ETV Bharat / state

ಉದ್ಘಾಟನೆಯಾಗದ ಅಂಬೇಡ್ಕರ್ ಸಮುದಾಯ ಭವನ: ಸರ್ಕಾರದ ಬೇಜವಾಬ್ದಾರಿಗೆ ಸ್ಥಳೀಯರ ಆಕ್ರೋಶ

ರಾಣೆಬೆನ್ನೂರು ನಗರದ ಶ್ರೀರಾಮ ನಗರದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ದೊರೆಯದೆ ತನ್ನ ಸೌಂದರ್ಯವನ್ನು ‌ಕಳೆದುಕೊಳ್ಳುತ್ತಿದೆ.

Ambedkar Community bhavan
Ambedkar Community bhavan
author img

By

Published : Feb 12, 2020, 5:00 AM IST

ಹಾವೇರಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಕಲ್ಯಾಣ ವರ್ಗಗಳ ಜನರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ಮಾಡುತ್ತಲೇ ಇದೆ. ಆದರೆ, ಅವುಗಳ ಸರಿಯಾದ ಸದ್ಬಳಕೆಯಾಗದೆ ಹಾಳುಗುತ್ತಿರುವುದು ಸರ್ಕಾರದ ಗಮನಕ್ಕೆ ಬರುತ್ತಿಲ್ಲ.

ಅಂಬೇಡ್ಕರ್ ಸಮುದಾಯ ಭವನ

ಹೌದು, ರಾಣೆಬೆನ್ನೂರು ನಗರದ ಶ್ರೀರಾಮ ನಗರದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ದೊರೆಯದೆ ತನ್ನ ಸೌಂದರ್ಯವನ್ನು ‌ಕಳೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ 2012-13 ನೇ ಸಾಲಿನ ಪರಿಶಿಷ್ಟ ಜಾತಿ ಕ್ರೂಢೀಕೃತ ಅನುದಾನ ಮೂಲಕ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿತ್ತು. ಈ ಕಾಮಗಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರ ಸುಮಾರು 1 ಕೋಟಿ 67 ಲಕ್ಷ ಅನುದಾನವನ್ನು ಬಳಸಿಕೊಂಡು ಸುಸಜ್ಜಿತ ಭವನ ನಿರ್ಮಾಣ ಮಾಡಿದೆ.

ಸುಮಾರು ಏಳು ವರ್ಷಗಳಿಂದ ಅಂಬೇಡ್ಕರ್ ಭವನದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಆಮೆಗತಿಯಲ್ಲಿ ನಿರ್ಮಾಣ ಮಾಡಿದೆ. ಈಗ ಅನುದಾನ ಕೊರತೆಯ ನೆಪ ಹೇಳಿ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿ ಕೈ ತೊಳೆದುಕೊಂಡಿದೆ.

ಸದ್ಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ನೀರಿನ ವ್ಯವಸ್ಥೆ, ತಡೆಗೋಡೆ, ಪಾರ್ಕ್‌ ಇಲ್ಲದೆ ಇರುವ ಕಾರಣ ಸಮಾಜ ‌ಕಲ್ಯಾಣ ಅಧಿಕಾರಿಗಳು ಉದ್ಘಾಟನೆಗೆ ಮುಂದಾಗುತ್ತಿಲ್ಲ. ಇದರಿಂದ ಸಮುದಾಯದ ಅಕ್ಕಪಕ್ಕ ಕಸಕಡ್ಡಿ, ಗಿಡಗಳ ಬೆಳೆದು ನಿಂತಿವೆ.

ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಭವನ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಂಬೇಡ್ಕರ್ ‌ಭವನ ಉದ್ಘಾಟನೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.