ಸಕಲೇಶಪುರ(ಹಾಸನ): ತಾಲೂಕಿನ ಮಳಲಿ ಗ್ರಾಮದ ಹಿರಿಕೆರೆ ಬಳಿ ವಿದ್ಯುತ್ ಸ್ಪರ್ಶಿಸಿ ಎರಡು ಹಸುಗಳು ಸಾವನ್ನಪ್ಪಿವೆ.
ಮಳಲಿ ಗ್ರಾಮದ ನಿವಾಸಿಗಳಾದ ಎಂ.ಎನ್. ಶಿವಪ್ಪ ಹಾಗೂ ದೇವರಾಜ್ ಎಂಬುವವರಿಗೆ ಸೇರಿದ ಎರಡು ಹಸುಗಳು, ಹಿರಿಕೆರೆ ಸಮೀಪದ ಕಾಫಿ ತೋಟದಲ್ಲಿರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಗ್ರೌಂಡ್ ಆಗಿ ಅಸುನೀಗಿವೆ.
ಕೂಡಲೇ ಮೃತ ಹಸುಗಳಿಗೆ ಸೂಕ್ತ ಪರಿಹಾರವನ್ನ ವಿದ್ಯುತ್ ಇಲಾಖೆ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.