ಹಾವೇರಿ: ನಾನು ಬಿಜೆಪಿಗೆ ಬಂದು ತಪ್ಪು ಮಾಡಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಂಸದ ಶಿವಕುಮಾರ್ ಉದಾಸಿ, ಈ ಕುರಿತು ನೀವು ಅವರನ್ನೇ ಕೇಳಬೇಕು. ನಾನು ಒಬ್ಬ ಲೋಕಸಭಾ ಸದಸ್ಯ ಅಷ್ಟೇ, ಪಕ್ಷದ ಬಗ್ಗೆ ಮಾತನಾಡಲು ಅಧ್ಯಕ್ಷರಿದ್ದಾರೆ. ನಾನೊಬ್ಬ ಸಂಸದನಾಗಿ ನನ್ನ ಡೊಮೈನ್‌ನಲ್ಲಿ ಕೆಲಸ ಮಾಡಬೇಕು. ಈ ಬಗ್ಗೆ ಪಕ್ಷದವರು ನನಗೆ ಪ್ರೆಸ್ಮೀಟ್ ಮಾಡು ಅಂದರೆ ಮಾತ್ರ ಮಾಡಬೇಕು ಎಂದು ಹೇಳಿದರು.
ಹಾವೇರಿ ತಾಲೂಕಿನ ಕರ್ಜಗಿ ಮೇಲ್ಸೇತುವೆ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಅವರ ಮಾತೃಭಾಷೆ ಮೊದಲು. ಅಲ್ಲದೇ ಅವರವರ ಮಾತೃಭಾಷೆನೇ ಶ್ರೇಷ್ಠ. ಆದ್ರೆ ಭಾಷಾ ವಿಚಾರ ಇಷ್ಟು ದೊಡ್ಡದಾಗಿ ಸುದ್ದಿ ಯಾಕೆ ಆಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಸಂಸದ ಶಿವಕುಮಾರ್ ಉದಾಸಿ ಅಚ್ಚರಿ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಯಾರದೇ ಹೆಸರು ಬಂದರೂ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ
ಪಿಎಸ್ಐ ನೇಮಕಾತಿ ಮರುಪರೀಕ್ಷೆ ವಿಚಾರ ಕುರಿತಂತೆ ಮಾತನಾಡಿದ ಅವರು, ಸರ್ಕಾರ ಈ ಕುರಿತು ನಿರ್ಧಾರ ಕೈಗೊಂಡಿದೆ. ಅದರ ಜೊತೆಗೆ ತನಿಖೆ ಸಹ ನಡೆಯುತ್ತಿದೆ. ತಪ್ಪು ಮಾಡಿದವರನ್ನ ಬಿಟ್ಟು ಬೇರೆಯವರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಸರ್ಕಾರ ಹೊಸ ಅಭ್ಯರ್ಥಿಗಳನ್ನ ಸೇರ್ಪಡೆ ಮಾಡಲ್ಲ ಎಂದು ಹೇಳಿದೆ. ಇದರಲ್ಲಿ ಅಪ್ರಮಾಣಿಕರು ಹೊರಗೆ ಹೋಗಬೇಕಿದೆ ಎಂದು ಉದಾಸಿ ಹೇಳಿದರು.