ಹಾಸನ: ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಸಂಪಿಗೆ ರಸ್ತೆಯಲ್ಲಿರುವ ಕಣ್ಣಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದರು.
ಐ ಕೇರ್ ಸಿಬ್ಬಂದಿಗೆ ಕಳೆದ ಐದಾರು ತಿಂಗಳಿಂದ ಸಂಬಳ ನೀಡಿಲ್ಲ. ಮಾಲೀಕರನ್ನು ಕೇಳಿದರೆ ನಮ್ಮ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಇಂದು-ನಾಳೆ ಎಂಬ ಸಬೂಬು ಹೇಳಿಕೊಂಡು ಕಳೆದ ಆರು ತಿಂಗಳಿಂದ ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಅಂತ ಎಂದು ಸಿಬ್ಬಂದಿ ಆರೋಪ ಮಾಡಿದರು.
ಹಾಸನ ನಗರದಲ್ಲಿ ಉತ್ತಮವಾಗಿ ಕಂಪನಿ ಲಾಭ ಗಳಿಸುತ್ತಿದ್ದರು ಕೂಡ ನಷ್ಟ ಇದೆ ಎಂಬ ಸಬೂಬನ್ನು ಹೇಳಿ ಸುಮಾರು 20 ಮಂದಿ ಸಿಬ್ಬಂದಿಗಳಿಗೆ 20 ಲಕ್ಷಕ್ಕೂ ಅಧಿಕ ಸಂಬಳ ನೀಡಬೇಕು ಅಂತ ಸಿಬ್ಬಂದಿವರ್ಗದವರು ಆರೋಪಿಸಿದರು. ಇನ್ನು ಐ ಕೇರ್ನ ಮಾಲೀಕರು ಸಮಸ್ಯೆಯನ್ನು ಆಲಿಸಲು ಖುದ್ದು ನಾನೇ ಹಾಸನಕ್ಕೆ ಬರುತ್ತೇನೆ ಅಂತ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.