ETV Bharat / state

ಜೆಡಿಎಸ್​​​​ ಭದ್ರಕೋಟೆ ಛಿದ್ರಗೊಳಿಸಿದ ಪ್ರೀತಂ ಗೌಡಗೆ ಸಿಗುತ್ತಾ ಸಚಿವ ಸ್ಥಾನ? - Preetham J gowda

ಮೈತ್ರಿ ಸರ್ಕಾರದ ಪತನದ ನಂತರ ಸರ್ಕಾರ ರಚನೆ ಮಾಡುವಲ್ಲಿ ಸಫಲರಾದ ಬಿ.ಎಸ್.ಯಡಿಯೂರಪ್ಪ ಸದ್ಯ ಸಚಿವ ಸಂಪುಟ ರಚನೆಗೆ ಮುಂದಾಗಿದ್ದಾರೆ. ಹಾಗಾಗಿ ಜೆಡಿಎಸ್​ ಭದ್ರಕೋಟೆಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದ ಪ್ರೀತಂ ಜೆ. ಗೌಡ ಅವರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಚಾರ ಈಗ ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಶಾಸಕ ಪ್ರೀತಂ ಜೆ ಗೌಡ್ರ
author img

By

Published : Aug 18, 2019, 10:55 AM IST

Updated : Aug 18, 2019, 11:56 AM IST

ಹಾಸನ: ಮೈತ್ರಿ ಸರ್ಕಾರ ಬೀಳಿಸಿ ಅಧಿಕಾರಗದ ಗದ್ದುಗೆ ಏರಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್​ ನೀಡಿದೆ. ಅಮಿತ್ ಶಾ ಅಜೆಂಡಾದ ಪ್ರಕಾರ ಯುವ ನಾಯಕತ್ವಕ್ಕೆ ಮನ್ನಣೆ ದೊರೆಯುವುದು ನಿಜವೇ ಆದರೆ ಶಾಸಕ ಪ್ರೀತಂ ಜೆ. ಗೌಡ ಅವರಿಗೆ ಮಂತ್ರಿಗಿರಿ ಸಿಗುತ್ತಾ..? ಸಿಗಲ್ವಾ..? ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿ ನಡಿತಿದೆ.

ಜೆಡಿಎಸ್ ಭದ್ರಕೋಟೆ ಎನ್ನುವ ಪ್ರತಿಷ್ಠೆಗೆ ಪೆಟ್ಟು ಕೊಟ್ಟು ಅದೇ ಕೋಟೆಯಲ್ಲಿ ಕಮಲ ಅರಳಿದೆ. ಜಿಲ್ಲಾ ಕೇಂದ್ರದಲ್ಲಿ ಶಾಸಕನಾಗಿ ವಿಜಯ ಪತಾಕೆ ಹಾರಿಸುವುದು ಸುಲಭದ ಮಾತಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣರ ಪ್ರಭಾವದ ಮುಂದೆ ಹೋರಾಟ ಮಾಡುವುದು ಕಷ್ಟ ಎಂಬಿತ್ಯಾದಿ ಅಳುಕಿನ ನಡುವೆ ಸಮರ್ಥ ಹೋರಾಟ ಮಾಡಿ ಪ್ರೀತಂ ಜೆ. ಗೌಡ ಗೆದ್ದು ಬೀಗಿದ್ದು ಈಗ ಇತಿಹಾಸ.

ಅಂತಹ ಇತಿಹಾಸವನ್ನು ಸೃಷ್ಟಿ ಮಾಡಿದ ಪ್ರೀತಂ ಜೆ. ಗೌಡ ಬಿಜೆಪಿ ವರಿಷ್ಠರ ಪಾಲಿಗೆ ಅತ್ಯಂತ ಪ್ರೀತಿ ಪಾತ್ರದ ನಾಯಕ. ಇದೇ ಕಾರಣಕ್ಕೆ ಪ್ರೀತಂ ಗೌಡ ಚುನಾವಣೆಯಲ್ಲಿ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸ್ವತಃ ಟ್ವೀಟ್ ಮಾಡಿ ಶುಭಾಷಯ ಕೋರಿದ್ದರು. ಇದೀಗ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಪ್ರೀತಂ ಗೌಡರ ಹೆಸರೂ ಸಹ ಇದೆ ಎನ್ನುವ ವಿಚಾರ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದೆ.

ಬಿಜೆಪಿಯನ್ನು ಕಟ್ಟಿ ಬೆಳೆಸಿದ ದಿವಂಗತ ಬಿ.ಬಿ ಶಿವಪ್ಪ, ಕೆ.ಹೆಚ್.ಹನುಮೇಗೌಡ ಸೇರಿದಂತೆ ಮೇರು ನಾಯಕರ ನಡುವೆ ಪ್ರೀತಂ ಅವರ ರಾಜಕೀಯ ಶ್ರದ್ಧೆ, ಸಂಘಟನಾ ಕೌಶಲ್ಯ, ಸೂಕ್ಷ್ಮ ಗ್ರಹಿಕೆಗೆ ಮತ್ತು ಅವಿರತ ಪ್ರಯತ್ನಗಳೇ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿತು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಖಾತೆ ತೆರೆದು ದಾಖಲೆ ಬರೆಯುವಂತೆ ಮಾಡಿತು.

