ETV Bharat / state

ಪಾರ್ಕಿಂಗ್​​​​​ನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧನ : 8 ಬೈಕ್​ ವಶ - Hassan Theft of bicycles parked in the parking lot News

ಬೇಲೂರು ಪಟ್ಟಣದ ನೆಹರು ನಗರದ ಆಟೋ ನಿಲ್ದಾಣದ ಬಳಿ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿ ಬ್ಯಾಂಕ್​ಗೆ ಹೋಗಿ ಬರುವಷ್ಟರಲ್ಲಿ ಆರೋಪಿಗಳು ಬೈಕ್ ಕಳ್ಳತನ ಮಾಡಿದ್ದರು. ಇವರು ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಇಬ್ಬರು ಕಳ್ಳರ ಬಂಧನ 8 ಬೈಕ್​ ವಶ
ಇಬ್ಬರು ಕಳ್ಳರ ಬಂಧನ 8 ಬೈಕ್​ ವಶ
author img

By

Published : Aug 3, 2020, 10:27 AM IST

ಹಾಸನ (ಬೇಲೂರು): ಪಾರ್ಕಿಂಗ್​​ನಲ್ಲಿ ನಿಲ್ಲಿಸುತ್ತಿದ್ದ ಬೈಕ್​​ಗಳನ್ನ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಖದೀಮರನ್ನ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರಿನ ಭರತ್ ಅಲಿಯಾಸ್ ಭಟ್ಟ (23), ಜಾನ್ ಸಾದೂ ಅಲಿಯಾಸ್ ಡೆನ್ನು (23) ಬಂಧಿತ ಆರೋಪಿಗಳು. ಜು. 22ರಂದು ಬೇಲೂರು ತಾಲೂಕು ದುಮ್ಮೇನಹಳ್ಳಿ ಗ್ರಾಮದ ಶಾಂತಕುಮಾರ್ ಬೇಲೂರು ಪಟ್ಟಣದ ನೆಹರು ನಗರದ ಆಟೋ ನಿಲ್ದಾಣದ ಬಳಿ ತಮ್ಮ ದ್ವಿಚಕ್ರವಾಹನ ನಿಲ್ಲಿಸಿ ಬ್ಯಾಂಕ್​ಗೆ ಹೋಗಿ ಬರುವಷ್ಟರಲ್ಲಿ ಆರೋಪಿಗಳು ಬೈಕ್ ಕಳ್ಳತನ ಮಾಡಿದ್ದರು. ಈ ಸಂಬಂಧ ಶಾಂತಕುಮಾರ್ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಅಂತರ ಜಿಲ್ಲಾ ಖದೀಮರ ಬಂಧನ
ಅಂತರ ಜಿಲ್ಲಾ ಖದೀಮರ ಬಂಧನ

ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಬೇಲೂರು ನಗರದ ಯಗಚಿ ಬ್ರಿಡ್ಜ್ ಹತ್ತಿರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕದ್ದ ಬೈಕ್ ಮಾರಾಟ ಮಾಡಲು ಯತ್ನಿಸುತ್ತಿದ್ದದು ಗೊತ್ತಾಗಿದೆ. ನಂತರ ಪೊಲೀಸರು ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಇವರು ಅಂತರ ಜಿಲ್ಲಾ ಬೈಕ್ ಕಳ್ಳತನ ಮಾಡುತ್ತಿರುವುದು ಗೊತ್ತಾಗಿದೆ.

6 ಲಕ್ಷ ಮೌಲ್ಯದ 8 ಬೈಕ್​​ಗಳ ವಶ: ಐಷಾರಾಮಿ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಈ ಇಬ್ಬರು ಸ್ನೇಹಿತರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇನ್ನು ಶಾಂತಕುಮಾರ್ ಬೈಕ್ ಸೇರಿದಂತೆ ಬೇಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ-03 ಬೈಕ್, ಚಿಕ್ಕಮಗಳೂರು ನಗರದಲ್ಲಿ 1 ಬೈಕ್, ಬಸವನಹಳ್ಳಿ-1 ಬೈಕ್ ಬೆಂಗಳೂರು ನಗರದ ಕುಂಬಳಗೋಡಿನಲ್ಲಿ 01, ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2 ಬೈಕ್ ಸೇರಿ ಒಟ್ಟು 8 ಬೈಕ್ ಗಳನ್ನ ಕಳ್ಳತನ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.