ETV Bharat / state

ಹಾಸನದಲ್ಲಿ ಥ್ರಿಲ್ಲಿಂಗ್ ಕಾರ್​ ರೇಸ್​.... ಪುರುಷರಗಿಂತಲೂ ಲೇಡಿ ರೈಡರ್ಸ್​ ಕಮಾಲ್​​!

ಹಾಸನ ಜಿಲ್ಲೆಯಲ್ಲಿ ನಡೆದ ಕಾರ್​ ರೇಸ್​ನಲ್ಲಿ ಮಹಿಳಾ ರೈಡರ್ಸ್​ ತಾವು ಪುರುಷರಿಗಿಂತಲೂ ಕಡಿಮೆ ಇಲ್ಲ ಎನ್ನುರ ರೀತಿಯಲ್ಲಿ ಸ್ಪರ್ಧೆಯಲ್ಲಿ ಭಾಗಿಯಾದರು.

Car race
Car race
author img

By

Published : Mar 23, 2021, 3:45 AM IST

ಹಾಸನ: ಮೊಟಾರ್​ ರೇಸ್​ ಅಂದ್ರೆ ಹಾಗೆ. ಅಲ್ಲಿ ಎದರೆ ನಡುಗಿಸೋ ಥ್ರಿಲ್ಲಿಂಗ್​ ಇರುತ್ತೆ. ರೋಮಾಂಚನಕಾರಿ ಅನುಭವದ ಜತೆ ರೋಚಕತೆ ಇರುತ್ತೆ. ರಸ್ತೆಯಲ್ಲಿ ರಾಕೆಟ್​​ ಓಡಾಡಿದಂತೆ ಗುರಿಯತ್ತ ಮುನ್ನುಗ್ಗೋ ಕಾರುಗಳು, ಧೂಳೆಬ್ಬಿಸುತ್ತಾ ಮಿಂಚಿ ಮಾಯವಾಗೋ ಸವಾರರ ಚಾಣಾಕ್ಷತೆಯ ರೇಡಿಂಗ್ ನೋಡೋದು ಅಂದ್ರೆ ತುದಿಗಾಲಲ್ಲಿ ನಿಂತು ಆಟ ನೋಡಬೇಕೆನಿಸೋ ಕುತೂಹಲ ಇರುತ್ತೆ. ಹಾಸನದಲ್ಲಿ ನಡೆದ ಥ್ರಿಲ್ಲಿಂಗ್ ಕಾರ್ ರೇಸ್​ನಲ್ಲಿ ಮಹಿಳೆಯರು ತಾವು ಪುರುಷರಗಿಂತಲೂ ಕಡಿಮೆ ಇಲ್ಲ ಎಂದು ಕಾರ್ ಓಡಿಸಿ ಕಮಾಲ್ ಮಾಡಿದ್ದಾರೆ.

ಹಾಸನದಲ್ಲಿ ಕಾರ್ ರೇಸ್​, ಮಹಿಳೆಯರ ಅಬ್ಬರ

ಮೊಟಾರ್​ ರೇಸ್ ಅಂದ್ರೆ ಅಲ್ಲಿ ಪುರುಷ ಸ್ಪರ್ಧಿಗಳಿರುತ್ತಾರೆ. ಆದರೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಡೆದ ಮೊಟಾರ್​​ ರೇಸ್​ನಲ್ಲಿ ಲೇಡಿ ರೇಡರ್ಸ್​​ಗಳದ್ದೇ ಅಬ್ಬರ. ಇಲ್ಲಿ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ರು. ಕೊಡಗಿನ ಬೆಡಗಿಯರಾದ ಮೀನಾ ಹಾಗೂ ನಿರ್ಮಲಾ ಮತ್ತು ಸಕಲೇಶಫುರದ ಯುವ ರೇಡರ್ ಬೆಡಗಿ ಜಾಸ್ಮಿನ್ ನೋಡುಗರಿಗೆ ಸಖತ್ ರಂಜಿಸಿದ್ರು. ಇಲ್ಲಿನ ವಿಶಿಷ್ಟ ಟ್ರ್ಯಾಕ್​​ನಲ್ಲಿ ಕಾರ್ ಏರಿ ರೇಸ್​​ಗಿಳಿದ ಕೊಡಗಿನ ಮೀನಾ ಮಿಂಚಿನ ವೇಗದಲ್ಲಿ ಕಾರ್ ಚಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ರೆ ಮತ್ತೊಬ್ಬ ಸುಂದರಿ ರೇಡರ್ ನಿರ್ಮಲಾ ಕೂಡ ತಮ್ಮ ಚಾಣಾಕ್ಷತೆಯಿಂದ ಟ್ರ್ಯಾಕ್​ನಲ್ಲಿ ರೇಸ್​ಗಿಳಿದು ಕಮಾಲ್ ಮಾಡಿದ್ರು.