ಸದ್ಯ ಹಿಂಬಾಲಕರು ಮತ್ತು ಅಭಿಮಾನಿಗಳು ಪ್ರೀತಂ ಗೌಡ ಮಂತ್ರಿಯಾಗುತ್ತಾರೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಸದ್ಯದ ಮಟ್ಟಿಗೆ ಜೆಡಿಎಸ್‌ಗೆ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಬೆಳೆಸಲು ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು. ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಬೇಕು ಎನ್ನುವುದು ಜಿಲ್ಲಾ ಮುಖಂಡರ ಒತ್ತಾಯವಾಗಿದೆ.

Intro:ಹಾಸನ: ಅತುರಾತುರದಲ್ಲಿ ಸರ್ಕಾರ ರಚಿಸಿ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾದ ದಿನದಿಂದ ಎಕ್ ದಾ ಟೈಗರ್ ಎಂಬಂತೆ ಒಬ್ಬೊಂಟಿಗರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂತೂ ಇಂತು ಸದ್ಯ ಮೊದಲ ಹಂತದ ಸಚಿವ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಅಮಿತ್ ಶಾ ಅಜೆಂಡಾದ ಪ್ರಕಾರ ಯುವ ನಾಯಕತ್ವಕ್ಕೆ ಮನ್ನಣೆ ದೊರೆಯುವುದು ನಿಜವೇ ಆದ ಪ್ರೀತಂ.ಜೆ.ಗೌಡ ಮಂತ್ರಿಗಿರಿ ಸಿಗುತ್ತಾ..? ಸಿಗಲ್ವಾ..? ಎಂಬ ಚರ್ಚೆ ಜೋರಾಗಿ ನಡಿತಿದೆ.
ಜಿಲ್ಲಾ ರಾಜ ಕಾರಣದಲ್ಲಿ ಈಗಾಗಲೇ ಬದಲಾವಣೆಯ ಪರ್ವ ಆರಂಭಗೊಂಡಿದೆ. Body:ಜೆಡಿಎಸ್ ಭದ್ರ ಕೋಟೆ ಎನ್ನುವ ಪ್ರತಿಷ್ಟೆಗೆ ಪೆಟ್ಟು ಕೊಟ್ಟು ಅದೇ ಕೋಟೆ ಯಲ್ಲಿ ಕಮಲ ಅರಳಿದೆ. ಜಿಲ್ಲಾ ಕೇಂದ್ರ ದಲ್ಲಿ ಶಾಸಕನಾಗಿ ವಿಜಯ ಪತಾಕೆ ಹಾರಿಸುವುದು ಹೇಳಿದಷ್ಟು ಸುಲಭದ ಮಾತಲ್ಲಾ. ಮಾಜಿ ಸಚಿವ ಹೆಚ್.ಡಿ ರೇವಣ್ಣರ ಪ್ರಭಾವದ ಮುಂದೆ ಹೋರಾಟ ಮಾಡುವುದು ಕಷ್ಟ ಎಂಬಿತ್ಯಾದಿ ಅಳುಕಿನ ನಡುವೆ ಸಮರ್ಥ ಹೋರಾಟ ಮಾಡಿ ಗೆದ್ದು ಬೀಗಿದ್ದು ಈಗ ಇತಿಹಾಸ.
ಅಂತಹ ಇತಿಹಾಸವನ್ನು ಸೃಷ್ಟಿ ಮಾಡಿದ ಪ್ರೀತಂ. ಜೆ. ಗೌಡ ಬಿಜೆಪಿ ವರಿಷ್ಟರ ಪಾಲಿಗೆ ಅತ್ಯಂತ ಪ್ರೀತಿ ಪಾತ್ರ ನಾಯಕ. ಇದೇ ಕಾರಣಕ್ಕೆ ಪ್ರೀತಂ ಗೌಡ ಚುನಾವಣೆಯಲ್ಲಿ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಶಾ ಸ್ವತಃ ಟ್ವೀಟ್ ಮಾಡಿ ಶುಭಾಷಯ ಕೋರುವ ಮೂಲಕ ಅವರ ರಾಜಕೀಯ ಚತುರತೆಯನ್ನ ಶ್ಲಾಘಿಸಿದ್ದರು.
ಇದೀಗ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಪ್ರೀತಂಗೌಡರ ಹೆಸರೂ ಸಹ ಇದೆ ಎನ್ನುವ ವಿಚಾರ ಜಿಲಾ ರಾಜಕಾರಣ ವಲಯದಲ್ಲಿ ಸಂಚಲನ ಮೂಡಿಸಿರೋದಂತೂ ಸುಳ್ಳಲ್ಲ.
