ETV Bharat / state

ಅರಕಲಗೂಡಿನಲ್ಲಿ ಸಂಚಾರಿ ವಾಹನದ ಮೂಲಕ ಗಂಟಲು ದ್ರವ ಸಂಗ್ರಹ

ಪಟ್ಟಣದ ಕೊಳಲು ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಬಳಿ ಇರುವ ಮಾರುಕಟ್ಟೆಯ ಆಸುಪಾಸು ಕೋವಿಡ್ ಸೋಂಕಿತ ವ್ಯಕ್ತಿಗಳು ಸಂಚರಿಸಿರುವ ಹಿನ್ನೆಲೆ ಸಂಚಾರಿ ವಾಹನದ ಮೂಲಕ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ..

csdd
ಅರಕಲಗೂಡಿನಲ್ಲಿ ಸಂಚಾರಿ ವಾಹನದ ಮೂಲಕ ಗಂಟಲು ದ್ರವ ಸಂಗ್ರಹ
author img

By

Published : Jun 26, 2020, 5:56 PM IST

ಅರಕಲಗೂಡು : ಗ್ರಾಮೀಣ ಭಾಗದ ಜನ ಕೊರೊನಾ ಪರೀಕ್ಷೆಗಾಗಿ ನಗರಕ್ಕೆ ಬರುವುದು ಕಷ್ಟವಾಗುತ್ತದೆ ಎಂಬ ಕಾರಣದಿಂದ ಜಿಲ್ಲಾಡಳಿತ ಹಳ್ಳಿಯ ಮನೆ ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹಕ್ಕೆ ಯೋಜನೆ ರೂಪಿಸಿದೆ ಎಂದು ಆರೋಗ್ಯ ನಿರೀಕ್ಷಕ ಆನಂದ್​ ಗೌಡ ಹೇಳಿದ್ದಾರೆ.

ಅರಕಲಗೂಡಿನಲ್ಲಿ ಸಂಚಾರಿ ವಾಹನದ ಮೂಲಕ ಗಂಟಲು ದ್ರವ ಸಂಗ್ರಹ

ಪಟ್ಟಣದ ಕೊಳಲು ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಬಳಿ ಇರುವ ಮಾರುಕಟ್ಟೆಯ ಆಸುಪಾಸು ಕೋವಿಡ್ ಸೋಂಕಿತ ವ್ಯಕ್ತಿಗಳು ಸಂಚರಿಸಿರುವ ಹಿನ್ನೆಲೆ ಸಂಚಾರಿ ವಾಹನದ ಮೂಲಕ ಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕೊರೊನಾ ಜಾಗೃತಿ ಸಾರುವ ಕೆಲಸ ನಡೆಯುತ್ತಿದೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಅಥವಾ ಕೋವಿಡ್-19ನ ಶಂಕೆ ಕಂಡು ಬಂದರೆ ಸಾರ್ವಜನಿಕರು ಸಂಚಾರಿ ಘಟಕದಲ್ಲಿ ಮಾದರಿ ನೀಡಿ ಫಲಿತಾಂಶ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಮಾತನಾಡಿದ ಕೊಣನೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಎಸ್ ಎಲ್ ಸಾಗರ್​, ದಯವಿಟ್ಟು ಸಾರ್ವಜನಿಕರು ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರದೆ ಸೋಂಕಿತರ ಸಂಪರ್ಕ ಹೊಂದಿದ್ದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ಪಟ್ಟಣದಲ್ಲಿ ಈವರೆಗೆ ಯಾವುದೇ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.