ಅಕ್ಕ, ತಂಗಿ, ತಾಯಿ ಮತ್ತು ಸಹೋದರರು ಹರ್ಷ ಹೆಸರಿನ ಹೋರಿ ಜೊತೆ ಸಮಯ ಕಳೆದಿದ್ದು ಮಗನೊಂದಿಗೆ ಸಮಯ ಕಳೆದ ಭಾವನೆಯನ್ನು ತಾಯಿ ವ್ಯಕ್ತಪಡಿಸಿದ್ದಾರಂತೆ.

ವಿಶೇಷ ಅಲಂಕಾರ: ಈ ಹೋರಿಗೆ ಮುಂಜಾನೆಯಾಗುತ್ತಿದ್ದಂತೆ ವಾಕಿಂಗ್ ಮಾಡಿಸಲಾಗುತ್ತದೆ. ನಂತರ ಮುಂಜಾನೆ ಆಹಾರ ನೀಡಿ ಹೋರಿಗೆ ಸ್ನಾನ ಮಾಡಿಸಲಾಗುತ್ತದೆ. ಆದಾದ ನಂತರ ಹೋರಿಗೆ ಪೂಜೆ ಸಲ್ಲಿಸಲಾಗುತ್ತದೆ. ಸ್ಪರ್ಧೆ ಇದ್ದರಂತೂ ಹೋರಿಯ ಅಲಂಕಾರ ಗಮನ ಸೆಳೆಯುತ್ತದೆ. ಕಾಲಿಗೆ ಗೆಜ್ಜೆ, ಕೊಂಬಣಸು, ಜೋಲಾ, ಹಣೆಪಟ್ಟಿ, ಕೊರಳಿಗೆ ಕೊಬ್ಬರಿ ಸರ ಗಂಟೆಗಳ ಸರ, ಈ ರೀತಿ ಸಿಂಗಾರಗೊಂಡ ಹೋರಿಗೆ ಬಲೂನ್‌ಗಳ ಸಿಂಗಾರ ಮಾಡಿದರೆ ಅಲ್ಲಿಗೆ ಒಂದು ಹಂತದ ಅಲಂಕಾರ ಮುಗಿಯುತ್ತೆ.

ಈ ಹೋರಿಗೆ ಅಂತಾನೆ ನೂರಾರು ಅಭಿಮಾನಿಗಳಿದ್ದರೆ ಹೋರಿಯ ಸ್ಪರ್ಧೆ ಎಲ್ಲಿಯಿದ್ದರೂ ಅಭಿಮಾನಿಗಳು ಅಲ್ಲಿ ಹಾಜರಾಗುತ್ತಾರೆ. ತಮ್ಮ ನೆಚ್ಚಿನ ಹೋರಿಯ ಜೊತೆ ಫೋಟೋ ತೆಗೆಸಿಕೊಳ್ಳವವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆಯೇನು ಕಡಿಮೆ ಇಲ್ಲ. ಒಟ್ಟಾರೆಯಾಗಿ ರಾಣೆಬೆನ್ನೂರು ಕಾ ರಾಜಾ ಹೋರಿ ಹರ್ಷನ ಹೆಸರನ್ನು ಸ್ಪರ್ಧೆಯಲ್ಲಿ ಚಿರಾಯು ಮಾಡುತ್ತಿರುವುದು ಹೋರಿ ಮಾಲೀಕ ಪ್ರಕಾಶಗೆ ಸಂತಸ ತಂದಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಖಾಲಿ ಗಾಡಿ ಓಡಿಸುವ ಸ್ಪರ್ಧೆ; ರೈತರಿಗೆ ಹಬ್ಬದ ವಾತಾವರಣ

Last Updated : Jun 2, 2022, 1:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.