ETV Bharat / state

ಜನಾಶೀರ್ವಾದ ಯಾತ್ರೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿರುವುದು ಸರಿಯಲ್ಲ : ನಾರಾಯಣಸ್ವಾಮಿ

ಇಂದಿನ ಕಾಂಗ್ರೆಸ್​​​​ನ ಯಾವ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು?. ಇವತ್ತಿನ ಯಾವ ನಾಯಕರು ಬ್ರಿಟಿಷರ ಗುಂಡೇಟಿಗೆ ಎದೆಕೊಟ್ಟಿದ್ದರು ಎಂಬುದು ತನಿಖೆಯಾಗಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

A Narayanaswamy
ಕೇಂದ್ರ ಸಚಿವ ಎ ನಾರಾಯಣಸ್ವಾಮಿ
author img

By

Published : Aug 19, 2021, 10:37 PM IST

ಹಾವೇರಿ: ಯಾದಗಿರಿ ತಾಲೂಕಿನ ಯರಗೋಳದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ಕಾರ್ಯಕರ್ತರು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸ್ವಾಗತ ಕೋರಿರುವ ಘಟನೆ ಸರಿಯಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಈ ಕುರಿತು ಅವರು ಮಾತನಾಡಿದರು. ಜನಾರ್ಶೀವಾದ ಕಾರ್ಯಕ್ರಮದಲ್ಲಿ ನಡೆದಿರುವ ಘಟನೆಯನ್ನ ಸಮರ್ಥನೆ ಮಾಡುವ ರಾಜಕಾರಣಿ ನಾನಲ್ಲ. ನನಗೆ ನನ್ನದೇ ಆದ ಬದ್ಧತೆ ಇದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ

ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರಿಕೆ ಆಗುತ್ತಿರುವುದರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೆಟ್ರೋಲ್ ದರ ಅಲ್ಲ, ಪೆಟ್ರೋಲ್​ ಅನ್ನೇ ತೆಗೆಯಬೇಕು ಅಂತಾ ನಿರ್ಧಾರ ಮಾಡಿದ್ದೇವೆ. ದೇಶದಲ್ಲಿ ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳ ಬಳಕೆ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

ತನಿಖೆಯಾಗಬೇಕಿದೆ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳ್ತಾರೆ, ನೀವ್ಯಾರೂ ಹೋರಾಡಿ ಸ್ವಾತಂತ್ರ ತಂದುಕೊಟ್ಟಿಲ್ಲ. ಕಾಂಗ್ರೆಸ್‌ನವರೇ ಹೋರಾಡಿ ಸ್ವಾತಂತ್ರ್ಯ ತಂದಿದ್ದು ಎಂದಿದ್ದಾರೆ. ಇಂದಿನ ಕಾಂಗ್ರೆಸ್ಸಿನ ಯಾವ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು?. ಇಂದಿನ ಕಾಂಗ್ರೆಸ್​​​​ನ ಯಾವ ನಾಯಕರು ಬ್ರಿಟಿಷರ ಗುಂಡೇಟಿಗೆ ಎದೆಕೊಟ್ಟಿದ್ದರು ಎಂಬುದು ತನಿಖೆಯಾಗಬೇಕಿದೆ ಎಂದರು.

ಜೆಸಿಬಿಗಳಲ್ಲಿ ನಿಂತು ಪುಷ್ಪಾರ್ಚನೆ: ಜನಾರ್ಶೀವಾದದ ಯಾತ್ರೆಗೆ ಮೊದಲು ನಾರಾಯಣಸ್ವಾಮಿ ವೀರಸೌಧಕ್ಕೆ ತೆರಳಿ ಹುತಾತ್ಮ ಮೈಲಾರ ಮಹದೇವಪ್ಪ, ತಿರಕಪ್ಪ ಮಡಿವಾಳರ ವೀರಯ್ಯ ಹಿರೇಮಠ ಸಮಾದಿಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಮಾದಿಗ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಬಾಂಧವರು ಎರಡು ಜೆಸಿಬಿಗಳಲ್ಲಿ ನಿಂತು ಪುಷ್ಪಾರ್ಚನೆ ಮಾಡಿದ್ದು ಗಮನ ಸೆಳೆಯಿತು.

ಜೇಬಿಗೆ ಕತ್ತರಿ ಹಾಕಿದ ಕಳ್ಳರು: ನಂತರ ಹೊಸಮನಿ ಸಿದ್ದಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಶಿವಶಕ್ತಿ ಫ್ಯಾಲೇಸ್‌ನಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೈಲಾರ ಮಹದೇವಪ್ಪ ಸ್ಮಾರಕದ ಜನಜಂಗುಳಿಯಲ್ಲಿ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ, ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ್ ಕಲಕೋಟಿ ಜೇಬಿಗೆ ಕಳ್ಳರು ಕತ್ತರಿ ಹಾಕಿದ್ದಾರೆ. ಕಲಕೋಟಿಯ ಜೇಬಿನಲ್ಲಿ 15 ಸಾವಿರವನ್ನ ಕದ್ದಿದ್ದಾರೆ. ಇದಲ್ಲದೇ ಐದು ಜನರ ಮೊಬೈಲ್‌ಗಳನ್ನು ಎಗರಿಸಿದ್ದಾರೆ.

ಓದಿ: ತಾಲಿಬಾನ್ ಸಂಸ್ಕೃತಿ ಪರ ಮಾತನಾಡುವವರು ನೈಜ ಮುಸ್ಲಿಂ ಅಲ್ಲ: ಯುಟಿ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.