ETV Bharat / state

ಜೆಡಿಎಸ್​​ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್​​ ಕಂಚಿನ ಪ್ರತಿಮೆ ಅನಾವರಣ - bronze statue of former MLA HS Prakash

ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್‌ ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ರಿಂಗ್ ರಸ್ತೆ ಬಳಿಯಿರುವ ಬ್ರಿಲಿಯೆಂಟ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆಯನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅನಾವರಣಗೊಳಿಸಿದರು.

bronze statue of former MLA HS Prakash,ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್‌ ಕಂಚಿನ ಪ್ರತಿಮೆ
ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್‌ ಕಂಚಿನ ಪ್ರತಿಮೆ
author img

By

Published : Nov 27, 2019, 11:01 PM IST

ಹಾಸನ: ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್‌ ಮೊದಲನೇ ವರ್ಷದ ಪುಣ್ಯ ತಿಥಿಯ ಅಂಗವಾಗಿ ರಿಂಗ್ ರಸ್ತೆ ಬಳಿಯಿರುವ ಬ್ರಿಲಿಯೆಂಟ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆಯನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅನಾವರಣಗೊಳಿಸಿದರು.

ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್‌ ಕಂಚಿನ ಪ್ರತಿಮೆ ಅನಾವರಣ

ಸಣ್ಣಯ್ಯ ಹಾಗೂ ರಂಗಮ್ಮ ದಂಪತಿ ಪುತ್ರರಾಗಿ 1951ರ ಸೆಪ್ಟೆಂಬರ್ 13ರಂದು ಹೆಚ್.ಎಸ್. ಪ್ರಕಾಶ್ ಹಾಸನದಲ್ಲಿ ಜನಿಸಿದ್ದರು.1994ರಿಂದ 2013ರವರೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ 4 ಬಾರಿ ಚುನಾಯಿತರಾಗಿದ್ದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಪ್ರಕಾಶ್ ಪರಾಭವಗೊಂಡಿದ್ದರು. 1983ರಲ್ಲಿ ಹಾಸನ ನಗರಸಭಾ ಸದಸ್ಯರಾಗಿ, 1985-87ರಲ್ಲಿ ಹಾಸನ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪುಸ್ತಕ ಓದುವ, ಸಂಗೀತ ಕೇಳುವ ಹವ್ಯಾಸ ಹೊಂದಿದ್ದ ಇವರು, ಕೃಷಿಕರು ಕೂಡ ಆಗಿದ್ದರು. 4 ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದ ಅವರು, ಜನಪ್ರಿಯ ಶಾಸಕರಾಗಿದ್ದರು. ಪತ್ನಿ ಲಲಿತಾ ಪ್ರಕಾಶ್, ಕಂದಲಿ ಕ್ಷೇತ್ರದ ಜಿಪಂ ಸದಸ್ಯ ಹೆಚ್.ಪಿ.ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಸ್. ಅನಿಲ್‌ಕುಮಾರ್, ವಾಸ್ತುಶಿಲ್ಪಿ ಹೆಚ್.ಎಸ್.ದೇವೇಂದ್ರ ಇವರ ಸಹೋದರರು.

2001ರಿಂದ ನಗರದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. 2014ರಲ್ಲಿ ಬಿಜೆಪಿಯ ಪ್ರೀತಂಗೌಡರ ಎದುರು ಪರಾಭವಗೊಂಡಿದ್ದರು. ಮಾಜಿ ಶಾಸಕ ಹೆಚ್.ಎಸ್.ಪ್ರಕಾಶ್ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಇದೀಗ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.