ಬಿಜೆಪಿಯನ್ನು ಕಟ್ಟಿ ಬೆಳೆಸಿದ ದಿವಂಗತ ಬಿ.ಬಿ ಶಿವಪ್ಪ, ಕೆ. ಹೆಚ್ ಹನುಮೇಗೌಡ ಸೇರಿದಂತೆ ಮೇರು ನಾಯಕತ್ವದ ನಡುವೆ ಆಗಿನ್ನೂ ಅಂಬೇಗಾಲಿಟ್ಟಿದ್ದೇನೆ ಎಂಬಂತಿದ್ದ ಪ್ರೀತಂ ಗೌಡ ನೋಡ ನೋಡುತ್ತಿದ್ದಂತೆ ಮಂಚೂಣಿ ಸಾಲಿಗೆ ಬೆಳೆದು ನಿಂತರು.
ರಾಜಕೀಯದಲ್ಲಿ ಯಾವುದೇ ಇತರ ಸೆಳೆತಗಳಿಗೆ ಒಳಗಾಗದೇ, ವೈಯುಕ್ತಿಕ ಹಣವನ್ನು ಸಮಾಜ ಸೇವೆಯಲ್ಲಿ ತೊಡಗಿಸಿ, ಮನೆ ಮನೆಗೆ ತೆರಳಿ ಜನಮನ ಗೆದ್ದರು. ಇದು ಅವರ ರಾಜಕೀಯ ಶ್ರದ್ದೆ, ಸಂಘಟನಾ ಕೌಶಲ್ಯ, ಸೂಕ್ಷ್ಮಗ್ರಹಿಕೆಗೆ ಸಾಕ್ಷಿ. ಇಂತಹ ಅವಿರತ ಪ್ರಯತ್ನಗಳೇ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿತು.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಖಾತೆ ತೆರೆದು ದಾಖಲೆ ಬರೆಯುವಂತೆ ಮಾಡಿತು. Conclusion:ಪ್ರೀತಂಗೌಡರ ರಾಜಕೀಯ ಪಯಣದ ಜೊತೆ ಹೆಜ್ಜೆ ಹಾಕಿದ ಬಹಳಷ್ಟು ಮಂದಿಗೆ ಸಾಧ್ಯದ ರಾಜಕೀಯ ಬೆಳವಣಿಗೆಗಳಲ್ಲಿ ಅವರು ಮಂತ್ರಿಯಾಗುತ್ತಾರೆ ಎನ್ನುವ ವಿಶ್ವಾಸವಿದೆ.
ಮೈತ್ರಿ ಸರ್ಕಾರದ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಅವನತಿಯ ಅಂಚಿಗೆ ತಲುಪಿರುವ ಕಾರಣ ಜೆಡಿಎಸ್ ವಿರೋದಿ ಮನಸ್ಸುಗಳು ಪ್ರೀತಂ ಗೌಡರತ್ತ ವಾಲುತ್ತಿರುವುದು ಗುಟ್ಟಿನ ಮಾತೇನಲ್ಲಾ. ವಿಧಾನ ಸಭಾ ಚುನಾವಣೆ ನಡೆದಾಗ, ಹಾಸ ಸೇರಿದಂತೆ ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಮತಗಳಿಕೆಯನ್ನು ಗಮನಿಸಿದರೆ ಜಿಲ್ಲೆಯಲ್ಲಿ ಬಿಜೆಪಿಯ ಬೇರುಗಳು ದೃಢವಾಗಿವೆ. ಅದರ ಕಬಂದ ಬಾಹುಗಳು ಜಿಲ್ಲೆಯನ್ನು ವ್ಯಾಪಿಸುತ್ತಿವೆ ಎನ್ನುವುದಂತೂ ಸತ್ಯ. ಸದ್ಯದ ಮಟ್ಟಿಗೆ ಜೆಡಿಎಸ್‌ಗೆ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಬಿಜೆಪಿಯನ್ನು ಶಕ್ತಿಯುತವಾಗಿ ಬೆಳೆಸಲು ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕು. ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಬೇಕು ಎನ್ನುವುದು ಜಿಲ್ಲಾ ಮುಖಂಡರ ಒತ್ತಾಯ.
ಇನ್ನೂ ರಾಜ್ಯ ಹಾಗು ರಾಷ್ಟ್ರ ಮಟ್ಟದ ಆರ್.ಎಸ್.ಎಸ್ ಮುಖಂಡರೂ ಕೂಡ ಪ್ರೀತಂ ಗೌಡರ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದ್ದು, ಎಲ್ಲವೂ ಅಂದುಕೊಂಡತಾದ್ರೆ ಪ್ರೀತಂ ಗೌಡ ಹಾಸನ ಜಿಲ್ಲೆಯ, ಬಿಜೆಪಿಯ ಮೊದಲ ಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Last Updated : Aug 18, 2019, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.