ETV Bharat / state

ಹಾವೇರಿಯಲ್ಲಿ ಕೊರೊನಾಗೆ ಇಬ್ಬರು ಬಲಿ: ಓರ್ವ ಪೊಲೀಸ್​​​ ಸೇರಿ 6 ಮಂದಿಗೆ ಸೋಂಕು - 6 New coronavirus positive reported in Haveri Including one police man

ಹಾವೇರಿಯಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿಯಾದರೆ ಹೊಸದಾಗಿ 6 ಮಂದಿಗೆ ಕೊರೊನಾ ದೃಢವಾಗಿದೆ. ಇದರಲ್ಲಿ ಓರ್ವ ಪೊಲೀಸ್​ ಕಾನ್ಸ್​ಟೇಬಲ್​​ ಹಾಗೂ ವೈದ್ಯಕೀಯ ಸಿಬ್ಬಂದಿಯೂ ಸೇರಿದ್ದು, ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆಯಾಗಿದೆ.

6 New coronavirus positive reported in Haveri Including one police man
ಹಾವೇರಿಯಲ್ಲಿ ಓರ್ವ ಪೊಲೀಸ್​​​ ಸೇರಿ ಆರು ಮಂದಿಗೆ ಕೊರೊನಾ
author img

By

Published : Jul 7, 2020, 4:53 PM IST

Updated : Jul 7, 2020, 5:48 PM IST

ಹಾವೇರಿ: ಹಾವೇರಿ ಜಿಲ್ಲೆಯ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಣೆಬೆನ್ನೂರಿನ ಓರ್ವ ವ್ಯಕ್ತಿ ಮತ್ತು ಹಾವೇರಿ ತಾಲೂಕಿನ ಗುತ್ತಲದ ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಾಣೆಬೆನ್ನೂರಿನ 55 ವರ್ಷದ ವ್ಯಕ್ತಿಯನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 70 ವರ್ಷದ ಗುತ್ತಲ ಪಟ್ಟಣದ ಸೋಂಕಿತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು.

ಹಾವೇರಿಯಲ್ಲಿ ಓರ್ವ ಪೊಲೀಸ್​​​ ಸೇರಿ ಆರು ಮಂದಿಗೆ ಕೊರೊನಾ

ರಾಣೆಬೆನ್ನೂರು ಸೋಂಕಿತನ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 48 ಜನರನ್ನು ಹೋಮ್​​ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಇಬ್ಬರು ವಾಸವಿದ್ದ ಪ್ರದೇಶವನ್ನು ಸೀಲ್​ಡೌನ್​​ ಮಾಡಲಾಗಿದೆ ಎಂದು ಹಾವೇರಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ತಿಳಿಸಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಜಿಲ್ಲೆಯಲ್ಲಿ ಇಂದು ಮತ್ತೆ 6 ಜನರಿಗೆ ಕೊರೊನಾ ದೃಢವಾಗಿದೆ. ಹಾವೇರಿ ತಾಲೂಕಿನ ನಾಲ್ವರು, ಸವಣೂರು ಮತ್ತು ಹಾನಗಲ್​​ ತಾಲೂಕಿನ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಇದರಲ್ಲಿ ಓರ್ವ ಹಾವೇರಿ ನಗರ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್​​​​​ಗೂ ಕೊರೊನಾ ದೃಢವಾಗಿದೆ. ಅಲ್ಲದೆ ಹಾವೇರಿ ನಗರದ ಖಾಸಗಿ ಆಸ್ಪತ್ರೆಯ ಲ್ಯಾಬ್​ ಟೆಕ್ನಿಷಿಯನ್​​ಗೂ ಕೊರೊನಾ ಕಾಣಿಸಿಕೊಂಡಿದೆ.

ಹಾನಗಲ್ ತಾಲೂಕಿನ ಜಾನಗುಂಡಿಕೊಪ್ಪದ‌ ಗರ್ಭಿಣಿಯಲ್ಲಿಯೂ ಕೊರೊನಾ ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 181ಕ್ಕೆ ಏರಿಕೆ ಕಂಡಿದೆ.

Last Updated : Jul 7, 2020, 5:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.