ಹಾಸನ: ತಾನು ಅಪ್ರಾಪ್ತ ಹುಡುಗಿಯ ಮೇಲೆ ಅತ್ಯಾಚಾರ ಎಸಗಿಲ್ಲ ಎಂಬುದನ್ನು ಸಾಬೀತುಪಡಿಸಲು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಯುವಕನ ಅಸಲಿಯತ್ತು ಬಯಲಾಗಿದೆ. ಆತ ಅತ್ಯಾಚಾರ ಎಸಗಿರುವ ವೀಡಿಯೋ ಲಭ್ಯವಾಗಿದ್ದು, ನಾಟಕವಾಡಿದ್ದವನ ನಾಟಕ ಬಯಲಾಗಿದೆ.
ಪತ್ರಿಕಾ ಧರ್ಮ ಪಾಲನೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈಟಿವಿ ಭಾರತ ಆ ವೀಡಿಯೋ ಹಾಗೂ ಆಡಿಯೋವನ್ನು ಪ್ರಕಟಿಸುತ್ತಿಲ್ಲ.
ಕೆಲ ದಿನಗಳ ಹಿಂದೆ ಸಂದೀಪ್ ಎಂಬ ಆರೋಪಿ, ಡ್ರಾಪ್ ಕೊಡುವ ನೆಪದಲ್ಲಿ ಅಪ್ರಾಪ್ತ ಹುಡುಗಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದ. ನಂತರ ಆಕೆಗೆ ಮತ್ತು ಬರುವ ಔಷಧ ಬೆರೆಸಿದ ಜ್ಯೂಸ್ ಕುಡಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪಕ್ಕೆ ಗುರಿಯಾಗಿದ್ದ.
ಇನ್ನೂ ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಾನು ವಿಷ ಕುಡಿಯುವ ವಿಡಿಯೋವನ್ನು ತನ್ನ ಅಪ್ಪ ಅಮ್ಮನಿಗೆ ಕಳುಹಿಸಿದ್ದ. ಈ ವೀಡಿಯೋವನ್ನಿಟ್ಟುಕೊಂಡು ಆತನ ಪೋಷಕರು ತಮ್ಮ ಮಗ ಅಮಾಯಕ, ಆ ಹುಡುಗಿಯೇ ತಮ್ಮ ಮಗನಿಗೆ ಮೆಸೇಜ್ ಕಳುಹಿಸುತ್ತಿದ್ದಳು ಎಂದು ಆರೋಪಿಸಿದ್ದರು.
ಸಂದೀಪ್ ತಾನು ಕಾರಿನಲ್ಲಿ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ. ಈಗ ಅದೇ ವೀಡಿಯೋ ಸಂದೀಪ್ ಹಾಗೂ ಆತನ ಪೋಷಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಏನಿದೆ ಆ ವೀಡಿಯೋದಲ್ಲಿ?
1.19 ನಿಮಿಷದ ಈ ವೀಡಿಯೋದಲ್ಲಿ ಚಲಿಸುವ ಕಾರಿನಲ್ಲೇ ಹುಡುಗಿಯ ಮೇಲೆ ಅತ್ಯಾಚಾರ ಎಸಗುವ ದೃಶ್ಯವನ್ನು ಸಂದೀಪ್ ಸೆರೆ ಹಿಡಿದಿದ್ದಾನೆ.