ETV Bharat / state

ಹಾಸನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ.. - ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್​

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್​ ಉದ್ಘಾಟಿಸಿದರು.

ಹಾಸನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
author img

By

Published : Sep 29, 2019, 8:29 AM IST

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್​ ಉದ್ಘಾಟಿಸಿದರು.

ಹಾಸನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ..

ಬಳಿಕ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅದರಲ್ಲಿ ಮುಖ್ಯವಾಗಿ ಕನ್ನಡದ ಮೊಟ್ಟ ಮೊದಲ ಶಾಸನವಾದ ಹಲ್ಮಿಡಿ ಶಾಸನ ಸಿಕ್ಕಿರುವುದು ಹೆಮ್ಮೆ ಪಡುವ ವಿಷಯ. ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳ ಸೇರಿದಂತೆ ನಾನಾ ಪ್ರವಾಸಿ ಸ್ಥಳಗಳನ್ನು ಹಾಸನ ಜಿಲ್ಲೆಯಲ್ಲಿ ಕಾಣಬಹುದು. ಹಳೆಯ ಕಾಲದ ದೇವಸ್ಥಾನ ನೋಡಲು ದೂರದ ಸ್ಥಳಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದಾರೆ.

ಸಕಲೇಶಪುರ ತಾಲೂಕಿನಲ್ಲಿ ಕಾಡುಗಳು, ಬೆಟ್ಟ, ಗುಡ್ಡಗಳ ಉತ್ತಮ ಪರಿಸರ ವೀಕ್ಷಣೆಗೆ ಅನೇಕರು ದೂರದ ಸ್ಥಳಗಳಿಂದ ಬರುತ್ತಾರೆ. ಸಕಲೇಶಪುರದಲ್ಲಿರುವ ಕಾಡುಮನೆ ಎಸ್ಟೇಟ್ ಇವೆಲ್ಲಾ ನಮ್ಮ ಕಣ್ಣ ಮುಂದೆ ಇನ್ನು ಹಚ್ಚ ಹಸಿರಾಗಿ ಉಳಿದಿದೆ. ನಾವು ಉಸಿರಾಡುತ್ತಿದ್ದೇವೆ ಎಂದರೇ ಉತ್ತಮ ಪರಿಸರದಿಂದ, ಅದನ್ನು ಸಂರಕ್ಷಣೆ ಮಾಡಲು ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತು ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಇದೇ ವೇಳೆ ನೀಡಲಾಯಿತು. ನಂತರ ಕಲಾಭವನದ ಆವರಣದಲ್ಲಿ ಫಲಾನುಭವಿಗಳಿಗೆ ಪ್ರವಾಸಿಗರನ್ನು ಕೊಂಡುಯ್ಯುವ ನೂತನ ವಾಹನದ ಕೀಗಳನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ವಿತರಿಸಿದರು. ಇದೇ ವೇಳೆ ಪ್ರವಾಸಿ ತಾಣದ ಕುರಿತು ಕಲಾಭವನದ ಆವರಣದಲ್ಲಿ ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ಛಾಯಾಗ್ರಹಕ ಪ್ರಕಾಶ್ ಕ್ಯಾಮೆರಾದಲ್ಲಿ ಸೆರೆಯಾದ ಪೋಟೊೋಗ್ರಫಿಯನ್ನು ವೀಕ್ಷಣೆ ಮಾಡಲಾಯಿತು.

