ETV Bharat / state

ಬೈಕ್​ ಸವಾರನ ಅಡ್ಡಗಟ್ಟಿ ದರೋಡೆಗೆ ಯತ್ನ... ಕುರಿಗಾಯಿಗಳಿಂದ ಖದೀಮರಿಗೆ ಹಿಗ್ಗಾಮುಗ್ಗಾ ಥಳಿತ - robbery, etv bharat, holenarasipura, kannada news, crime news, two wheeler, bike, rider,

ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಹಣ ಮತ್ತು ಚಿನ್ನಾಭರಣ ದೋಚಲು ಪ್ರಯತ್ನಿಸಿದವರಿಗೆ ಕುರಿಗಾಹಿಗಳು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಳೆನರಸಿಪುರ ಬಳಿ ನಡೆದಿದೆ.

ದುಷ್ಕರ್ಮಿಗಳು
author img

By

Published : Apr 22, 2019, 9:40 AM IST

ಹಾಸನ: ದ್ವಿಚಕ್ರ ವಾಹನ ಸವಾರನನ್ನ ಅಡ್ಡಗಟ್ಟಿ ಹಣ ಮತ್ತು ಚಿನ್ನಾಭರಣ ದೋಚಲು ಪ್ರಯತ್ನಿಸಿದವರನ್ನು ಕುರಿಗಾಹಿಗಳು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಳೆನರಸಿಪುರ ತಾಲೂಕಿನ ದೊಡ್ಡ ಕಾಡನೂರು ಬಳಿ ನಡೆದಿದೆ.

ಹೊಳೆನರಸಿಪುರದ ವಿಷಕಂಠಯ್ಯ ಎಂಬುವರನ್ನು ಅಡ್ಡಗಟ್ಟಿ ಚಿನ್ನ ಹಾಗೂ ಹಣವನ್ನು ದೋಚಲು ಈ ಖದೀಮರು ಪ್ರಯತ್ನಿಸಿದ್ದರು. ಆದರೆ ವಿಷಕಂಠಯ್ಯ ಮೊದಲು ಪ್ರತಿರೋಧ ಒಡ್ಡಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ಕಂಡ ಚಾಲಾಕಿಗಳು ಅವರನ್ನು ಸಮೀಪದ ಕುರುಚಲು ಗಿಡದ ಬಳಿ ಎಳೆದೊಯ್ದಿದ್ದರು. ವಿಷಕಂಠಯ್ಯ 3 ಮಂದಿಯಿಂದ ಹಲ್ಲೆಗೊಳಗಾದ್ದರಿಂದ ಜೋರಾಗಿ ಕಿರುಚಾಡಿದ್ದರು.

ದರೋಡೆಗೆ ಪ್ರಯತ್ನ ಪಟ್ಟ ದುಷ್ಕರ್ಮಿಗಳು

ಕಿರುಚಾಟದ ಶಬ್ದ ಕೇಳಿದ ಸಮೀಪದಲ್ಲಿದ್ದ ಕುರಿಗಾಯಿಗಳು ಸ್ಥಳಕ್ಕೆ ಬಂದು ಮೂವರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ತಕ್ಕ ಶಾಸ್ತಿ ಮಾಡಿದ್ದಾರೆ. ನಂತರ ಹೊಳೆನರಸಿಪುರ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಬ್ಬೂರು ಕೊಪ್ಪಲು ಗ್ರಾಮದ ಸಿದ್ದರಾಜು (41), ಅರುಣ್ ರಾಜ್ ಅರಸ್ (35) ಮತ್ತು ರಘು (33) ಆರೋಪಿಗಳು ಎಂದು ತಿಳಿದುಬಂದಿದೆ. ಸದ್ಯ ಈ ಮೂವರು ಹೊಳೆನರಸಿಪುರ ಪೊಲೀಸರ ವಶದಲ್ಲಿದ್ದಾರೆ.

Intro:ದ್ವಿಚಕ್ರ ವಾಹನ ಸವಾರನನ್ನ ಅಡ್ಡಗಟ್ಟಿ ಆತನ ಬಳಿಯಿದ್ದ ಹಣ ಮತ್ತು ಚಿನ್ನಾಭರಣ ದೋಚಲು ಪ್ರಯತ್ನ ಪಟ್ಟ ದುಷ್ಕರ್ಮಿಗಳಿಗೆ ಕುರಿಗಾಹಿಗಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡ ಕಾಡನೂರು ಸಮೀಪ ಇಂತಹದೊಂದು ಘಟನೆ ಸಂಭವಿಸಿದೆ.

