ಹಾಸನ: ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿ ವಿಜಾಪುರ ಫಾರೆಸ್ಟ್ ಗ್ರಾಮ ಪಂಚಾಯಿತಿಗೆ ಸೇರಿದ ಮುದಿಗೆರೆ ಗ್ರಾಮದಲ್ಲಿ ನೀರಿಗಾಗಿ ಜನರು ಪರದಾಡುವಂತಹ ಪರಿಸ್ಥಿತಿ ಉದ್ಬವಿಸಿದೆ.
ನೀರಿನ ಬವಣೆಯನ್ನು ನೀಗಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯೆ ಮೇಘಾ ಯೋಗೇಶ್ ಮತ್ತು ಗ್ರಾಮಸ್ಥರು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅತ್ತ ಪ್ಯಾಕೇಜ್ ಇಲ್ಲ, ಇತ್ತ ಲಾಭವೂ ಇಲ್ಲ: ಸಂಕಷ್ಟಗಳ ಸಂಕೋಲೆಯಲ್ಲಿ ಹೋಟೆಲ್ ಕಾರ್ಮಿಕರು
ಗ್ರಾಮದಲ್ಲಿ ಎರಡು ಮೂರು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಹರಿಸಲಾಗುತ್ತಿದೆ. ಒಮ್ಮೆ ನೀರು ಹರಿಸಿದರೆ ಕೊಡಗಳನ್ನು ಸರತಿ ಸಾಲಿನಲ್ಲಿಟ್ಟು ಗಂಟೆಗಟ್ಟಲೆ ಕಾಯಬೇಕು. ಕೆಲವರು ನೀರು ಸಿಗದೆ ಪರಿತಪಿಸಿ ಹಿಂತಿರುಗಿ ಹೋಗಿರುವ ಘಟನೆಯೂ ನಡೆದಿದೆ. ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಮೇಘಾ ಯೋಗೇಶ್ ಮತ್ತು ಗ್ರಾಮಸ್ಥರು ದೂರಿದರು.