Car race
ಪುರುಷರಗಿಂತಲೂ ಲೇಡಿ ರೈಡರ್ಸ್​ ಕಮಾಲ್

ಇವರಿಬ್ಬರಿಗಿಂತಲೂ ವೇಗವಾಗಿ ಟ್ರ್ಯಾಕ್​ನಲ್ಲಿ ಕಾರ್​ ಚಲಾಯಿಸಿ ತಾವು ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಸ್ಪರ್ಧೆ ನೀಡಿದ ಜಾಸ್ಮಿನ್​​​ ಗೆಲುವಿನ ನಗೆ ಬೀರಿದರು. ಸಾಮಾನ್ಯವಾಗಿ ರೇಸ್​ಗೆ ಬಂದು ಖುಷಿಪಡ್ತಿದ್ದ ಮಹಿಳಾ ಮಣಿಗಳು ಇದೀಗ ಖುದ್ದಾಗಿ ರೇಸ್​​​ಗೆ ಇಳಿದು ಗಮನ ಸೆಳೆದರು.

ಸಾಹಸಮಯ ಕ್ರೀಡೆಗಳಿಗೆ ಹೆಸರಾದ ಹಾಸನ ಜಿಲ್ಲೆಯಲ್ಲಿ ಮೋಟಾರ್ ಸ್ಪೋರ್ಟ್ಸ್​​​ಗೆ ಉತ್ತೇಜನ ನೀಡುವ ಸಲುವಾಗಿ ಹಾಗೂ ಯುವ ರೇಸರ್​ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಮೊಟಾರ್​ ರೇಸ್​ ಸ್ಪರ್ಧೆ ನಡೆಸಲಾಗುತ್ತದೆ.

Car race
ಹಾಸನದಲ್ಲಿ ನಡೆದ ಕಾರ್​ ರೇಸ್​​

ಸಕಲೇಶಫುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಕಾರ್ ರೇಸ್​​ನಲ್ಲಿ ಮೊದಲಿಗೆ ಪುರುಷರ 800 ಸಿಸಿ, 100 ಸಿಸಿ, 1400 ಸಿಸಿ ಹಾಗು ನಾವೀಸ್ ಕ್ಲಾಸ್, ಓಪನ್ ಕ್ಲಾಸ್ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಟ್ರ್ಯಾಕ್​ನಲ್ಲಿ ರೇಸರ್​ಗಳು ಮಿಂಚಿನ ವೇಗದಲ್ಲಿ ಕಾರ್ ಚಲಾಯಿಸಿದ್ರು. ಕಣ್ಣು ಮಿಟಕಿಸಿ ಬಿಡುವಷ್ಟರಲ್ಲಿ ರಾಕೆಟ್​​ ವೇಗದಲ್ಲಿ ಮುನ್ನುಗ್ಗೋ ರೇಡರ್ಸ್ ಗೆಲುವಿಗಾಗಿ ನಡೆಸೋ ಪೈಪೋಟಿ ಎಲ್ಲರೂ ಕುತೂಹಲದಿಂದ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೇಸ್​​ ಪ್ರಿಯರು ಮಸ್ತ್ ಮಸ್ತ್ ಎಂಜಾಯ್ ಮಾಡಿದ್ರು. ಇದರಲ್ಲಿ 90ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.