Intro:ಹಾಸನ: ಇಡೀ ವಿಶ್ವವನ್ನೆ ಗಮನಸೆಳೆಯುವ ಪ್ರವಾಸಿ ತಾಣಗಳನ್ನು ಹಾಸನ ಜಿಲ್ಲೆಯಲ್ಲಿ ಕಾಣಬಹುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜು ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅದರಲ್ಲಿ ಮುಖ್ಯವಾಗಿ ಕನ್ನಡದ ಮೊಟ್ಟ ಮೊದಲ ಶಾಸನವಾದ ಹಲ್ಮಿಡಿ ಶಾಸನ ಸಿಕ್ಕಿರುವುದು ಹೆಮ್ಮೆ ಪಡುವ ವಿಷಯ ಎಂದರು. ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳ ಸೇರಿದಂತೆ ನಾನಾ ಪ್ರವಾಸಿ ಸ್ಥಳಗಳನ್ನು ಹಾಸನ ಜಿಲ್ಲೆಯಲ್ಲಿ ಕಾಣಬಹುದು. ಹಳೆಯ ಕಾಲದ ದೇವಸ್ಥಾನ ನೋಡಲು ದೂರದ ಸ್ಥಳಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದಾರೆ. ಸಕಲೇಶಪುರ ತಾಲೂಕಿನಲ್ಲಿ ಕಾಡುಗಳು, ಬೆಟ್ಟ, ಗುಡ್ಡಗಳ ಉತ್ತಮ ಪರಿಸರ ವೀಕ್ಷಣೆಗೆ ಅನೇಕರು ದೂರದ ಸ್ಥಳಗಳಿಂದ ಬರುತ್ತಾರೆ. ಸಕಲೇಶಪುರದಲ್ಲಿರುವ ಕಾಡುಮನೆ ಎಸ್ಟೇಟ್ ಇವೆಲ್ಲಾ ನಮ್ಮ ಕಣ್ಣ ಮುಂದೆ ಇನ್ನು ಹಚ್ಚ ಹಸಿರಾಗಿ ಉಳಿದಿದೆ. ನಾವು ಉಸಿರಾಡುತ್ತಿದ್ದೇವೆ ಎಂದರೇ ಉತ್ತಮ ಪರಿಸರದಿಂದ ಅದನ್ನು ಸಂರಕ್ಷಣೆ ಮಾಡಲು ಹೆಚ್ಚಿನ ಹೊತ್ತು ಕೊಡಬೇಕು ಎಂದು ಸಲಹೆ ನೀಡಿದರು. ಇನ್ನು ಕೆಲ ದಿನಗಳಲ್ಲಿ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆಗೆಯುತ್ತಾರೆ. ದೇವಿ ದರ್ಶನಕ್ಕಾಗಿ ರಾಜ್ಯವಲ್ಲದೇ ದೇಶದ ವಿವಿಧ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಹಾಸನ ಜಿಲ್ಲೆ ಎಂದರೇ ಪ್ರವಾಸೋದ್ಯಮದಲ್ಲಿ ಯಾವುದಕ್ಕೂ ಕಡಿಮೆ ಇಲ್ಲ ಎಂದು ಕಿವಿಮಾತು ಹೇಳಿದರು. ಪ್ರವಾಸಿ ಸ್ಥಳಗಳ ಉದ್ಧಾರಕ್ಕಾಗಿ ಸರಕಾರದಿಂದಲು ಸಾಕಷ್ಟು ಅನುಧಾನಗಳು ಬಿಡುಗಡೆಯಾಗುತ್ತಿದೆ. ಪ್ರತಿ ವರ್ಷ ಟ್ಯಾಕ್ಸಿಗಳನ್ನು ನೀಡಲಾಗುತ್ತಿದ್ದು, ಅದರಂತೆ ಈ ವರ್ಷ ಕೂಡ ಹಲವಾರು ಜನ ನಿರುದ್ಯೋಗಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣೇಗೌಡ ಮಾತನಾಡಿ, ಇಡೀ ವಿಶ್ವವನ್ನೇ ಗಮನಸೆಳೆದ ೧೨ ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯುತ್ತದೆ. ಇದರ ವೀಕ್ಷಣೆಗೆಂದು ಹೊರ ದೇಶಗಳಿಂದ ಬಂದು ಹೋಗುತ್ತಾರೆ. ಉಳಿದಂತೆ ಇಲ್ಲಿ ಹಳೆಯ ಕಾಲದ ದೇವಾಲಯಗಳಾದ ಬೇಲೂರು, ಹಳೇಬೀಡು ಸೇರಿದಂತೆ ಇನ್ನು ಹತ್ತಾರು ದೇವಸ್ಥಾನಗಳು ವಿಶ್ವದಲ್ಲಿಯೇ ಹೆಸರು ಮಾಡಿದೆ ಎಂದು ಹೇಳಿದರು. ಪ್ರವಾಸೊ ತಾಣಗಳನ್ನು ಇನ್ನು ಹೆಚ್ಚಿನ ಅಭಿವೃದ್ಧಿ ಮಾಡುವ ಮೂಲಕ ಪ್ರವಾಸಿಗರಿಗೆ ಒಳ್ಳೆ ವಾತವರಣ ನೀಡಲಿ ಎಂದು ಸಲಹೆ ನೀಡದರು.
ಸರ್ಕಾರಿ ಕಲಾ ಕಾಲೇಜಿನ ಪ್ರಧ್ಯಾಪಕರಾದ ಡಾ|| ವಿಧ್ಯಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸದಲ್ಲಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿರುವ ಶಿಲಾ ಸಂಪತ್ತು ಮತ್ತು ನೈಸರ್ಗಿಕ ಸಂಪತ್ತು ಇದ್ದು, ಅದನ್ನು ಉಳಿಸಿ ಮುಂದಿನ ಪೀಳಿಗೆಗೂ ಕೊಂಡುಯ್ಯುವ ಕೆಲಸ ಮಾಡಬೇಕು ಎಂದರು. ಇಲ್ಲಿನ ಪ್ರವಾಸಿ ಸ್ಥಳಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸುವ ಮೂಲಕ ಜಿಲ್ಲೆಗೆಂದು ದೂರದ ಸ್ಥಳಗಳಿಂದ ಬರುವ ಪ್ರವಾಸಿಗರಿಗೆ ಒಳ್ಳೆಯ ವಾತವರಣ ನೀಡಬೇಕೆಂದು ಕರೆ ನೀಡಿದರು.
ಈಸಂದರ್ಭದಲ್ಲಿ ಪ್ರವಾಸೋದ್ಯಮ ಕರಿತು ನಡೆಸಿದ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಇದೆ ವೇಳೆ ನೀಡಲಾಯಿತು. ನಂತರ ಕಲಾಭವನದ ಆವರಣದಲ್ಲಿ ಫಲಾನುಭವಿಗಳಿಗೆ ಪ್ರವಾಸಿಗರನ್ನು ಕೊಂಡುಯುವ ನೂತನ ವಾಹನದ ಕೀಗಳನ್ನು ಜಿಲ್ಲಾಧಿಕಾರಿ ಆರ್. ಗಿರೀಶ್ ವಿತರಿಸಿದರು. ಇದೆ ವೇಳೆ ಪ್ರವಾಸಿ ತಾನದ ಕುರಿತು ಕಲಾಭವನದ ಆವರಣದಲ್ಲಿ ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ಛಾಯಾಗ್ರಹಕನ ಪ್ರಕಾಶ್ ಕ್ಯಾಮರದಲ್ಲಿ ಸೆರೆಯಾದ ಪೋಟೊಗ್ರಫಿಯನ್ನು ವೀಕ್ಷಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ನಿಂಗೇಗೌಡ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.