ETV Bharat / state

ಜನರಿಗೆ ಗ್ರ್ಯಾಂಡ್ ಸನ್ ಬಗ್ಗೆ ಪ್ರೀತಿ ಇರಬೇಕಂತಿಲ್ಲ: ಪ್ರಜ್ವಲ್ ವಿರುದ್ಧ ಮಾಳವಿಕ ಕಿಡಿ

author img

By

Published : Apr 7, 2019, 10:47 PM IST

ಹಾಸನ ಜಿಲ್ಲೆಯಲ್ಲಿ ದೇವೇಗೌಡ್ರು ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಪ್ರಜ್ವಲ್ ಕೊಡುಗೆ ಹಾಗೂ ಪರಿಶ್ರಮ ಏನು?. ಒಂದು ಕುಟುಂಬದ ಸದಸ್ಯ ಅಥವಾ ಮೊಮ್ಮಗ ಎಂಬ ಕಾರಣಕ್ಕೆ ಜನತೆ ಆಯ್ಕೆ ಮಾಡುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ಮಾಳವಿಕ ಅವಿನಾಶ್ ಹೇಳಿದರು.

ಮಾಳವಿಕ ಅವಿನಾಶ್ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಚುನಾವಣಾ ಪ್ರಚಾರ

ಹಾಸನ: ಜನತೆಗೆ ಸನ್ ಆಫ್ ದ ಸಾಯಿಲ್ ಬಗ್ಗೆ ಪ್ರೀತಿ ಇದೆ. ಆದರೆ, ಗ್ರ್ಯಾಂಡ್ ಸನ್ ಬಗ್ಗೆ ಪ್ರೀತಿ ಇರಬೇಕು ಎಂದು ಅನ್ನಿಸುವುದಿಲ್ಲ ಅಂತಾ ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಹೇಳಿದರು.

ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ನಗರದ ಗಾಣಿಗರ ಬೀದಿಯಲ್ಲಿ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ದೇವೇಗೌಡ್ರು ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಪ್ರಜ್ವಲ್ ಕೊಡುಗೆ ಹಾಗೂ ಪರಿಶ್ರಮ ಏನು?. ಒಂದು ಕುಟುಂಬ ಸದಸ್ಯ ಅಥವಾ ಮೊಮ್ಮಗ ಎಂಬ ಕಾರಣಕ್ಕೆ ಜನತೆ ಆಯ್ಕೆ ಮಾಡುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.

ಮಾಳವಿಕ ಅವಿನಾಶ್ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಚುನಾವಣಾ ಪ್ರಚಾರ

ಹಾಸನವನ್ನ ಒಬ್ಬ ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ ಮಂಡ್ಯವನ್ನ ಮತ್ತೊಬ್ಬರಿಗೆ ಕೊಟ್ಟಿದ್ದಾರೆ. ಜನತೆಗೆ ಯಾರು ಸ್ಪಂದಿಸುತ್ತಾರೋ ಅವರಿಗೆ ಜನ ಮತ ಕೊಡುತ್ತಾರೆ. ಸುಮಲತಾ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಹೊಸ ಮನ್ವಂತರ ಪ್ರಾರಂಭವಾಗಿದೆ. ಹೊಸ ಗಾಳಿ ಬೀಸಲಿದೆ. ಹಾಸನ ಜನತೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಹೊಸ ಸಂಸದರನ್ನಾಗಿ ಆಯ್ಕೆಮಾಡಿ ದೆಹಲಿಗೆ ಕಳುಹಿಸುವರು. ಅವರು ಸುಮಾರು 30 ವರ್ಷಗಳಿಂದ ಜನತೆ ನಡುವೆ ಇದ್ದಾರೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು ಕೈ ಹಿಡಿಯಲಿವೆ. ದೇಶದ ರಕ್ಷಣೆಗೆ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು, ಭ್ರಷ್ಟಾಚಾರಕ್ಕೆ ನಿಯಂತ್ರಣ, ಜನ್‌ಧನ್ ಯೋಜನೆ ಇವೆಲ್ಲಕ್ಕಿಂತ ಮಿಗಿಲಾಗಿ ಭವ್ಯ ಭಾರತದ ನಿರ್ಮಾಣಕ್ಕೆ ಮನ್ನಣೆ ಸಿಗುವುದು ಸತ್ಯ ಎಂದು ಭವಿಷ್ಯ ನುಡಿದರು.

