ETV Bharat / state

ದೇವಾಲಯದ ಪಟ್ಟಕ್ಕೇರಿದ ಶ್ರೀಶೈಲ‌ ಮಲ್ಲಿಕಾರ್ಜುನ ಸ್ವಾಮಿ

ಮೈಸೂರು ದಸರಾ ಪ್ರಾರಂಭವಾದ ಹಿನ್ನೆಲೆಯಲ್ಲಿ ಸೂರನಾಯಕನಹಳ್ಳಿ ಗ್ರಾಮದ ಶ್ರೀಶೈಲ‌ ಮಲ್ಲಿಕಾರ್ಜುನ ಸ್ವಾಮಿಯನ್ನು ದೇವಾಲಯದ ಪಟ್ಟಕ್ಕೆ ಕೂರಿಸಲಾಯಿತು.

ದೇವಾಲಯದ ಪಟ್ಟಕ್ಕೇರಿದ ಶ್ರೀ ಶೈಲ‌ಮಲ್ಲಿಕಾರ್ಜುನ ಸ್ವಾಮಿ
author img

By

Published : Sep 29, 2019, 9:14 PM IST

ಹಾಸನ: ಜಗತ್ಪ್ರಸಿದ್ಧ ಮೈಸೂರು ದಸರಾ ಪ್ರಾರಂಭವಾದ ಹಿನ್ನೆಲೆಯಲ್ಲಿ ಸೂರನಾಯಕನಹಳ್ಳಿ ಗ್ರಾಮದ ಶ್ರೀಶೈಲ‌ ಮಲ್ಲಿಕಾರ್ಜುನ ಸ್ವಾಮಿಯನ್ನು ದೇವಾಲಯದ ಪಟ್ಟಕ್ಕೆ ಕೂರಿಸಲಾಯಿತು.

ಜಿಲ್ಲೆಯ ಬೇಲೂರು ತಾಲೂಕಿನ ಸೂರನಾಯಕನಹಳ್ಳಿ ಗ್ರಾಮದಲ್ಲಿ‌ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ್ದು, ವಿವಿಧ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿರುತ್ತಿರುವ ದೇವಾಲಯದಲ್ಲಿ ನವರಾತ್ರಿಯ ಮೊದಲ‌ ದಿನ‌ ಸ್ವಾಮಿಗೆ ದೇವಾಲಯದಲ್ಲಿ ರುದ್ರಾಭೀಷೇಕ, ಪಂಚಾಭೀಷೇಕ, ಮಹಾರುದ್ರಾಭೀಷೇಕ ಜೊತೆಗೆ ವಿಷೇಶ ಪೂಜೆ ಸಲ್ಲಿಸಲಾಯಿತು. ಸಂಜೆ ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕರಿಸಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಬಿಲ್ವಪತ್ರೆ ರಥದಲ್ಲಿ ದೇವಾಲಯದಿಂದ ಶ್ರೀರಾಮ ದೇವರ ದೇವಾಲಯದವರಗೆ ಉತ್ಸವ ಮಾಡಲಾಯಿತು.

ದೇವಾಲಯದ ಪಟ್ಟಕ್ಕೇರಿದ ಶ್ರೀಶೈಲ‌ ಮಲ್ಲಿಕಾರ್ಜುನ ಸ್ವಾಮಿ

ಗ್ರಾಮದ ಮುಖ್ಯಸ್ಥರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀರಾಮ ದೇವರ ಮೂರ್ತಿಯನ್ನು ಶನಿವಾರ ರಾತ್ರಿ 1.20ರ ಸಮಯದಲ್ಲಿ ದೇವಾಲಯದ ಗರ್ಭಗುಡಿ ಮುಂಭಾಗದ ಅಂಗಳದಲ್ಲಿರುವ ಉಯ್ಯಾಲೆಯಲ್ಲಿ ಕೂರಿಸಿ‌ ಮಂಗಳಾರತಿಯೊಂದಿಗೆ ಉಯ್ಯಾಲೆಯನ್ನು ತೂಗುವ ಮೂಲಕ ನವರಾತ್ರಿ ವೈಭವಕ್ಕೆ ಚಾಲನೆ ನೀಡಿದರು.

ದೇವರನ್ನು ಪಟ್ಟಕ್ಕೆ ಕೂರಿಸುವ ಮೊದಲು ಭಕ್ತರು ತಮ್ಮ ಕಷ್ಟಗಳನ್ನು ನೆರವೇರಿಸುವಂತೆ ಬೇಡಿಕೊಂಡರು. ನವರಾತ್ರಿಯ ಮೊದಲ ದಿನವಾದ ಶನಿವಾರ ಸಂಜೆ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.‌ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಬಳಿ ಪ್ರತಿದಿನ ಸಾವಿರಾರು ಭಕ್ತರು ಬಂದು ತಮ್ಮ ಕಷ್ಟಗಳನ್ನು ನೆರವೇರಿಸುವಂತೆ ಕೇಳಿಕೊಳ್ಳುತ್ತಾರೆ.

