ETV Bharat / state

ಗೆಲುವು-ಸೋಲು ಕೇವಲ ತಾತ್ಕಾಲಿಕ.. ಜೆಡಿಎಸ್‌ ಸಾರಥಿ ಹೆಚ್ ಕೆ ಕುಮಾರಸ್ವಾಮಿ - ಮಂತ್ರಿ ಆಸೆಯನ್ನು ನಂಬಿ ಜನ ಮತ ಹಾಕಿದ್ದಾರೆ.

ರಾಜಕೀಯದಲ್ಲಿ ಗೆಲುವು ಸೋಲು ಶಾಶ್ವತವಲ್ಲ. ಕೇವಲ ತಾತ್ಕಾಲಿಕ ಮಾತ್ರ. ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂಬ ಕಾರಣಕ್ಕಾಗಿ ಜನ ಅವರನ್ನು ಗೆಲ್ಲಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.

H.K.Kumarswamy
ಹೆಚ್.ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
author img

By

Published : Dec 14, 2019, 10:07 PM IST

ಹಾಸನ : ರಾಜ್ಯದ ಜನ ಸ್ಥಿರ ಸರ್ಕಾರ ಬಯಸಿದ್ದರಿಂದಲೇ ಬಿಜೆಪಿ ಬೆಂಬಲಿಸಿದ್ದಾರೆ. ಅನರ್ಹ ಶಾಸಕರ ಪೈಕಿ 12 ಜನ ಗೆಲ್ಲಬೇಕೆಂದರೆ ಚುನಾವಣೆಗೂ ಮುನ್ನ ಸಿಎಂ ಯಡಿಯೂರಪ್ಪ ತೋರಿದ ಮಂತ್ರಿ ಆಸೆ ನಂಬಿ ಜನ ಮತ ಹಾಕಿದ್ದಾರೆ. ಇಂದು ಗೆದ್ದ ಶಾಸಕರದ್ದು ತಾತ್ಕಾಲಿಕ ಗೆಲುವಾಗಿದೆ. ನಮ್ಮ ಸೋಲು ಕೂಡ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಸಂಘಟನೆ ಮೂಲಕ ಪಕ್ಷ ಬಲಪಡಿಸಿ ಚುನಾವಣೆ ಎದುರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸದರು.

ಹೆಚ್ ಕೆ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಬಿಜೆಪಿಯವರು ಜನರಿಗೆ ಅನೇಕ ಆಮಿಷವೊಡ್ಡಿ ಚುನಾವಣೆ ನಡೆಸಿದ್ದಾರೆ. ಈಗ ಬಿಜೆಪಿಗೆ ಸಂಪೂರ್ಣ ಬೆಂಬಲವಿದೆ. ಅಭಿವೃದ್ಧಿ ಮಾಡಿ ತೋರಿಸಲಿ. ಚುನಾವಣೆ ಸೋಲಿನ ಬಗ್ಗೆ ಈಗಾಗಲೇ ನಮ್ಮ ವರಿಷ್ಠರ ಜೊತೆ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದೇವೆ. 1989ರಲ್ಲಿ ನಾವು ಕೇವಲ 2 ಸ್ಥಾನಗಳನ್ನ ಗೆದ್ದಿದ್ದೆವು. ನಂತರ 1994ರ ಹೊತ್ತಿಗೆ 116 ಸ್ಥಾನಗಳನ್ನು ಗೆಲ್ಲುವ ಮುಖಾಂತರ ಆಡಳಿತ ಹಿಡಿದೆವು. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದರು.

ಜೆಡಿಎಸ್‌ನ ಕೆಲ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು. ಯಾರೂ ಕೂಡ ಪಕ್ಷ ಬಿಡುವುದಿಲ್ಲ. ಪಕ್ಷ ಬಿಟ್ಟರೆ ಎದುರಾಗುವ ಸವಾಲುಗಳು ಎಲ್ಲರಿಗೂ ತಿಳಿದಿದೆ. ಉಪ ಚುನಾವಣೆ ಫಲಿತಾಂಶ ನನಗೂ ವೈಯಕ್ತಿಕವಾಗಿ ಬೇಸರವಾಗಿದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುದು ಊಹಾಪೋಹ. ನಮ್ಮ ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಜೆಡಿಎಸ್ ಯುವ ರಾಜ್ಯಾಧ್ಯಕ್ಷರ ಸ್ಥಾನವನ್ನ ನಿಖಿಲ್ ಕುಮಾರಸ್ವಾಮಿಯವರು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಅದನ್ನು ಬದಲಿಸುವ ಯಾವ ಪ್ರಸ್ತಾಪವೂ ನಮ್ಮ ಮುಂದಿಲ್ಲ ಎಂದರು.

