ETV Bharat / state

ಹಾನಗಲ್ ಉಪಚುನಾವಣೆ.. ನಾಲ್ವರು ಕಣದಿಂದ ಹಿಂದಕ್ಕೆ​.. ಅಂತಿಮ ಅಖಾಡಕ್ಕೆ 13 ಅಭ್ಯರ್ಥಿಗಳು.. - ಹಾನಗಲ್ ಉಪಚುನಾವಣೆ 13 ಜನ ಅಖಾಡದಲ್ಲಿ

ಈ ಮಧ್ಯೆ ಬಿಜೆಪಿಗೆ ತೀವ್ರ ಆತಂಕ ತಂದಿದ್ದ ಸಿ ಆರ್ ಬಳ್ಳಾರಿ ಮನವೊಲಿಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ಸಿ ಆರ್ ಬಳ್ಳಾರಿ ಬುಧವಾರ ನಾಮಪತ್ರ ವಾಪಸ್ ಪಡೆದಿದ್ದಾರೆ..

ಹಾನಗಲ್ ಉಪಚುನಾವಣೆ
ಹಾನಗಲ್ ಉಪಚುನಾವಣೆ
author img

By

Published : Oct 13, 2021, 9:26 PM IST

Updated : Oct 13, 2021, 10:08 PM IST

ಹಾವೇರಿ : ಜಿಲ್ಲೆಯ ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಅಂತಿಮವಾಗಿ ಕಣದೊಳಗೆ 13 ಅಭ್ಯರ್ಥಿಗಳು ಉಳಿದಿದ್ದಾರೆ. ನಾಮಪತ್ರ ವಾಪಸ್ಸಾತಿಗೆ ಕೊನೆಯ ದಿನವಾದ ಇಂದು 4 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಕಣದಲ್ಲಿ 13 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ.

ಹಾನಗಲ್ ಉಪಚುನಾವಣೆ.. ನಾಲ್ವರು ಕಣದಿಂದ ಹಿಂದಕ್ಕೆ

ಬಿಜೆಪಿಯಿಂದ ಶಿವರಾಜ್ ಸಜ್ಜನ್​​, ಕಾಂಗ್ರೆಸ್ಸಿನಿಂದ ಶ್ರೀನಿವಾಸ ಮಾನೆ, ಜೆಡಿಎಸ್‌ನಿಂದ ನಿಯಾಜ್ ಶೇಖ್, ರೈತ ಪಕ್ಷ ಭಾರತದಿಂದ ಫಕ್ಕೀರಗೌಡ ಗಾಜಿಗೌಡ್ರ, ಲೋಕಶಕ್ತಿ ಪಕ್ಷದಿಂದ ಶಿವಕುಮಾರ್ ತಳವಾರ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದಿಂದ ಉಡಚಪ್ಪ ಉದ್ದನಗೌಡ್ರ ಸ್ಪರ್ಧೆಯಲ್ಲಿದ್ದಾರೆ. ಇನ್ನೂ ಏಳು ಪಕ್ಷೇತರರು ಕಣದಲ್ಲಿದ್ದಾರೆ.

ಈ ಮಧ್ಯೆ ಬಿಜೆಪಿಗೆ ತೀವ್ರ ಆತಂಕ ತಂದಿದ್ದ ಸಿ ಆರ್ ಬಳ್ಳಾರಿ ಮನವೊಲಿಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆ ಸಿ ಆರ್ ಬಳ್ಳಾರಿ ಬುಧವಾರ ನಾಮಪತ್ರ ವಾಪಸ್ ಪಡೆದಿದ್ದಾರೆ.

Last Updated : Oct 13, 2021, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.