ETV Bharat / state

ಕೊಟ್ಟಿಗೆ ಗೊಬ್ಬರದಿಂದ ಉತ್ತಮ ಚೆಂಡು ಹೂವು ಬೆಳೆ.. ರೈತನ ಮೊಗದಲ್ಲಿ ಮಂದಹಾಸ!! - Ranebennur

ಜಮೀನು ಹಸನುಗೊಳಿಸುವ ದಿನದಿಂದ ಕೂಲಿ, ಔಷಧಿ ಸಿಂಪಡನೆಗಾಗಿ ₹15 ಸಾವಿರ ಖರ್ಚಾಗಿದೆ. ಅದನ್ನು ತೆಗೆದು ₹70-75 ಸಾವಿರ ಉಳಿತಾಯವಾಗಲಿದೆ. ಜೊತೆಗೆ ಸ್ಥಳೀಯರು ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಹೂವು ಕೇಳಿದಾಗ ಉಚಿತವಾಗಿ ನೀಡುತ್ತಿದ್ದಾರೆ..

Ranebennur
ಚೆಂಡು ಹೂವು
author img

By

Published : Aug 4, 2020, 5:57 PM IST

ರಾಣೇಬೆನ್ನೂರು : ಅಸಮರ್ಪಕ ಮಳೆ, ಅತೀವೃಷ್ಠಿ ಮತ್ತು ಕೋವಿಡ್ ಸೋಂಕಿನ ಸಂಕಷ್ಟದ ನಡುವೆ ರಾಣೇಬೆನ್ನೂರು ತಾಲೂಕಿನ ಮಾಕನೂರು ಗ್ರಾಮದ ರೈತ ಯಲ್ಲಪ್ಪ ಶಿವಪ್ಪ ಸಾರ್ಥಿ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಹೂವುಗಳಲ್ಲಿ ಚೆಂಡು ಹೂವು ಮೂರು ತಿಂಗಳ ಬೆಳೆಯಾಗಿದೆ. ಮೈತುಂಬ ಕೆಲಸ, ಮಿತವಾದ ಖರ್ಚಿನ ಜೊತೆಗೆ ಉತ್ತಮ ಸಂಪಾದನೆಗೆ ಚೆಂಡು ಪುಷ್ಪ ಬೆಳೆ ಸಹಕಾರಿಯಾಗಿದೆ. ತುಂಡು ಭೂಮಿ ಹೊಂದಿರುವ ರೈತರಿಗೆ ಪೂರಕವಾಗಿದೆ. ಈಗ ಅನ್ಲಾಕ್ ಆಗಿರುವುದರಿಂದ ಮಾರುಕಟ್ಟೆ ಸೌಲಭ್ಯ ಕೂಡ ಸಿಗಲಿದೆ. ಕಬ್ಬಿನ ಕೂಳೆಗೆ ಚೆಂಡು ಹೂವಿನ ಸಸಿ ನಾಟಿ ಮಾಡಿದ್ದರಿಂದ ನಿರೀಕ್ಷೆಗೆ ಮೀರಿ ಹುಲುಸಾಗಿ ಬೆಳೆ ಬಂದಿದೆ ಎಂದು ರೈತ ಯಲ್ಲಪ್ಪ ಶಿವಪ್ಪ ಸಾರ್ಥಿ ತಿಳಿಸಿದರು.

ರಸಾಯಾನಿಕ ಗೊಬ್ಬರ ಬಳಸದೇ ಕೊಟ್ಟಿಗೆ ಗೊಬ್ಬರ ಹಾಕಿದ್ದರಿಂದ ಮಣ್ಣಿನ ಫಲವತ್ತತೆ ವೃದ್ಧಿಸಿದೆ. ಇದರಿಂದ ಉತ್ತಮ ಇಳುವರಿ ಬಂದಿದೆ. ಕೀಟ ಬಾಧೆ ನಿಯಂತ್ರಿಸಲು ನಿಗದಿತ ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಿಸಲಾಗುತ್ತಿದೆ. ಮೊದಲು ಸುಮಾರು 500 ಕೆಜಿ ಹೂವು ಸಿಗುತ್ತಿತ್ತು. ಈಗ 3-4 ಟನ್ ದೊರೆಯುತ್ತಿದೆ. ಕಂಪನಿ ಮೂಲಕ ಬೀಜ ಸೇರಿ ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ. ಪ್ರತಿ ಟನ್​ಗೆ 5750 ರೂ. ನಿಗದಿಪಡಿಸಲಾಗಿದೆ. ನಾಲ್ಕು ದಿನಕ್ಕೊಮ್ಮೆ ಹೂವನ್ನು ಸಂಗ್ರಹಿಸಿ ಕಂಪನಿಗೆ ಸಾಗಿಸುತ್ತೇವೆ. ಹಾಗಾಗಿ ನಮಗೆ ಮಾರುಕಟ್ಟೆಗಾಗಿ ಅಲೆಯುವುದು ತಪ್ಪಿದೆ ಎಂದು ಯಲ್ಲಪ್ಪ ವಿವರಿಸಿದರು.

ಕೊಟ್ಟಿಗೆ ಗೊಬ್ಬರದಿಂದ ಉತ್ತಮ ಚೆಂಡು ಹೂವು ಬೆಳೆದ ರೈತ

ಜಮೀನು ಹಸನುಗೊಳಿಸುವ ದಿನದಿಂದ ಕೂಲಿ, ಔಷಧಿ ಸಿಂಪಡನೆಗಾಗಿ ₹15 ಸಾವಿರ ಖರ್ಚಾಗಿದೆ. ಅದನ್ನು ತೆಗೆದು ₹70-75 ಸಾವಿರ ಉಳಿತಾಯವಾಗಲಿದೆ. ಜೊತೆಗೆ ಸ್ಥಳೀಯರು ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಹೂವು ಕೇಳಿದಾಗ ಉಚಿತವಾಗಿ ನೀಡುತ್ತಿದ್ದಾರೆ.

ಸಾಮಾನ್ಯವಾಗಿ ಎಕರೆಗೆ 8-10 ಟನ್ ಹೂವು ಉತ್ಪಾದನೆ ಆಗುತ್ತದೆ. ಆದರೆ, ಯಲ್ಲಪ್ಪ ಅವರ ಜಮೀನು ಫಲತ್ತಾಗಿದ್ದು, ಕಟಾವಿನ ವೇಳೆಗೆ 14-15 ಟನ್ ಹೂವು ದೊರೆಯುವ ನಿರೀಕ್ಷೆಯಿದೆ. ಹೀಗೆ ಮಾಕನೂರಿನಲ್ಲಿ ಸುಮಾರು 48 ಎಕರೆ ಭೂಮಿಯಲ್ಲಿ ಚೆಂಡು ಹೂವು ಬೆಳೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.