ETV Bharat / state

Haveri Golibar.. ಹಾವೇರಿ ಗೋಲಿಬಾರ್​ಗೆ 16 ವರ್ಷ.. ಹುತಾತ್ಮ ರೈತರಿಗೆ ಮೌನಾಚರಣೆ ಮೂಲಕ ನಮನ - ಹಸಿರು ಸೇನೆ

ಹಾವೇರಿಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

Wreath laying at Raitha Memorial
ಜಿಲ್ಲಾ ರೈತ ಮುಖಂಡರು ರೈತ ಸ್ಮಾರಕಗೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ
author img

By

Published : Jun 10, 2023, 10:26 PM IST

Updated : Jun 10, 2023, 10:51 PM IST

ಹಾವೇರಿಯಲ್ಲಿ ರೈತ ಹುತಾತ್ಮ ದಿನಾಚರಣೆ ಆಚರಿಸಲಾಯಿತು

ಹಾವೇರಿ: ಇಂದಿಗೆ ಹಾವೇರಿಯಲ್ಲಿ ಗೋಲಿಬಾರ್ ನಡೆದು 16 ವರ್ಷ ಕಳೆದಿವೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ನಗರದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತರು ಭಾಗವಹಿಸುವ ಮೂಲಕ ಬಸ್ ನಿಲ್ದಾಣದ ಬಳಿ ಇರುವ ಹುತಾತ್ಮ ರೈತ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಈ ವೇಳೆ ವಿವಿಧ ರೈತ ಮುಖಂಡರು ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ ಸಲ್ಲಿಸಿದರು.

10 ಜೂನ್ 2008 ರ ಗೋಲಿಬಾರ್‌ನಲ್ಲಿ ಹುತಾತ್ಮರಾಗಿದ್ದ ರೈತ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಅಮರ್​ ರಹೇ ಅಮರ್​ ರಹೇ ಎಂದು ಘೋಷಣೆ ಕೂಗಿದರು. ವಿವಿಧ ರೈತ ಸಂಘದ ಪದಾಧಿಕಾರಿಗಳು ಹುತಾತ್ಮರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಿದರು.

ಹುತಾತ್ಮ ರೈತರಿಗೆ ಜಯಘೋಷ ಹಾಕಿದ ವಿವಿಧ ಸಂಘಟನೆಯ ರೈತರು ಹಸಿರು ಟವೆಲ್ ಬೀಸಿ ಜಯಕಾರ ಹಾಕಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್ ಮಾತನಾಡಿ, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜವಾನರು ದೇಶ ಕಾಯದೆ ಇದ್ದರೇ, ಕಿಸಾನ್ ಒಕ್ಕಲುತನ ಮಾಡದಿದ್ದರೇ ದೇಶ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ. ರೈತ ಬೆಳೆ ಬೆಳೆಯದಿದ್ದರೆ ಊಹಿಸಲಾಗದಷ್ಟು ದೇಶದಲ್ಲಿ ಗಂಡಾಂತರ ಸಮಸ್ಯೆಗಳು ಉದ್ಬವಿಸುತ್ತವೆ ಎಂದರು.

ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಹಿಂದಿನ ಸರ್ಕಾರ ದುರಂಹಕಾರ ಮತ್ತು ದುರಾಡಳಿತದಿಂದ ಎಲ್ಲ ರೈತ ಸಂಘಟನೆಯ ಚಳವಳಿಗಾರರನ್ನು ಎದುರು ಹಾಕಿಕೊಂಡಿತು ಎಂದು ಆರೋಪಿಸಿದರು. ರೈತರ ಪರವಾಗಿ ಹೋರಾಟ ಮಾಡಿದಾಗ ನಮ್ಮ ಜಿಲ್ಲೆಯ ಸಿಎಂ ಬಸವರಾಜ ಬೊಮ್ಮಾಯಿ ರೈತರ ಅಳಲು ಕೇಳಿಸಿಕೊಳ್ಳಲಿಲ್ಲಾ. ರೈತ ವಿರೋಧಿ ಮೂರು ಕಾಯ್ದೆಗಳನ್ನು ವಾಪಸ್​ ತಗೆದುಕೊಳ್ಳಲಿಲ್ಲ. ಹೀಗಾಗಿ ರಾಜ್ಯದ ರೈತ ಸಮುದಾಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಿದೆ ಎಂದು ಹೇಳಿದರು.

ರೈತರನ್ನು ಕಡೆಗಣಿಸಿದರೆ ಸರ್ಕಾರ ಉಳಿಯಲ್ಲ: ಹೊಸ ಸರ್ಕಾರ ಬಂದೈತಿ, ನುಡಿದಂತೆ ನಡೆದುಕೊಳ್ಳಬೇಕು. ಜನರಿಗೆ ಮಾತು ಕೊಟ್ಟಂತೆ ನಡೆದುಕೊಂಡ್ರ ಸರ್ಕಾರ ಉಳಿಯುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಪರ ಕಾಳಜಿ ವಹಿಸಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರನ್ನು ಯಾವುದೇ ಸರ್ಕಾರ ಕಡೆಗಣಿಸಿದರೆ ಬಹಳ ದಿನ ಅಧಿಕಾರದಲ್ಲಿ ಉಳಿಯುವದಿಲ್ಲ ಎಂದು ಅವರು ಅಭಿಮತ ವ್ಯಕ್ತಪಡಿಸಿದರು.

ಬೆಳೆ ವಿಮೆ ಇಡೀ ಕರ್ನಾಟಕದಲ್ಲಿ 680 ಕೋಟಿ ಬಂದ್ರೆ, ಜಿಲ್ಲೆಗೆ 430 ಕೋಟಿ ರೂ. ಬಂದೈತಿ. ರಾಜ್ಯದಲ್ಲಿ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆವಿಮೆ ಬಿಡುಗಡೆಯಾಗಿರುವುದು ರೈತರ ಹೋರಾಟಕ್ಕೆ ಸಂದ ಗೌರವ ಎಂದು ರಾಮಣ್ಣ ಕೆಂಚಳ್ಳೇರ್ ಸಮರ್ಥಿಸಿಕೊಂಡರು.

ಕಾರ್ಯಕ್ರಮಕ್ಕೂ ಮುನ್ನ ರೈತ ಮುಖಂಡರು ಹಾವೇರಿ ಸಮೀಪ ಇರುವ ನೆಲೋಗಲ್‌ನಲ್ಲಿ ಪುಟ್ಟಪ್ಪ ಹೊನ್ನತ್ತಿ ಸಮಾಧಿಗೆ ಮತ್ತು ಹಾವೇರಿಯಲ್ಲಿರುವ ರೈತ ಸಿದ್ದಲಿಂಗಪ್ಪ ಚೂರಿ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.

ಇದನ್ನೂ ಓದಿ:Congress guarantee scheme: ದುಂದುವೆಚ್ಚ ಮಾಡುವವರಿಗೆ 200 ಯುನಿಟ್​​ ಕೊಡಲಾಗುವುದಿಲ್ಲ: ನಮ್ಮ ತಲೆ ನೋವು ನಿಮಗ್ಯಾಕೆ ಎಂದ ಸಿದ್ದರಾಮಯ್ಯ

Last Updated : Jun 10, 2023, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.