ETV Bharat / state

ಅಕ್ರಮವಾಗಿ ನೀಲಗಿರಿ ಮರ ಕಡಿದು ಸಾಗಣೆಗೆ ಯತ್ನಿಸುತ್ತಿದ್ದ ಆರೋಪಿಗಳು ವಶಕ್ಕೆ

ಪರಾರಿಯಾದ ಆರೋಪಿಗಳ ಶೋಧ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಂತಹ ಕೃತ್ಯಗಳಿಗೆ ಕೈ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ಹೇಮಂತ್​ ಕುಮಾರ್​ ತಿಳಿಸಿದ್ದಾರೆ.

ಆರೋಪಿಗಳು
author img

By

Published : Jun 8, 2019, 12:47 PM IST

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿ ಕಾವಲು ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡಲು ಯತ್ನಿಸುತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ರಮವಾಗಿ ನೀಲಗಿರಿ ಮರ ಕಡಿದು ಸಾಗಣೆ

ಆಲೂರು ತಾಲೂಕು ವ್ಯಾಪ್ತಿಯ ಕಾಮತಿ ಶೆಟ್ಟಿಹಳ್ಳಿ ಉಮೇಶ್, ಪಾಳ್ಯದ ಸತೀಶ್, ಬೈರಾಪುರದ ಮಹೇಶ್, ಹುಲ್ಲಹಳ್ಳಿಯ ಪ್ರದೀಪ್, ರಮೇಶ ಮತ್ತು ಪ್ರಕಾಶ್ ಬಂಧಿತರು.
ತಾಲೂಕಿನ ನಾಗಸಮುದ್ರ ಗ್ರಾಮದ ಸುರೇಶ್ ಎಂಬಾತ ತನ್ನ ಸಹಚರರೊಂದಿಗೆ ನೀಲಗಿರಿ ಮರಗಳನ್ನು ಪವರ್ ಕಟಿಂಗ್ ಮಿಷನ್​ ಬಳಸಿ ಕಟಾವು ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ತಾಲೂಕು ವಲಯ ಅರಣ್ಯಾಧಿಕಾರಿ ಹೇಮಂತ್‌ ಕುಮಾರ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ದಾಳಿ ನಡೆಸಿ 6 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಸೇರಿದಂತೆ ನಾಗಸಮುದ್ರ ಗ್ರಾಮದ ಪ್ರಮುಖ ಆರೋಪಿ ಸುರೇಶ್ ಸೇರಿದಂತೆ ನಾಲ್ಕು ಮಂದಿ ಪರಾರಿಯಾಗಿದ್ದು, ಉಳಿದ ಆರು ಮಂದಿಯನ್ನ ಬಂಧಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶ್ವ ಪರಿಸರ ದಿನದ ನಿಮಿತ್ತ ಜಂಬೂರಿನಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಷಯ ತಿಳಿದ ಆರೋಪಿಗಳು, ಈ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

ಹೇಮಂತ್‌ಕುಮಾರ್, ಡಿವೈಆರ್‌ಎಫ್ ಮಂಜುನಾಥ್, ಸಿಬ್ಬಂದಿ ವಿಶ್ವನಾಥ್, ಲೋಕೇಶ್, ದಯಾನಂದ್, ಮಲ್ಲಪ್ಪ, ಕರೀಗೌಡ, ರವಿ ಹಾಗೂ ನಂಜೇಗೌಡ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Intro:ತಾಲೂಕಿನ ಕಗ್ಗಲಿ ಕಾವಲು ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಕಡಿದು ಸಾಗಿಸಲು ಯತ್ನಿಸುತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ನಾಗಸಮುದ್ರ ಗ್ರಾಮದ ಸುರೇಶ್ ಎಂಬಾತ ತನ್ನ ಸಹಚರರೂಂದಿಗೆ ಕಗ್ಗಲಿಕಾವಲು ಅರಣ್ಯ ಪ್ರದೇಶದಲ್ಲಿ ಬೆಳೆಯಲಾಗಿದ್ದ ನೀಲಗಿರಿ ಮರಗಳನ್ನು ಪವರ್ ಕಟಿಂಗ್ ಮಿಷನ್ ಬಳಸಿ ಕಟಾವು ಮಾಡುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ತಾಲೂಕು ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್ ನೇತೃತ್ವದಲ್ಲಿ
ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸದ್ಯ 6 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೃತ್ಯಕ್ಕೆ ಬಳಸಿದ್ದ ಒಂದು ಲಾರಿಯನ್ನ ವಶಕ್ಕೆ ಪಡೆದಿದ್ದು, ಲಾರಿ ಚಾಲಕ ಸೇರಿದಂತೆ ನಾಗಸಮುದ್ರ ಗ್ರಾಮದ ಪ್ರಮುಖ ಆರೋಪಿ ಸುರೇಶ್, ಮತ್ತು ನಾಲ್ಕು ಮಎದಿ ಪರಾರಿಯಾಗಿದ್ದು, ಉಳಿದ 6 ಮಂದಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗವು ವಿಶ್ವ ಪರಿಸರ ದಿನದ ಅಂಗವಾಗಿ ಜಂಬೂರಿನಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಷಯವನ್ನ ತಿಳಿದ ಆರೋಪಿಗಳು ಮರ ಕಡಿಯುವ ಕೃತ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

ಸದ್ಯ ಬಂಧನಕ್ಕೆ ಒಳಗಾಗಿರುವ ಆಲೂರು ತಾಲೂಕು ವ್ಯಾಪ್ತಿಯ ಕಾಮತಿ ಶೆಟ್ಟಿಹಳ್ಳಿ ಉಮೇಶ್, ಪಾಳ್ಯದ ಸತೀಶ್, ಭೈರಾಪುರದ ಮಹೇಶ್ ಹಾಗೂ ಹುಲ್ಲಹಳ್ಳಿ ಗ್ರಾಮದ ಪ್ರದೀಪ್, ರಮೇಶ ಮತ್ತು ಪ್ರಕಾಶ್ ಅವರ ವಿರುದ್ಧ ತಾಲೂಕು ವಲಯ ಅರಣ್ಯ ಇಲಾಖೆಯಲ್ಲಿ ದೂರು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ತಾಲೂಕು ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್, ಡಿವೈಆರ್‌ಎಫ್
ಮಂಜುನಾಥ್, ಸಿಬ್ಬಂದಿ ವಿಶ್ವನಾಥ್, ಲೋಕೇಶ್, ದಯಾನಂದ್, ಮಲ್ಲಪ್ಪ, ಕರೀಗೌಡ, ರವಿ
ಹಾಗೂ ನಂಜೇಗೌಡ ಭಾಗಿಯಾಗಿದ್ರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.