ಹಾವೇರಿ: ನವೆಂಬರ್ ಎರಡನೇ ವಾರದಲ್ಲಿ ಅಂತಿಮ ಹೋರಾಟವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಉಗ್ರ ಹೋರಾಟ ನಡೆಸುವ ಒಳಗಾಗಿ ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಸಮಾಜಕ್ಕೆ ಸಿಹಿ ಸುದ್ದಿ ಕೊಡಬೇಕು.
ವಿಜಯದಶಮಿ ಅಥವಾ ದೀಪಾವಳಿ ಒಳಗಾಗಿ ನಮ್ಮ ಬೇಡಿಕೆ ಈಡೇರಿಸಬೇಕು. ಸಮಾಜದ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಸಿಎಂ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಿದರೆ ಸವಣೂರು ಖಾರದಿಂದ ತುಲಾಭಾರ ಮಾಡುತ್ತೇವೆ, ಮಠದಲ್ಲಿ ಸಿಎಂ ಫೋಟೋ ಹಾಕುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಶಿಫಾರಸ್ಸು ಮಾಡಿದ್ದೇ ನಾನು: ಬಿಎಸ್ವೈ
ಮೀಸಲಾತಿ ಹೋರಾಟದಿಂದ ಸಮಾಜ ಮತ್ತಷ್ಟು ಒಗ್ಗಾಟ್ಟಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಸಹ ಅಧಿವೇಶನದಲ್ಲಿ ಸಮಾಜದ ಪರವಾಗಿ ಇರುವುದಾಗಿ ಮಾತು ಕೊಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹಾಕಿ ನವೆಂಬರ್ 2022ರ ಒಳಗಾಗಿ ನಮ್ಮ ಬೇಡಿಕೆ ಅನುಷ್ಠಾನಗೊಳಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ವಿಳಂಬ ನೀತಿ : ಸಿಎಂ ನಿವಾಸದ ಮುಂದೆ ಸತ್ಯಾಗ್ರಹದ ಎಚ್ಚರಿಕೆ