ETV Bharat / state

ಹಾಸನ: ಪ್ರತ್ಯೇಕ ಪ್ರಕರಣದಲ್ಲಿ ಗುಂಡು ತಗುಲಿ ಇಬ್ಬರು ಸಾವು - bullet firing

ವಾಕಿಂಗ್​ ಮಾಡುತ್ತಿದ್ದ ವ್ಯಕ್ತಿಯನ್ನು ಹಂದಿ ಎಂದು ತಿಳಿದು ಗುಂಡು ಹಾರಿಸಿ ಪ್ರಾಣ ತೆಗೆದಿರುವ ಘಟನೆ ಹಾಸನ ಜಿಲ್ಲೆಯ ಬಾಣವಾರದಲ್ಲಿ ನಡೆದಿದೆ.

hassan two people have died since a separate case
ಹಾಸನ ಪ್ರತ್ಯೇಕ ಪ್ರಕರಣ: ಬಂದುಕಿನಿಂದ ಇಬ್ಬರು ಸಾವು
author img

By

Published : Dec 8, 2022, 8:13 PM IST

ಹಾಸನ: ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿಯ ಬಸವರಾಜಪುರದ ಸುರೇಶ್ (45) ಎಂಬುವವರು ತೋಟದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಗುಂಡು ತಗುಲಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.

ಗಂಗಾನಾಯಕ್ (40), ನಂದೀಶ (27) ಬಂಧಿತರು. ಬೇಟೆಗೆ ತೆರಳಿದ್ದ ಸಂದರ್ಭದಲ್ಲಿ ಕಾಡುಹಂದಿ ಎಂದು ಭಾವಿಸಿ ಆರೋಪಿಗಳು ಹಾರಿಸಿದ ಗುಂಡು ಸುರೇಶ್​ಗೆ ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಾಣಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಆಕಸ್ಮಿಕವಾಗಿ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಾಸನ ಎಸ್​ಪಿ ಹರಿರಾಂ ಶಂಕರ್​ ತಿಳಿಸಿದರು.

ಪ್ರತ್ಯೇಕ ಪ್ರಕರಣದಲ್ಲಿ ಗುಂಡು ತಗುಲಿ ಇಬ್ಬರು ಸಾವು

ಪ್ರಕರಣ 2: ಆಕಸ್ಮಿಕವಾಗಿ ಎದೆಗೆ ಹಾರಿದ ಗುಂಡು: ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಕೆಂಗನಹಳ್ಳಿ ಗ್ರಾಮದ ಚಂದ್ರಶೇಖರ್ ಅವರು ತಮ್ಮ ಪರವಾನಿಗೆ ಪಡೆದಿರುವ ಬಂದೂಕನ್ನು ಕೈಯಲ್ಲಿಟ್ಟುಕೊಂಡ ವೇಳೆ ಆಕಸ್ಮಿಕವಾಗಿ ಎದೆಗೆ ಗುಂಡು ಹಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಹಾಸನ: ಪತ್ನಿ ಕೊಲೆಗೈದ ಆರೋಪಿ ಪತಿಯ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.