ಅರಕಲಗೂಡು: ನಾಲಾ ಕಾಲುವೆಗಳ ಹೂಳು ತೆಗೆಯದೆ ನೀರು ಹರಿಸಿರುವುದರಿಂದ ಹಲವು ಗ್ರಾಮಗಳ ಜಮೀನುಗಳಿಗೆ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಕ್ಯಾತನಹಳ್ಳಿ, ಮಾದಾಪುರ ಮತ್ತು ಮುಂಡಗೋಡು ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಅಧ್ಯಕ್ಷ ಸೋಮು ಆರೋಪಿಸಿದ್ದಾರೆ.
ನಾಲೆಗಳ ಹೂಳೆತ್ತದೇ ನೀರು ಹರಿಸಿದ್ದಕ್ಕೆ ಆಕ್ರೋಶ ನಾಲಾ ಕಾಲುವೆ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ಕತ್ತಿಮಲ್ಲೇನಹಳ್ಳಿ ವ್ಯಾಪ್ತಿಯ ಮುಂಡಗೋಡು, ಮಾದಾಪುರ ಮತ್ತು ಕ್ಯಾತನಹಳ್ಳಿ ನಾಲಾ ಕಾಲುವೆಗಳ ಹೂಳು ತೆಗೆಯದೆ ಅಕ್ರಮ ಬಿಲ್ ಮಾಡಿಕೊಳ್ಳಲಾಗಿದೆ. ಕೆಲವೆಡೆ ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ. ಹೇಮಾವತಿ ಜಲಾಶಯದಿಂದ ನಾಲಾ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದೆ. ಆದರೆ ಜಲಾಶಯದಿಂದ ಬಿಡಲಾಗಿರುವ ನೀರು ರೈತರಿಗೆ ದಕ್ಕುತ್ತಿಲ್ಲ ಎಂದರು. ಈ ಕುರಿತು ಜನ ಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆಯ ಇಂಜಿನಿಯರ್ಗಳು ತಕ್ಷಣ ಗಮನ ಹರಿಸಬೇಕು , ಇಲ್ಲದಿದ್ದಲ್ಲಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಕರವೇ ಅಧ್ಯಕ್ಷ ಸೋಮು ಎಚ್ಚರಿಸಿದರು.