ETV Bharat / state

ಹಾಸನ: ವೀರಭದ್ರೇಶ್ವರ ರಥೋತ್ಸವಕ್ಕೆ ಹರಿದುಬಂದ ಭಕ್ತ ಸಾಗರ

author img

By

Published : Mar 11, 2020, 11:06 PM IST

ತಾಲೂಕಿನ ನಾಗೇನಹಳ್ಳಿ ಸಮೀಪದ ಕಣದೂರಿನಲ್ಲಿ ಅದ್ಧೂರಿಯಾಗಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಡೆಯಿತು.

veerabadreshwara festival celebration
ಅದ್ಧೂರಿಯಾಗಿ ನಡೆದ ವೀರಭದ್ರೇಶ್ವರ ರಥೋತ್ಸವ

ಹಾಸನ: ತಾಲೂಕಿನ ನಾಗೇನಹಳ್ಳಿ ಸಮೀಪದ ಕಣದೂರಿನಲ್ಲಿ ಅದ್ಧೂರಿಯಾಗಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ನಡೆಯಿತು.

ಅದ್ಧೂರಿಯಾಗಿ ನಡೆದ ವೀರಭದ್ರೇಶ್ವರ ರಥೋತ್ಸವ

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ರಥವನ್ನು ಎಳೆದು, ಹರಕೆ ತೀರಿಸಿದರು. ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಮೂರ್ತಿಯನ್ನು ಇರಿಸಿ, ದೇವಾಲಯದ ಸುತ್ತ ಎಳೆದರು. ಈ ವೇಳೆ ಭಕ್ತರು ಜವನ, ಬಾಳೆಹಣ್ಣು ಮತ್ತು ಮೆಣಸು ಎಸೆದು ತಮ್ಮ ಹರಕೆ ತೀರಿಸಿದರು.

ವೀರಭದ್ರಸ್ವಾಮಿಯ ಮೂಲ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿಯ ರಥೋತ್ಸವ ಅಂಗವಾಗಿ ಪೂಜೆಯ ಕೈಂಕರ್ಯಗಳು ಸೋಮವಾರದಿಂದ ಆರಂಭಗೊಂಡಿದ್ದವು. ಗರಡೋತ್ಸವ, ನಂದಿ ಉತ್ಸವ ಹಾಗೂ ಚಿಕ್ಕತೇರು ಎಳೆದ ನಂತರ ಬ್ರಹ್ಮ ರಥೋತ್ಸವ ನಡೆಯಿತು.

ನಮ್ಮ ಕಣದೂರು ವೀರಭ್ರದಸ್ವಾಮಿ ರಥೋತ್ಸವಕ್ಕೆ ತಾಲೂಕಿನ ಹಲವಾರು ಭಾಗಗಳಿಂದ ಭಕ್ತರು ಆಗಮಿಸಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಶಾಸಕರು ಸಹ ಗಮನಹರಿಸಿ ಕುಡಿಯುವ ನೀರು ,ರಸ್ತೆ ಹಾಗೂ ಸಮುದಾಯ ಭವನಕ್ಕೆ ಹೆಚ್ಚಿನ ಅನುದಾನ ನೀಡಿ ಕಾಯಕಲ್ಪ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್ ಮನವಿ ಮಾಡಿದರು.

ಸಮಿತಿ ಅಧ್ಯಕ್ಷ ಹೆಚ್,ಸಿ,ಸುರೇಶ್, ಮುಖ್ಯ ಅರ್ಚಕ ಯುವರಾಜ್, ಪುಟ್ಟೇಗೌಡ,ಪ್ರಭಾಕರ್, ಯೋಗೇಶ್ ಗೌಡ, ಗೋಪಾಲೇಗೌಡ, ಸತೀಶ್, ಚಂದ್ರೇಗೌಡ, ರವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕೊರಗಜ್ಜ ಕುಣಿತ, ವೀರಭದ್ರ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.