Intro:ಹಾಸನ : ರಾಜ್ಯದ ಜನತೆ ಒಂದೇ ಸ್ಥಿರ ಸರ್ಕಾರ ಬಯಸಿದ್ದರಿಂದಲೇ ಬಿಜೆಪಿ ಪಕ್ಷವನ್ನ ಬೆಂಬಲಿಸಿದ್ದಾರೆ. ಅನರ್ಹ ಶಾಸಕರ ಪೈಕಿ ೧೨ ಜನ ಗೆಲ್ಲಬೇಕೆಂದರೆ ಚುನಾವಣೆಗೂ ಮುನ್ನ ಸಿಎಂ ಯಡಿಯೂರಪ್ಪ ತೋರಿದ ಮಂತ್ರಿ ಆಸೆಯನ್ನು ನಂಬಿ ಜನ ಮತ ಹಾಕಿದ್ದಾರೆ. ಇಂದು ಗೆದ್ದ ಶಾಸಕರದ್ದು ತಾತ್ಕಾಲಿಕ ಗೆಲುವಾಗಿದ್ದು ಸೋತಿರುವ ನಮ್ಮ ಸೋಲು ಕೂಡ ತಾತ್ಕಾಲಿಕವಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆ ಮೂಲಕ ಪಕ್ಷ ಬಲಪಡಿಸಿ ಚುನಾವಣೆ ಎದುರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸದರು.

ಬಿಜೆಪಿಯವರು ಜನರಿಗೆ  ಅನೇಕ ಆಮಿಷ ಒಡ್ಡಿ ಚುನಾವಣೆ ನಡೆಸಿದ್ದಾರೆ. ಅನರ್ಹ ಶಾಸಕರು ಕೂಡ ಪಕ್ಷ ಬಿಟ್ಟಿರುವ ಕಾರಣ ಎಲ್ಲರಿಗೂ ತಿಳಿದಿದೆ. ಈಗ ಬಿಜೆಪಿಗೆ ಸಂಪೂರ್ಣ ಬೆಂಬಲವಿದ್ದು ಅಭಿವೃದ್ಧಿ ಮಾಡಿ ತೋರಿಸಲಿ. ಚುನಾವಣೆ ಸೋಲಿನ ಬಗ್ಗೆ ಈಗಾಗಲೇ ನಮ್ಮ ವರಿಷ್ಠರ ಜೊತೆ  ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದೇವೆ. ೧೯೮೯ ರಲ್ಲಿ ನಾವು ಕೇವಲ ೨ ಸ್ಥಾನಗಳನ್ನ ಗೆದ್ದಿದ್ದೆವು. ನಂತರ ೧೯೯೪ ರ ಹೊತ್ತಿಗೆ ೧೧೬ ಸ್ಥಾನಗಳನ್ನು ಗೆಲ್ಲುವ ಮುಖಾಂತರ ಆಡಳಿತ ಹಿಡಿದೆವು. ರಾಜಕೀಯ ನಿಂತ ನೀರಲ್ಲ ಹರಿಯುವ ನೀರಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜಿಲ್ಲಾ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದರು.

ಜೆಡಿಎಸ್ ನ ಕೆಲ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು. ಯಾರೂ ಕೂಡ ಪಕ್ಷ ಬಿಡುವುದಿಲ್ಲ. ಪಕ್ಷ ಬಿಟ್ಟರೆ ಎದುರಾಗುವ ಸವಾಲುಗಳು ಎಲ್ಲರಿಗೂ ತಿಳಿದಿದೆ. ಉಪ ಚುನಾವಣೆ ಫಲಿತಾಂಶ ನನಗೂ ವೈಯಕ್ತಿಕವಾಗಿ ಬೇಸರವಾಗಿದೆ. ನಾನು ರಾಜ್ಯಾದ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂಬುದು ಊಹಾಪೋಹ. ನಮ್ಮವರಿಷ್ಠರು ನೀಡಿರುವ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಇನ್ನು ಜೆಡೆಎಸ್ ಯುವ ರಾಜ್ಯಾಧ್ಯಕ್ಷರ ಸ್ಥಾನವನ್ನು ನಿಖಿಲ್ ಕುಮಾರಸ್ವಾಮಿಯವರು ಸನರ್ಥವಾಗಿ ನಿಭಾಯಿಸಲಿದ್ದು ಅದನ್ನು ಬದಲಿಸುವ ಯಾವ ಪ್ರಸ್ಥಾಪವೂ ನಮ್ಮ ಮುಂದಿಲ್ಲ ಎಂದರು. ಕೇಂದ್ರ ಸರ್ಕಾರದ ಪೌರತ್ವ ಖಾಯ್ದೆ ಬಗ್ಗೆ ಪ್ರತಿಕ್ರಯಿಸಿದ ಕುಮಾರಸ್ವಾಮಿ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಇಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ ಇಂತಹ ಖಾಯ್ದೆಗಳು ದೇಶಕ್ಕೆ ಮಾರಕ ಎಂದರು.

ಬೈಟ್- ಹೆಚ್.ಕೆ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.