ETV Bharat / state

ಹಾಸನ ಪಶು ವೈದ್ಯಕೀಯ ಕಾಲೇಜಿನ ಡೀನ್​ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ನಗರದ ಪಶು ವೈದ್ಯಕೀಯ ಶಿಕ್ಷಣ ಕಾಲೇಜಿನ ಡೀನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು,ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿವಿಯ ವಿದ್ಯಾರ್ಥಿಗಳು ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

author img

By

Published : Aug 19, 2019, 2:46 AM IST

Dean of Veterinary Medical College

ಹಾಸನ : ದಿನದಿಂದ ದಿನಕ್ಕೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದ ಪಶು ವೈದ್ಯಕೀಯ ಶಿಕ್ಷಣ ಕಾಲೇಜಿನ ಡೀನ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ನಗರದ ಪಶು ವೈದ್ಯಕೀಯ ಶಿಕ್ಷಣ ಕಾಲೇಜು

ನಗರದ ಹೊರ ವಲಯದಲ್ಲಿರುವ ಪಶು ವೈದ್ಯಕೀಯ ಕಾಲೇಜು ಡೀನ್ ರಂಗನಾಥ್, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಆರೋಪ ಮಾಡಿದ್ದು, ವಿವಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿವಿಯ ವಿದ್ಯಾರ್ಥಿಗಳು ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ವಿವಿ ಸ್ಟ್ಯಾಂಡಿಂಗ್ ಕಮಿಟಿಯಿಂದ ಪ್ರಕರಣದ ತನಿಖೆ ನಡೆಯುತ್ತಿದ್ದು, ತ್ವರಿತವಾಗಿ ತನಿಖೆ ನಡೆಸುವಂತೆ ವಿದ್ಯಾರ್ಥಿಗಳು ಇಂದು ಪ್ರಭಾರ ಡೀನ್ ದೇವರಾಜ್ ಅವರಿಗೆ ಪತ್ರ ಬರೆದಿದ್ದಾರೆ.

Dean of  Veterinary Medical College
ವಿದ್ಯಾರ್ಥಿ ನೀಡಿರುವ ದೂರಿನ ಪ್ರತಿ

ಆದರೆ ಈ ಆರೋಪವನ್ನು ಡೀನ್ ರಂಗನಾಥ್ ನಿರಾಕರಿಸಿದ್ದಾರೆ. ಕಾಲೇಜಿನ ಹಿತ ದೃಷ್ಟಿಯಿಂದ ಕೆಲ ನಿಯಮಗಳನ್ನು ಜಾರಿಗೆ ತಂದ ಪರಿಣಾಮ ವಿದ್ಯಾರ್ಥಿಗಳು ಈ ರೀತಿ ಆರೋಪ ಮಾಡುತ್ತಿದ್ದಾರೆ. ನನ್ನಿಂದ ಯಾವುದೇ ತಪ್ಪು ನಡೆದಿಲ್ಲ. ನಾನು ಯಾವುದೇ ತನಿಖೆಗೂ ಸಿದ್ದ ಎಂದು ರಂಗನಾಥ್ ಹೇಳಿದ್ದಾರೆ.

Intro:ಹಾಸನ : ದಿನದಿಂದ ದಿನಕ್ಕೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ. ಗುರುಗಳನ್ನ ಗುರುದೇವೋಭವ ಅಂತಾರೆ ಇನ್ನೂ ವಿದ್ಯಾರ್ಥಿನಿಯರು ಮಗಳ ಸಮಾನ ಅಂತಾರೆ ಆದರೆ ಇಲ್ಲೊಬ್ಬ ಶಿಕ್ಷಕ ತಾನು ಗೈಡ್ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಸಂತ್ರಸ್ತ ವಿದ್ಯಾರ್ಥಿನಿ ಪಶುವಿದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗೆ ದೂರು ನೀಡಿದ್ದಾರೆ.

