ETV Bharat / state

ಯುದ್ಧಪೀಡಿತ ಉಕ್ರೇನ್​ನಲ್ಲಿ ನೀರು, ಆಹಾರ ಸಿಗದೇ ಹಾವೇರಿ ವಿದ್ಯಾರ್ಥಿಗಳ ಪರದಾಟ.. - ಉಕ್ರೇನ್​​ನಲ್ಲಿ ಸಿಲುಕಿಕೊಂಡ ಹಾವೇರಿ ಜಿಲ್ಲೆಯ 8 ವಿದ್ಯಾರ್ಥಿಗಳು

Russia Ukraine War crisis.. ಹಾವೇರಿ ಜಿಲ್ಲೆಯ 8 ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆಯಿಂದ ಯುದ್ಧ ಆಗ್ತಿರೋದ್ರಿಂದ ಅವರು ಆತಂಕದಲ್ಲಿದ್ದಾರೆ. ತಮಗೆ ಸರಿಯಾಗಿ ನೀರು, ಆಹಾರ ಸಹ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

8 students from Haveri district stuck in Ukraine
ಉಕ್ರೇನ್​​ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿ
author img

By

Published : Feb 24, 2022, 5:24 PM IST

Updated : Feb 24, 2022, 5:52 PM IST

ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ಆರಂಭವಾಗಿದೆ. ಈ ಹಿನ್ನೆಲೆ ಅಲ್ಲಿರುವ ಭಾರತೀಯರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಹಾವೇರಿ ಜಿಲ್ಲೆಯ 8 ವಿದ್ಯಾರ್ಥಿಗಳು ಅಲ್ಲಿ ತಮಗೆ ಕುಡಿಯುವ ನೀರು, ಆಹಾರ ಯಾವುದೂ ದೊರೆಯುತ್ತಿಲ್ಲ. ಭಾರತೀಯ ರಾಯಭಾರ ಕಚೇರಿಗೆ ಫೋನ್​ ಮಾಡಿದ್ರೆ ಸ್ಪಂದನೆ ಸಿಗುತ್ತಿಲ್ಲವೆಂದು ತಮ್ಮ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಹಾವೇರಿ ಜಿಲ್ಲೆಯ 8 ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಬೆಳಗ್ಗೆಯಿಂದ ಯುದ್ಧ ಆಗ್ತಿರೋದ್ರಿಂದ ಅವರು ಆತಂಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಉಕ್ರೇನ್​​ನಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳ ಪರದಾಟ

ಇವರಲ್ಲಿ ರಾಣೇಬೆನ್ನೂರು ತಾಲೂಕಿನ 7 ವಿದ್ಯಾರ್ಥಿಗಳು ಮತ್ತು ಬ್ಯಾಡಗಿ ತಾಲೂಕಿನ ಒಬ್ಬ ವಿದ್ಯಾರ್ಥಿ ಇದ್ದಾರೆ. ಸುಮನ್ ವೈಶಾಯರ್, ರಂಜಿತ ಕಲಕಟ್ಟಿ, ಅಮೀತ್ ವೈಶಾಯರ್, ನವೀನ ಗ್ಯಾನಗೌಡರ, ಜೈನ್ ನತುಲ್, ವಸಂತಕುಮಾರ, ಶಿವಲಿಂಗಪ್ಪ ಮತ್ತು ಪ್ರವೀಣ ಅಜರೆಡ್ಡಿ ಎಂಬ ಎಂಟು ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಎಂಬಿಬಿಎಸ್​ ಅಭ್ಯಾಸ ಮಾಡುತ್ತಿದ್ದಾರೆ.

ಮಕ್ಕಳ ಜೊತೆ ವಿಡಿಯೋ ಕಾಲ್ ಮಾಡಿ ಪರಿಸ್ಥಿತಿ ಬಗ್ಗೆ ಪೋಷಕರು ವಿಚಾರಿಸಿದ್ದಾರೆ. ಕಾರ್ಕ್ಯೂ ಇಂಟರ್​ನ್ಯಾಶನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಈ ವಿದ್ಯಾರ್ಥಿಗಳು ಅಭ್ಯಾಸ ಮಾಡ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಓದಿ: ದೇವರ ಪೂಜಾ ಕಾರ್ಯದಲ್ಲಿ ತಾರತಮ್ಯ ಆರೋಪ.. ದೇವಾಲಯಕ್ಕೆ ಬೀಗ ಹಾಕಿದ್ದ ಅರ್ಚಕ ವಜಾ

Last Updated : Feb 24, 2022, 5:52 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.