ETV Bharat / state

ರೆಮ್​ಡಿಸಿವಿಯರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ: ಹೆಚ್.ಡಿ.ರೇವಣ್ಣ ಆರೋಪ

ರೆಮ್​ಡಿಸಿವಿಯರ್ ಚುಚ್ಚುಮದ್ದು ನೀಡದೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಕೃತ್ಯದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

HD Revanna
ಹೆಚ್.ಡಿ.ರೇವಣ್ಣ
author img

By

Published : May 8, 2021, 7:07 AM IST

ಹಾಸನ: ಜಿಲ್ಲೆಯಲ್ಲಿ ರೆಮ್​ಡಿಸಿವಿಯರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ. ಕಾರಣ ರಾಜಕೀಯದ ಕೆಲವು ವ್ಯಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪ

ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಡವರು ಸಾಯುತ್ತಿದ್ದಾರೆ. ರೆಮ್​ಡಿಸಿವಿಯರ್ ಚುಚ್ಚುಮದ್ದು ನೀಡದೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಕೃತ್ಯದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದ್ದು, ನಮ್ಮ ಹೊಳೆನರಸೀಪುರದ ಕ್ರಷರ್ ಮಾಲೀಕರು ತಮ್ಮ ಕುಟುಂಬದ ಇಬ್ಬರಿಗೆ ತಲಾ 18 ಸಾವಿರ ರೂ. ಕೊಟ್ಟು ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ನಾನು ಹೇಳುವುದು ಸುಳ್ಳಾದರೆ ಕ್ರಷರ್ ಮಾಲೀಕನನ್ನು ವಶಕ್ಕೆ ಪಡೆದು ಎಸ್​ಪಿ ಅವರು ತನಿಖೆ ಮಾಡಲಿ ಎಂದು ಆಗ್ರಹಿಸಿದರು.

ಮಾಜಿ ಪ್ರಧಾನಿಗೆ ಪತ್ರ ಬರೆದ ಹಾಸನ ಡಿಸಿ:

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರಿಗೆ ಹಾಸನ ಜಿಲ್ಲಾಧಿಕಾರಿಗಳು ಪತ್ರ ಬರೆದು, ಜಿಲ್ಲೆಯಲ್ಲಿ ಆಮ್ಲಜನಕ, ಚುಚ್ಚುಮದ್ದು, ಹಾಗೂ ಕೆಲವು ಔಷಧಿಗಳ ಕೊರತೆಯಿದೆ. ಹಾಗಾಗಿ ತಾವು ಪ್ರಧಾನಿಯೊಂದಿಗೆ ಚರ್ಚಿಸಿ ಪ್ರತಿನಿತ್ಯ ನಮಗೆ ಸಾವಿರ ಚುಚ್ಚುಮದ್ದನ್ನು ಪೂರೈಕೆ ಮಾಡಬೇಕು ಮತ್ತು ಆಮ್ಲಜನಕ ಕೊರತೆ ಇಲ್ಲದಂತೆ ಕಂಪನಿಗಳಿಂದ ಪೂರೈಸಲು ಪ್ರಧಾನಿಯವರಿಂದ ಸೂಚನೆ ಕೊಡಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದರು.

ರಾಜಕೀಯ ಮುಖಂಡರೇ ಕೃತ್ಯದಲ್ಲಿ ಪಾಲುದಾರರು:

ಹಾಸನದ ಸ್ಪರ್ಶ ಆಸ್ಪತ್ರೆಗೆ ರಾಜಕೀಯದ ಕೆಲವು ಮುಖಂಡರುಗಳು ಸೂಚನೆ ನೀಡಿದರು ಎಂದು ಅವರಿಗೆ ಆಕ್ಸಿಜನ್​ ಸಿಲಿಂಡರ್ ಪೂರೈಸಿದ್ದಾರೆ. ಇದನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾನು ಆಸ್ಪತ್ರೆಯ ಸಿಬ್ಬಂದಿಯಿಂದಲೇ ಸತ್ಯಾಂಶವನ್ನು ಬಾಯ್ಬಿಡಿಸಿದ್ದೇನೆ. ಈ ದಂಧೆಯಲ್ಲಿ ದೊಡ್ಡವರೇ ಪಾಲುದಾರರು. ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಪ್ರತಿನಿತ್ಯ 900 ಸಿಲಿಂಡರ್ ಅವಶ್ಯಕತೆ ಇದೆ. ಆದರೆ ನಮಗೆ ಅಷ್ಟೊಂದು ಸಿಲಿಂಡರ್ ಸಿಗುತ್ತಿಲ್ಲ. ಹೀಗಾಗಿ ಆಮ್ಲಜನಕದ ಕೊರತೆಯಿಂದ ಸೋಂಕಿತರು ಸಾಯುತ್ತಿದ್ದಾರೆ. ಇದನ್ನ ಜಿಲ್ಲಾಡಳಿತ ಮುಚ್ಚಿಡುತ್ತಿದೆ ಎಂದು ರೇವಣ್ಣ ದೂರಿದರು.

ನಮ್ಮಲ್ಲೂ ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ:

ಜಿಲ್ಲೆಯಲ್ಲಿ ಶುಕ್ರವಾರ 2,540 ಮಂದಿ ಸೋಂಕಿತರು ಪತ್ತೆಯಾಗಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 10ಕ್ಕೂ ಹೆಚ್ಚು ಮಂದಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ. ಹಾಸನದ ಖಾಸಗಿ ಆಮ್ಲಜನಕದ ರೀಫಿಲಿಂಗ್ ಕಾರ್ಯವನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆಕ್ಸಿಜನ್ ಕೊರತೆ ಎದ್ದು ಕಾಣಲಿದ್ದು, ಪ್ರತಿನಿತ್ಯ 250ಕ್ಕೂ ಹೆಚ್ಚು ಸಿಲಿಂಡರ್ ಕೊರತೆಯಿದೆ ಎಂದು ಹೆಚ್​ ಡಿ ರೇವಣ್ಣ ಆತಂಕ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.