ರಾಣೆಬೆನ್ನೂರು: ಮದುವೆಯಾಗಿ 2 ತಿಂಗಳಲ್ಲೇ ಯುವತಿವೋರ್ವಳು ಹೊಟ್ಟೆನೋವು ತಾಳಲಾರದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗೌರಿಶಂಕರ ನಗರದಲ್ಲಿ ನಡೆದಿದೆ.
ರೋಧಾ ಸುರೇಶ ಗೊಲ್ಲರ (22) ಮನೆಯಲ್ಲಿ ನೇಣು ಹಾಕಿಕೊಂಡಿರುವ ಯುವತಿ. ತಹಶೀಲ್ದಾರ್ ಬಸನಗೌಡ ಕೋಟೂರು, ಸಿಪಿಐ ಎಂ.ಐ. ಗೌಡಪ್ಪಗೌಡ್ರ, ಪಿಎಸ್‌ಐ ಪ್ರಭು ಕೆಳಗಿನಮನಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿ ಕುಟುಂಬದವರು ಮುಂಬೈಯಿಂದ ಬಂದ ಮೇಲೆ ತಾಯಿ ಯಲ್ಲಮ್ಮ ಗೋವಿಂದ್ ಅವರು ಬುಧವಾರ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.