ಹೊಳೆನರಸೀಪುರ ಕೆ ಎಸ್ ಆರ್ ಟಿ ಸಿ ಘಟಕದ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಷಕಂಠಯ್ಯ ಇವತ್ತು ಕರ್ತವ್ಯ ಮುಗಿಸಿಕೊಂಡು ಆಲಂಬಾಡಿ ಎಂಬ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬಾಚನಹಳ್ಳಿ ಸಮೀಪ ಮೂವರು ದುಷ್ಕರ್ಮಿಗಳು ವಿಷಕಂಠಯ್ಯನನ್ನ ಅಡ್ಡಗಟ್ಟಿ ಆತನ ಬಳಿಯಿದ್ದ ಚಿನ್ನ ಹಾಗೂ ನಗದನ್ನು ದೋಚಲು ಪ್ರಯತ್ನ ಪಟ್ಟಿದ್ದಾರೆ.

ಆದರೆ ವಿಷಕಂಠಯ್ಯ ಮೂವರ ವಿರುದ್ಧ ಮೊದಲು ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನವನ್ನು ಕಂಡ ದುಷ್ಕರ್ಮಿಗಳು ಆತನನ್ನು ಸಮೀಪದ ಕುರುಚಲು ಗಿಡದ ಬಳಿಗೆ ಎಳೆದೋಯ್ದಿದ್ದಾರೆ. ಆದ್ರೆ ವಿಷಕಂಠಯ್ಯ ಮೂರು ಮಂದಿಯಿಂದ ಹಲ್ಲೆಗೊಳಗಾಗಿದೇರಿಂದ ಪ್ರತಿರೋಧಿಸಲು ಸಾಧ್ಯವಾಗದೆ ಜೋರಾಗಿ ಕಿರುಚಾಡಿ ನಡೆಸಿದ್ದಾರೆ

ಕಿರುಚಾಟದ ಶಬ್ಧವನ್ನು ಕೇಳಿದ ಸಮೀಪದಲ್ಲಿದ್ದ ಕುರಿಗಾಯಿಗಳು ಸ್ಥಳಕ್ಕೆ ಬಂದು ಮೂವರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ತಕ್ಕ ಶಾಸ್ತಿ ಮಾಡಿದ್ದಾರೆ. ಅಷ್ಟೆಯಲ್ಲದೇ ಹೊಳೆನರಸೀಪುರ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಇನ್ನು ಆ ಈ ಮೂರು ಆರೋಪಿಗಳನ್ನ ಕಬ್ಬೂರು ಕೊಪ್ಪಲು ಗ್ರಾಮದ ಸಿದ್ದರಾಜು(41), ಅರುಣ್ ರಾಜ್ ಅರಸ್ (35) ಮತ್ತು ರಘು (33) ಎಂದು ತಿಳಿದುಬಂದಿದ್ದು, ಇವತ್ತು ಸಂಜೆ 6 ಗಂಟೆಯ ಸುಮಾರಿನಲ್ಲಿ ಈ ಕೃತ್ಯವನ್ನು ಎಸಗಿದ್ದು, ಕುರಿಗಾಯಿಗಳ ಕೈಗೆ ಸಿಕ್ಕಿ ಹಿಗ್ಗಾ-ಮುಗ್ಗಾ ಗೂಸಾ ತಿಂದು, ಅರೆಬೆತ್ತಲೆಯಾಗಿ ತಮ್ಮ ಮಾನವನ್ನೇ ತಾವೇ ಆ ಹರಾಜು ಮಾಡಿಕೊಂಡಿದ್ದಾರೆ.

ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಮ್ಮುಖದಲ್ಲಿ ಕೂಡ ಗ್ರಾಮಸ್ಥರು ಅವ್ಯಾಚ ಶಬ್ದಗಳಿಂದ ಬೈದು ಮತ್ತೊಮ್ಮೆ ಹಲ್ಲೆ ನಡೆಸಿ ತಕ್ಕ ಶಾಸ್ತಿ ಮಾಡಿ ಶ್ರೀಕೃಷ್ಣನ ಜನ್ಮಸ್ಥಳ ಕಳಿಸಿಕೊಟ್ಟಿದ್ದಾರೆ.

ಅದೇನೋ ಗೊತ್ತಿಲ್ಲ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತ್ರ ಕಳೆದ ಮೂರು ನಾಲ್ಕು ತಿಂಗಳಿನಿಂದ ರೋಡ್ ರವರುಗಳು ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ತವರಲ್ಲಿಯೇ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ನಾಗರಿಕರು ತಲೆತಗ್ಗಿಸುವಂತಾಗಿದೆ.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.