ಹಾವೇರಿ : ಜಿಲ್ಲೆಯಲ್ಲಿ ಇಂದು 172 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5685 ಕ್ಕೇರಿದೆ.
ಜಿಲ್ಲೆಯಲ್ಲಿ 401 ಜನರು ಗುಣಮುಖರಾಗಿದ್ದಾರೆ. 4 ಜನ ಕೋವಿಡ್ಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ123 ಕ್ಕೇರಿದೆ. ಬ್ಯಾಡಗಿ ತಾಲೂಕಿನಲ್ಲಿ 25, ಹಾನಗಲ್ ತಾಲೂಕಿನಲ್ಲಿ 08, ಹಾವೇರಿ ತಾಲೂಕಿನಲ್ಲಿ 64, ಹಿರೇಕೆರೂರು ತಾಲೂಕಿನಲ್ಲಿ 24 ,ರಾಣೆಬೆನ್ನೂರು ತಾಲೂಕಿನಲ್ಲಿ 26 ಸವಣೂರು ತಾಲೂಕಿನಲ್ಲಿ 05 ಶಿಗ್ಗಾವಿ ತಾಲೂಕಿನಲ್ಲಿ 20 ಜನರಿಗೆ ಕೊರೊನಾ ತಗುಲಿದೆ.
ಜಿಲ್ಲೆಯಲ್ಲಿ 767 ಜನ ಹೋಂ ಐಸೋಲೇಶನ್‌ಲ್ಲಿ, 443 ಸೋಂಕಿತರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.