ಚನ್ನರಾಯಪಟ್ಟಣ: ಇಂದು ತಾಲೂಕಿನಲ್ಲಿ ಆರು ಮಂದಿಗೆ ಕೊರೊನಾ ಸೋಂಕು ತಗುಲಿದೆ.
ದಿನೇ ದಿನೆ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಪ್ರವಾಸಿ ಮಂದಿರ ರಸ್ತೆ ಮತ್ತು ತಾಲೂಕು ಕಚೇರಿ, ಪುರಸಭೆ ಮಳಿಗೆ ಹಾಗೂ ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.
ನಗರದ ವಾರ್ಡ್ ನಂಬರ್ ಒಂಬತ್ತರ ನಾಗಸಂದ್ರ ರಸ್ತೆಯನ್ನು ನೂರು ಮೀಟರ್ ಸೀಲ್ ಡೌನ್ ಮಾಡಲಾಗಿದೆ.