ಹಾವೇರಿ: ಹಾವೇರಿ ಜಿಲ್ಲಾ ಜಿಲ್ಲಾಡಳಿತ ಅವ್ವಾ ಶಿಶುಪಾಲನಾ ಕೇಂದ್ರ ತೆರೆದಿದೆ. ಜಿಲ್ಲಾಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ತಾಯಂದಿರು ತಮ್ಮ 5 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬರುವಾಗ ತಂದುಬಿಡಬಹುದು. ಕೆಲಸ ಮುಗಿಸಿ ಮನೆಗೆ ಹೋಗುವಾಗ ಕರೆದುಕೊಂಡು ಹೋಗಬಹುದು.
ಶಿಶುಪಾಲನಾ ಕೇಂದ್ರದಲ್ಲಿ ಸುಸಜ್ಜಿತ ತೊಟ್ಟಿಲು, ಆಟಿಕೆ ಸಾಮಗ್ರಿ, ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ, ಹಾಲು, ಶುದ್ದ ಕುಡಿಯುವ ನೀರು ಸೇರಿದಂತೆ ದಾದಿಯರ ಸೇವೆಯೂ ಲಭ್ಯ. ಇಲ್ಲಿ ಮಕ್ಕಳನ್ನು ಬಿಟ್ಟು ತಾಯಿ ಯಾವುದೇ ಒತ್ತಡ, ಚಿಂತೆ ಇಲ್ಲದೆ ಕೆಲಸ ಮಾಡಬಹುದು. ಮಗುವಿಗೆ ತಾಯಿ ಸ್ತನ್ಯಪಾನ ಸಹ ಮಾಡಿಸಬಹುದು.
ಮುಂಜಾನೆ 10-30 ರಿಂದ ಸಂಜೆ 5-30 ರವರೆಗೆ ಕೇಂದ್ರ ಕಾರ್ಯನಿರ್ವಹಿಸಲಿದೆ. ಐದು ವರ್ಷದ ಒಳಗಿನ ಮಕ್ಕಳಿಗೆ ಶಿಕ್ಷಣ ನೀಡಲು ಕೇಂದ್ರ ಶಿಕ್ಷಕರನ್ನು ಸಹ ನೇಮಕ ಮಾಡಲಾಗುತ್ತಿದೆ. ಜಿಲ್ಲಾಡಳಿತ ಕಚೇರಿಯಲ್ಲಿ ಕೆಲಸ ಮಾಡುವ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ತಾಯಂದಿರ 8 ಮಕ್ಕಳು ಈ ಕೇಂದ್ರದಲ್ಲಿದ್ದಾರೆ.
ಇದನ್ನೂ ಓದಿ: 89ನೇ ವಸಂತಕ್ಕೆ ಕಾಲಿಟ್ಟ ದೇವೇಗೌಡರು; ಜನ್ಮದಿನಕ್ಕೆ ಶುಭಕೋರಿದ ಪ್ರಧಾನಿ ಮೋದಿ