Intro:ಗ್ರ್ಯಾಂಡ್ ಸನ್ ಬಗ್ಗೆ ಪ್ರೀತಿ ಇರಬೇಕಂತಿಲ್ಲ: ಬಿಜೆಪಿ ನಾಯಕಿ ಮಾಳವಿಕ ಅವಿನಾಶ್

ಹಾಸನ: ಜನತೆಗೆ ಸನ್ ಆಫ್ ದ ಸಾಯಿಲ್ ಬಗ್ಗೆ ಪ್ರೀತಿ ಇದೆ. ಆದರೆ, ಗ್ರ್ಯಾಂಡ್ ಸನ್ ಬಗ್ಗೆ ಪ್ರೀತಿ ಇರಬೇಕು ಎಂದು ಅನ್ನಿಸುವುದಿಲ್ಲ ಎಂದು ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕ ಅವಿನಾಶ್ ಹೇಳಿದರು.
ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ನಗರದ ಗಾಣಿಗರ ಬೀದಿಯಲ್ಲಿ ಕನ್ನಂಬಾಡಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ದೇವೇಗೌಡ್ರು ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಗೆ ಪ್ರಜ್ವಲ್ ಕೊಡುಗೆ ಹಾಗೂ ಪರಿಶ್ರಮ ಏನು?. ಒಂದು ಕುಟುಂಬ ಸದಸ್ಯ ಅಥವಾ ಮೊಮ್ಮಗ ಎಂಬ ಕಾರಣಕ್ಕೆ ಜನತೆ ಆಯ್ಕೆ ಮಾಡುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.
ಸಿಂಹಾಸನಪುರಿಯನ್ನ ಒಬ್ಬ ಮೊಮ್ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ ಮಂಡ್ಯವನ್ನ ಮತ್ತೊಬ್ಬರಿಗೆ ಕೊಟ್ಟಿದ್ದಾರೆ. ಯಾರು ಜನತೆಗೆ ಸ್ಪಂಧಿಸುತ್ತಾರೊ ಅವರಿಗೆ ಮತಕೊಡುವರು. ಕೇವಲ ನಾಮ್‌ಧಾರ್ ಅಲ್ಲ, ಕಾಮ್‌ಧಾರ್ ಆಗಿರಬೇಕು. ಸುಮಲತಾ ಅಂಬರಿಷ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ಮನನ್ವಂತರ ಪ್ರಾರಂಭವಾಗಿದೆ. ಹೊಸ ಗಾಳಿ ಬೀಸಲಿದೆ. ಹಾಸನ ಜನತೆ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಹೊಸ ಸಂಸದರನ್ನು ಆಯ್ಕೆಮಾಡಿ ದೆಹಲಿಗೆ ಕಳುಹಿಸುವರು. ಅವರು  ಸುಮಾರು ೩೦ ವರ್ಷಗಳಿಂದ ಜನತೆ ನಡುವೆ ಇದ್ದಾರೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಸಕ್ರೀಯರಾಗಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಪಾರ ಸಾಧನೆಗಳು ಕೈ ಹಿಡಿಯಲಿವೆ. ದೇಶದ ರಕ್ಷಣೆಗೆ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು, ಭ್ರಷ್ಟಾಚಾರಕ್ಕೆ ನಿಯಂತ್ರಣ, ಜನಧನ್ ಯೋಜನೆ ಇವೆಲ್ಲಕ್ಕಿಂತ ಮಿಗಿಲಾಗಿ ಭವ್ಯ ಭಾರತದ ನಿರ್ಮಾಣಕ್ಕೆ ಮನ್ನಣೆ ಸಿಗುವುದು ಸತ್ಯ ಎಂದು ಭವಿಷ್ಯ ನುಡಿದರು.

- ಕೆ.ಸಿ.ಮಣಿಕಂಠ,ಈಟಿವಿ ಭಾರತ, ಹಾಸನ.

Body:0

Conclusion:0

For All Latest Updates

TAGGED:

Malavika
ETV Bharat Logo

Copyright © 2024 Ushodaya Enterprises Pvt. Ltd., All Rights Reserved.