ETV Bharat / state

ಡಿ.1ರಂದು ಜಾನಪದ ವಿವಿ ಘಟಿಕೋತ್ಸವ: ಕುಲಪತಿ ಭಾಸ್ಕರ್

ಜಾನಪದ ವಿಶ್ವವಿದ್ಯಾಲಯದ ಆರು ಮತ್ತು ಏಳನೇ ಘಟಿಕೋತ್ಸವ ಡಿಸೆಂಬರ್ 1 ರಂದು ನಡೆಯಲಿದೆ.

annual-convocation-of-folklore-university
ಜಾನಪದ ವಿವಿ ಘಟಿಕೋತ್ಸವ ಡಿಸೆಂಬರ್ 1ರಂದು ನಡೆಯಲಿದೆ: ಕುಲಪತಿ ಭಾಸ್ಕರ್
author img

By

Published : Nov 28, 2022, 5:52 PM IST

Updated : Nov 28, 2022, 6:05 PM IST

ಹಾವೇರಿ: ಜಾನಪದ ವಿವಿಯ ಆರು ಮತ್ತು ಏಳನೇಯ ವಾರ್ಷಿಕ ಘಟಿಕೋತ್ಸವ ಡಿಸೆಂಬರ್ 1 ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಆಗಮಿಸಲಿದ್ದಾರೆ ಎಂದು ವಿವಿ ಕುಲಪತಿ ಟಿ.ಎಂ ಭಾಸ್ಕರ್ ತಿಳಿಸಿದರು.

ಡಿ.1ರಂದು ಜಾನಪದ ವಿವಿ ಘಟಿಕೋತ್ಸವ: ಕುಲಪತಿ ಭಾಸ್ಕರ್

ನಗರದಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ವಿವಿಧ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದ 6 ಜನರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತದೆ. ಎರಡು ವರ್ಷಗಳಲ್ಲಿ 515 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅಷ್ಟೂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ವಿವಿಧ ವಿಷಯಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ರಾಜ್ಯಪಾಲರು ಗೌರವಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂ​ಗೆ ಕೇಂದ್ರದ ಪ್ರತಿಕ್ರಿಯೆ

Last Updated : Nov 28, 2022, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.