Intro:ಹಾಸನ : ಇಂದಿನಿಂದ ಜಗತ್ಪ್ರಸಿದ್ಧ ಮೈಸೂರು ದಸರಾ ಪ್ರಾರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸೂರನಾಯಕನಹಳ್ಳಿ ಗ್ರಾಮದ ಶ್ರೀ ಶೈಲ‌ಮಲ್ಲಿಕಾರ್ಜುನ ಸ್ವಾಮಿಯವರು 9 ದಿನ ದೇವಾಲಯದಲ್ಲಿ ಪಟ್ಟಕ್ಕೆ ಕೂರಿಸಲಾಯಿತು.

ಹೌದು....., ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸೂರನಾಯಕನಹಳ್ಳಿ ಗ್ರಾಮದಲ್ಲಿ‌ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ನೆಲೆಸಿದ್ದು, ವಿವಿಧ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿರುತ್ತಿರುವ ದೇವಾಲಯದಲ್ಲಿ ನವರಾತ್ರಿಯ ಮೊದಲ‌ ದಿನ‌ವಾದ ಶನಿವಾರ ಶ್ರೀಯವರಿಗೆ ದೇವಾಲಯದಲ್ಲಿ ರುದ್ರಾಭೀಷೇಕ, ಪಂಚಾಭೀಷೇಕ, ಮಹಾರುದ್ರಾಭೀಷೇಕ ಜತೆಗೆ ವಿಷೇಶ ಪೂಜೆ ಸಲ್ಲಿಸಲಾಯಿತು.

ಅಂದು ಸಂಜೆ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಯವರನ್ನು ವಿವಿಧ ಹೂವುಗಳಿಂದ ಅಲಂಕರಿಸಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಬಿಲ್ವ ಪತ್ರೆ ರಥದಲ್ಲಿ ಶ್ರೀಯವರ ದೇವಾಲಯದಿಂದ ಶ್ರೀ ರಾಮ ದೇವರ ದೇವಾಲಯದ ವರಗೆ ಉತ್ಸವ ಮಾಡಲಾಯಿತು.

ಶ್ರೀಯವರ ಹೇಳಿಕೆಯಂತೆ ಗ್ರಾಮದ ಮುಖ್ಯಸ್ಥರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ರಾಮ ದೇವರ ಸ್ವಾಮಿ ಪೋಟೋವನ್ನು ಶನಿವಾರ ರಾತ್ರಿ 1.20 ರ ಸಮಯದಲ್ಲಿ ದೇವಾಲಯದ ಗರ್ಭಗುಡಿ ಮುಂಭಾಗದ ಅಂಗಳದಲ್ಲಿರುವ ಉಯ್ಯಾಲೆಯಲ್ಲಿ ಕೂರಿಸಿ‌ ಮಂಗಳಾರತಿಯೊಂದಿಗೆ ಉಯ್ಯಾಲೆಯನ್ನು ತೂಗುವ ಮೂಲಕ ನವರಾತ್ರಿ ವೈಭವಕ್ಕೆ ಚಾಲನೆ ನೀಡಿದರು.

9 ದಿನಗಳ ಕಾಲ ಪಟ್ಟದಲ್ಲಿರುವ ಶ್ರೀಯವರಿಗೆ ಬೆಳಗ್ಗೆ ರುದ್ರಾಭೀಷೇಕ, ಪಂಚಾಭೀಷೇಕ, ಮಹಾರುದ್ರಾಭೀಷೇಕ ಹಾಗೂ ಸಂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಶ್ರೀಯವರು ಪಟ್ಟಕ್ಕೆ ಕೂರುವ ಮೊದಲು ಭಕ್ತರು ತಮ್ಮ ಕಷ್ಟಗಳನ್ನು ನೆರವೇರಿಸುವಂತೆ ಬೇಡಿ ಕೊಂಡರು. ನವರಾತ್ರಿಯ ಮೊದಲ ದಿನವಾದ ಶನಿವಾರ ಸಂಜೆ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.‌

ಈ ಒಂಭತ್ತು ದಿನಗಳ ಕಾಲ ಬೆಳಗ್ಗಿನ ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳಿಗೆ ಬಂದತಹ ಭಕ್ತರಿಗೆ ಹಿಬ್ಬನಿ ಪ್ರಸಾದವನ್ನು ನೀಡಲಾಗುತ್ತದೆ.

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಬಿಳಿ ಪ್ರತಿದಿನ ಸಾವಿರಾರು ಭಕ್ತರು ಬಂದು ತಮ್ಮ ಕಷ್ಟಗಳನ್ನು ನೆರವೇರಿಸುವಂತೆ ಕೇಳಿಕೊಳ್ಳುತ್ತಾರೆ, ಆದರಂತೆ ಶ್ರೀಯವರು ಕೂಡ ತಮ್ಮ ಭಕ್ತರಿಗೆ ಅವರಲ್ಲಿರುವ ಕಷ್ಟಗಳನ್ನು ನಿವಾರಿಸಿ ಕೊಡುತ್ತಿದ್ದಾರೆ ಎಂಬುದು ಬಂದ ಭಕ್ತರ ನಂಬಿಕೆ.

ಬೈಟ್ 1 : ಚನ್ನೇಗೌಡ, ಶಿಕ್ಷಕ ಹಾಗೂ ಶ್ರೀಯವರ ಭಕ್ತರು.

ಬೈಟ್ 2 : ಶೋಭ, ಶ್ರೀಯವರ ಭಕ್ತೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.