ETV Bharat / state

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್​ ಕಿರು ಪರಿಚಯ, ನಡೆದ ಬೆಳವಣಿಗೆಗಳು ಹೀಗಿವೆ..

ಉಕ್ರೇನ್​ನಲ್ಲಿ ಮೃತಪಟ್ಟ ಮೆಡಿಕಲ್ ವಿದ್ಯಾರ್ಥಿ ನವೀನ್​ ಮೃತದೇಹ ಇಂದು ಹಾವೇರಿಯ ಸ್ವಗ್ರಾಮಕ್ಕೆ ಆಗಮಿಸಿದ ಬಳಿಕ ಪೂಜೆ, ಮೆರವಣಿಗೆ ಮಾಡಿ ಪೋಷಕರು ದಾವಣಗೆರೆಯ ಮೆಡಿಕಲ್​ ಕಾಲೇಜಿಗೆ ದೇಹದಾನ ಮಾಡಿದರು.

naveen
ನವೀನ್
author img

By

Published : Mar 21, 2022, 3:08 PM IST

ಹಾವೇರಿ: ರಷ್ಯಾ-ಉಕ್ರೇನ್​ ಯುದ್ಧದಲ್ಲಿ ಮೃತಪಟ್ಟ ನವೀನ್​ ಮೃತದೇಹವನ್ನು ಸ್ವಗ್ರಾಮ ಚಳಗೇರಿಗೆ ತಂದ ಬಳಿಕ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ದಾವಣಗೆರೆಯ ಮೆಡಿಕಲ್​ ಕಾಲೇಜಿಗೆ ದೇಹದಾನ ಮಾಡಲಾಗಿದೆ.

ವಿದ್ಯಾರ್ಥಿ ನವೀನ್‌ ಕುರಿತ ಕಿರು ಪರಿಚಯ ಹಾಗು ನಡೆದ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

  • ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಶೇಖರಗೌಡ ಮತ್ತು ವಿಜಯಲಕ್ಷ್ಮಿ ದಂಪತಿಯ ಎರಡನೇಯ ಪುತ್ರ
  • ನಂಜನಗೂಡಿನಲ್ಲಿ ವ್ಯಾಸಂಗ ಮಾಡಿದ್ದ ನವೀನ್ ಎಸ್​ಎಸ್​ಎಲ್​ಸಿಯಲ್ಲಿ ಶೇ.97 ಅಂಕ ಗಳಿಸಿದ್ದರು.
  • ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ್ದು ವೈದ್ಯನಾಗುವ ಕನಸು ಕಂಡಿದ್ದರು.
  • ರಾಜ್ಯದಲ್ಲಿ ಎಂಬಿಬಿಎಸ್ ಸೀಟು ಸಿಗದ ಕಾರಣ ಉಕ್ರೇನ್​ನ ಖಾರ್ಕಿವ್‌ ವೈದ್ಯಕೀಯ ಕಾಲೇಜಿಗೆ ಸೇರಿದ್ದರು.​
  • ಉಕ್ರೇನ್​ ಮೇಲೆ ರಷ್ಯಾ ದಾಳಿ ಸಂದರ್ಭದಲ್ಲಿ ಖಾರ್ಕಿವ್‌ನ ಬಂಕರ್​ನಲ್ಲಿ ಉಳಿದುಕೊಂಡಿದ್ದರು.​
  • ಮಾರ್ಚ್​ 1 ರಂದು ಆಹಾರ ತರಲು ಹೊರ ಹೋದಾಗ ಶೆಲ್ ಅಪ್ಪಳಿಸಿ ಮೃತಪಟ್ಟಿದ್ದರು.
  • ನವೀನ್​ ಮೃತನಾಗಿದ್ದ ವಿಷಯ ತಿಳಿಯುತ್ತಿದ್ದಂತೆ ಅವರ ಕುಟುಂಬಕ್ಕೆ ಆಘಾತ
  • ಕುಟುಂಬಕ್ಕೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಕರೆ ಮಾಡಿ ಸಾಂತ್ವನ ಹೇಳಿದ್ದರು.
  • ಕುಟುಂಬಕ್ಕೆ ಸಾಂತ್ವನ ಹೇಳಿದ ಮಠಾಧೀಶರು, ಜನಪ್ರತಿನಿಧಿಗಳು, ಅಧಿಕಾರಿಗಳು
  • ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ರಾಜ್ಯ ಸರ್ಕಾರ
  • ಕೇಂದ್ರ ಸರ್ಕಾರ, ಸಿಎಂ ಬೊಮ್ಮಾಯಿ, ರಾಯಭಾರಿ ಕಚೇರಿ ಅಧಿಕಾರಿಗಳ ಪ್ರಯತ್ನದಿಂದ ಮೃತದೇಹವನ್ನು ಸ್ವಗ್ರಾಮಕ್ಕೆ ತರಲಾಗಿದೆ.
  • ಸೋಮವಾರ ಬೆಂಗಳೂರಿಗೆ ಬಂದ ಪಾರ್ಥಿವ ಶರೀರವನ್ನು ಸಿಎಂ ಬೊಮ್ಮಾಯಿ ಬರಮಾಡಿಕೊಂಡಿದ್ದರು.
  • ನಂತರ ರಸ್ತೆ ಮಾರ್ಗದ ಮೂಲಕ ಪಾರ್ಥಿವ ಶರೀರವನ್ನು ಸ್ವಗ್ರಾಮ ಚಳಗೇರಿಗೆ ತರಲಾಗಿದೆ.
  • ವೀರಶೈವ ಲಿಂಗಾಯತ ವಿಧಿವಿಧಾನದಂತೆ ಮೃತದೇಹಕ್ಕೆ ಪೂಜೆ ಸಲ್ಲಿಕೆ
  • ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
  • ಸಿರಿಗೆರೆ ಶ್ರೀ, ವಚನಾನಂದ ಶ್ರೀ ಸೇರಿದಂತೆ ಹಲವು ಮಠಾಧೀಶರಿಂದ ಅಂತಿಮ ದರ್ಶನ
  • ಸಿಎಂ ಬೊಮ್ಮಾಯಿ, ಸಚಿವ ಶಿವರಾಮ್ ಹೆಬ್ಬಾರ್, ಸಂಸದ ಶಿವಕುಮಾರ್​ ಉದಾಸಿಯಿಂದ ಅಂತಿಮ ದರ್ಶನ

ಇದನ್ನೂ ಓದಿ: 'ಡಾಕ್ಟರ್​ ಆಗಿ ಬರ್ತಿನಿ ಅಂದಿದ್ಯಲ್ಲೊ, ನಿನಗೆ ಸೆಲ್ಯೂಟ್​ ಕಣೋ': ನವೀನ್​ ತಾಯಿಯ ಅಳಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.