Body:ಹಾಸನ ಪಶು ವೈದ್ಯಕೀಯ ಶಿಕ್ಷಣ ಕಾಲೇಜ್ ಡೀನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಹಾಸನ ನಗರದ ಹೊರ ವಲಯದಲ್ಲಿರುವ ಪಶು ವೈದ್ಯಕೀಯ ಕಾಲೇಜು ಡೀನ್ ರಂಗನಾಥ್ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪಶು ವೈದ್ಯಕೀಯ ಪಿಜಿ ವಿದ್ಯಾರ್ಥಿ ಹರ್ಷಿತಾ ಎಂಬ ವಿದ್ಯಾರ್ಥಿನಿ ಆರೋಪ ಮಾಡಿದ್ದು, ವಿವಿ ಗೆ ದೂರು ನೀಡಿದ್ದಾರೆ. ಈ ಹಿನ್ನಲೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಕ್ಷೆ ನೀಡುವಂತೆ ಪಶು ವೈದ್ಯಕೀಯ ವಿದ್ಯಾರ್ಥಿಗಳು ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಸದ್ಯ ಪ್ರಕರಣ ವಿವಿ ಸ್ಟ್ಯಾಂಡಿಂಗ್ ಕಮಿಟಿ ಯಿಂದ ತನಿಖೆ ನಡೆಯುತ್ತಿದ್ದು, ತ್ವರಿತವಾಗಿ ತನಿಖೆ ನಡೆಸುವಂತೆ ವಿದ್ಯಾರ್ಥಿಗಳು ಇಂದು ಪತ್ರ ಬರೆದಿದ್ದಾರೆ ಎಂದು ಪ್ರಭಾರ ಡೀನ್ ದೇವರಾಜ್ ತಿಳಿಸಿದ್ದಾರೆ.

ಹಾಸನದ ಪಶು ವೈದ್ಯಕೀಯ ಕಾಲೇಜು ಡೀನ್ ರಂಗನಾಥ್, ಕಾಲೇಜ್ ಹಿತ ದೃಷ್ಟಿಯಿಂದ ಕೆಲ ನಿಯಮಗಳ ಜಾರಿಗೆ ತಂದ ಪರಿಣಾಮ ವಿದ್ಯಾರ್ಥಿಗಳು ಈ ರೀತಿ ಆರೋಪ ಮಾಡುತ್ತಿದ್ದಾರೆ.

ನನ್ನಿಂದ ಯಾವುದೇ ತಪ್ಪು ನಡೆದಿಲ್ಲ ನಾನು ಯಾವುದೇ ತನಿಖೆಗೂ ಸಿದ್ದ ಎಂದಿದ್ದಾರೆ.. ಇನ್ನೂ ಪ್ರತಿಭಟನೆ ನಡೆಸಿರುವ ವಿದ್ಯಾರ್ಥಿಗಳು, ಪ್ರಭಾರ ಡೀನ್ ಗೆ ದೂರು ಪತ್ರ ನೀಡಿದ್ದು, ಕುಲಪತಿಗೆ ಕಳುಹಿಸಲಾಗಿದೆ ಎಂದು ಆರೋಪಿ ಡೀನ್ ರಂಗನಾಥ್ ತಿಳಿಸಿದ್ದಾರೆ.

Conclusion:ಸಾವಿರಾರು ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಕಷ್ಟಪಟ್ಟು ಹಗಲು ರಾತ್ರಿಯೆನ್ನದೇ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕಾಲೇಜಿನ ಉಪನ್ಯಾಸಕರೇ ಈ ರೀತಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ರೆ ಎಷ್ಟು ಸರಿ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇಂತಹ ಉಪನ್ಯಾಸಕರಿಂದ ಇಡೀ ಶಿಕ್ಷಕ ವೃಂದಕ್ಕೆ ಕೆಟ್ಟ ಹೆಸರು ಬರುತ್ತಿದ್ದು ಇಂತಹ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.