ಹಾವೇರಿ : ಸವಣೂರು ತಾಲೂಕಿನ ಇಚ್ವಂಗಿ ಗ್ರಾಮದಲ್ಲಿ ವಿಶಿಷ್ಟ ಘಟನೆಯೊಂದು ಜರುಗಿದೆ. ಸಾವಿನಲ್ಲೂ ವೃದ್ಧ ದಂಪತಿ ಒಂದಾಗಿದ್ದಾರೆ. ಪತಿ ತೀರಿಹೋದ ಕೆಲವೇ ಗಂಟೆಗಳಲ್ಲಿ ಪತ್ನಿ ಕೂಡಾ ಸಾವಿಗೀಡಾಗಿದ್ದಾರೆ.
ನಿನ್ನೆ ರಾತ್ರಿ ಬಸಪ್ಪ ಕಂಬಳಿ (87) ಎಂಬುವರು ಸಾವಿಗೀಡಾಗಿದ್ದರು. ಪತಿಯ ಸಾವಿನ ಸುದ್ದಿ ತಿಳಿದು ಕುಸಿದು ಬಿದ್ದಿದ್ದ ಪತ್ನಿ ದ್ಯಾಮವ್ವ (80) ಬೆಳಗಿನ ಜಾವ ಸಾವಿಗೀಡಾಗಿದ್ದಾರೆ. ಇನ್ನು ಬಸಪ್ಪ ಅವರು ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಇವರ ವಿಶೇಷತೆ ಎಂದರೆ ಐವತ್ತೈದು ವರ್ಷಗಳ ಕಾಲ ಜಗಳವಾಡದೇ ದಾಂಪತ್ಯ ಜೀವನ ನಡೆಸಿದ್ದರಂತೆ. ಈ ದಂಪತಿಗೆ ನಾಲ್ಕು ಜನ ಮಕ್ಕಳು, ಹನ್ನೊಂದು ಜನ ಮೊಮ್ಮಕ್ಕಳು ಇದ್ದಾರೆ.