Intro:ಹಾಸನ: ಸರಳ, ಸಜ್ಜನಿಕೆ, ನಗುಮುಖದ ಜೆಡಿಎಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್‌ರವರ ಮೊದಲನೆ ವರ್ಷದ ಪುಣ್ಯ ತಿಥಿಯ ಅಂಗವಾಗಿ ರಿಂಗ್ ರಸ್ತೆ ಬಳಿ ಇರುವ ಬ್ರಲಿಯೆಂಟ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ಕಂಚಿನ ಪ್ರತಿಮೆ ಅನಾವರಣವನ್ನು ಬುಧವಾರ ಬೆಳಿಗ್ಗೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರಿ ಶಂಭುನಾಥ ಸ್ವಾಮೀಜಿ ನೆರವೇರಿಸಿದರು.
ಸಣ್ಣಯ್ಯ ಹಾಗೂ ರಂಗಮ್ಮ ದಂಪತಿ ಪುತ್ರರಾಗಿ ೧೯೫೧ರ ಸೆಪ್ಟೆಂಬರ್ ೧೩ ರಂದು ಹೆಚ್.ಎಸ್. ಪ್ರಕಾಶ್(ಹಾಸನ ಸಣ್ಣಯ್ಯ ಪ್ರಕಾಶ್) ಹಾಸನದಲ್ಲಿ ಜನಿಸಿದ್ದರು. ಕಳೆದ ೧೯೯೪ರಿಂದ ೨೦೧೩ರವರೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ ೪ ಬಾರಿ ಚುನಾಯಿತರಾಗಿದ್ದರು. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಪ್ರಕಾಶ್ ಅವರು ಪರಾಭವಗೊಂಡಿದ್ದರು. ೧೯೮೩ರಲ್ಲಿ ಹಾಸನ ನಗರಸಭಾ ಸದಸ್ಯರಾಗಿ, ೧೯೮೫-೮೭ರಲ್ಲಿ ಹಾಸನ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪುಸ್ತಕ ಓದುವ, ಸಂಗೀತ ಕೇಳುವ, ಕ್ರೀಡೆಯಲ್ಲಿ ಆಸಕ್ತಿ, ಹವ್ಯಾಸ ಹೊಂದಿದ್ದ ಇವರು ಕೃಷಿಕರೂ ಕೂಡ ಆಗಿದ್ದರು. ೪ ಬಾರಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದ ಅವರು ಜನಪ್ರಿಯ ಶಾಸಕ ಎಂದೆ ಇಲ್ಲಿನ ಜನರೂ ಪ್ರೀತಿಯಿಂದ ಕರೆಯುತ್ತಿದ್ದರು. ಪತ್ನಿ ಲಲಿತಾ ಪ್ರಕಾಶ್, ಕಂದಲಿ ಕ್ಷೇತ್ರದ ಜಿಪಂ ಸದಸ್ಯ ಹೆಚ್.ಪಿ. ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ, ಹಾಗೂ ಇಬ್ಬರೂ ಸಹೋದರರಾದ ಮಾಜಿ ನಗರಸಭಾಧ್ಯಕ್ಷ ಹೆಚ್.ಎಸ್. ಅನಿಲ್‌ಕುಮಾರ್, ವಾಸ್ತುಶಿಲ್ಪಿ ಹೆಚ್.ಎಸ್. ದೇವೇಂದ್ರ ಇದ್ದಾರೆ. ೨೦೦೧ರಿಂದ ನಗರದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ೧೯೮೩-೧೯೮೯ರ ವರೆಗೆ ಹಾಸನ ಮುನ್ಸಿಪಲ್ ಕೌನ್ಸಿಲ್ ಸದಸ್ಯರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಪ್ರಕಾಶ್ ೧೯೮೫ರಿಂದ ೧೯೮೭ರವರೆಗೆ ಎರಡು ವರ್ಷ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಂತರ ೧೯೯೪ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಜನತಾದಳದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ೧೯೯೯ರಲ್ಲಿ ಬಿಜೆಪಿಯ ಕೆ.ಎಚ್. ಹನುಮೇಗೌಡರೆದುರು ಪರಾಭವಗೊಂಡಿದ್ದರು. ನಂತರ ಸತತವಾಗಿ ಮೂರು ಬಾರಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ೨೦೧೮ರಲ್ಲಿ ಬಿಜೆಪಿಯ ಪ್ರೀತಂಗೌಡರ ಎದುರು ಪರಾಭವಗೊಂಡಿದ್ದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮತ್ತು ಸಚಿವ ಹೆಚ್.ಡಿ. ರೇವಣ್ಣನವರ ಅಚ್ಚುಮೆಚ್ಚಿನವರಾಗಿದ್ದ ಪ್ರಕಾಶ್‌ರಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದರು.
ನಗುಮುಖದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅಗಲಿ ಇಂದಿಗೆ ಒಂದು ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಲಾಗಿದೆ.
ಈಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್, ಜೆಡಿಎಸ್ ಮುಖಂಡ ದೊಡ್ಡೇಗೌಡ ಇತರರು ಪಾಲ್ಗೊಂಡಿದ್ದರು.
Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.