ETV Bharat / state

ಹಾಸನ: ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ 62 ಅಭ್ಯರ್ಥಿಗಳ ಅವಿರೋಧ ಆಯ್ಕೆ

ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಅರಸೀಕೆರೆಯ ಜಾಗವಲ್ ಹೋಬಳಿಯಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಹೊಳೆನರಸೀಪುರದ ಎರಡನೇ ಹಂತದ ಚುನಾವಣೆಯ 26 ಕ್ಷೇತ್ರಗಳಲ್ಲಿದ್ದ 392 ಸ್ಥಾನಕ್ಕೆ ಒಟ್ಟು 936 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

author img

By

Published : Dec 21, 2020, 4:44 PM IST

GP election
ಗ್ರಾ.ಪಂ ಚುನಾವಣೆ

ಹಾಸನ/ಹೊಳೆನರಸೀಪುರ/ಜಾವಗಲ್: ನಾಳೆ ಮೊದಲ ಹಂತದ ಚುನಾವಣೆಗೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಎರಡನೇ ಹಂತದ ಗ್ರಾಪಂ ಚುನಾವಣೆ ಕದನದಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

47 ಮಂದಿ ಅವಿರೋಧವಾಗಿ ಆಯ್ಕೆ: ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಅರಸೀಕೆರೆಯ ಜಾಗವಲ್ ಹೋಬಳಿಯಲ್ಲಿ 62 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಹೊಳೆನರಸೀಪುರದ ಎರಡನೇ ಹಂತದ ಚುನಾವಣೆಯ 26 ಕ್ಷೇತ್ರಗಳಲ್ಲಿದ್ದ 392 ಸ್ಥಾನಕ್ಕೆ ಒಟ್ಟು 936 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಹೊಳನರಸೀಪುರ ತಾಲೂಕಿನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ 72 ಪುರುಷರು, 101 ಮಹಿಳೆಯರು, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಕ್ಷೇತ್ರದಲ್ಲಿ 4 ಪುರುಷರು, 37 ಮಹಿಳೆಯರು, ಹಿಂದುಳಿದ ವರ್ಗ 2ಎಗೆ ಮೀಸಲಾಗಿದ್ದ ಸ್ಥಾನದಲ್ಲಿ 77 ಪುರುಷರು, 75 ಮಹಿಳೆಯರು, ಹಿಂದುಳಿದ ವರ್ಗ ಬಿಗೆ ಮೀಸಲಾಗಿದ್ದ ಸ್ಥಾನಕ್ಕೆ 13 ಪುರುಷರು, 20 ಮಹಿಳೆಯರು, ಸಾಮಾನ್ಯ ಕ್ಷೇತ್ರದಿಂದ 326 ಪುರುಷರು, 213 ಮಹಿಳೆಯರು ಸೇರಿ ಒಟ್ಟು 936 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಉಳಿದಿದ್ದಾರೆ.

ಡಿ. 27ಕ್ಕೆ ಚುನಾವಣೆ ನಡೆಯಲಿದ್ದು, 220 ಮತದಾನ ಕೇಂದ್ರಗಳನ್ನು ತೆರೆಯಲಾಗಿದೆ. 26ಕ್ಕೆ ಮತ ಕೇಂದ್ರದ ಅಧಿಕಾರಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನಕ್ಕೆ ಬೇಕಾದ ಪರಿಕರಗಳನ್ನು ನೀಡಲಾಗುತ್ತಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಜಾವಗಲ್ ಹೋಬಳಿಯಲ್ಲಿಯೂ 15 ಮಂದಿ ಅವಿರೋಧ ಆಯ್ಕೆ: ಇನ್ನು ಜಾವಗಲ್ ಹೋಬಳಿಯ 8 ಗ್ರಾಮ ಪಂಚಾಯಿತಿಗಳ ಒಟ್ಟು 114 ಸದಸ್ಯ ಸ್ಥಾನಗಳ ಪೈಕಿ 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಾವಗಲ್ ಗ್ರಾಮ ಪಂಚಾಯಿತಿಯ ಮಮತಾ, ಶಾರದಮ್ಮ, ಅರುಣ್, ಕೋಳಗುಂದದ ಮಂಜುಳಾ, ಕುಮಾರಸ್ವಾಮಿ, ಪುಷ್ಪಾವತಿ. ಶೇಖರಪ್ಪ, ಗಂಗಾಧರಪ್ಪ, ಶೋಭಾ, ಭಾಗೀರಥಮ್ಮ, ಕರಗುಂದದ ಕಮಲಮ್ಮ, ಕಲ್ಯಾಡಿಯ ರಮೇಶ, ಉಂಡಿಗನಾಳು ಶಿವಮ್ಮ, ಬಂದೂರು ಕುಮಾರ್ ಸಾಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಓದಿ...ಜೆಡಿಎಸ್​ ಪಕ್ಷದಲ್ಲಿ ವಿಲೀನದ ಪ್ರಶ್ನೆಯೇ ಇಲ್ಲ: ಹಾಗಾದಲ್ಲಿ ನಾನು ರಾಜಕೀಯ ನಿವೃತ್ತಿ ಆಗ್ತಿನಿ: ರೇವಣ್ಣ

ನಾಮಪತ್ರ ಹಿಂಪಡೆದುಕೊಳ್ಳಲು ಶನಿವಾರ ಅಂತಿಮ ದಿನವಾಗಿದ್ದರಿಂದ ಒಟ್ಟು 75 ಜನ ತಮ್ಮ ಉಮೇದುವಾರಿಕೆ ಹಿಂಪಡೆದುಕೊಂಡಿದ್ರು. ಅಂತಿಮವಾಗಿ ಜಾವಗಲ್ ಗ್ರಾಮ ಪಂಚಾಯಿತಿಯ 20 ಸ್ಥಾನಗಳಿಗೆ 65 ಅಭ್ಯರ್ಥಿಗಳು, ಕೋಳಗುಂದ 11 ಸ್ಥಾನಗಳಿಗೆ 24, ಅರಕೆರೆಯ 13 ಸ್ಧಾನಗಳಿಗೆ 36, ಕರಗುಂದದ 14 ಸ್ಧಾನಗಳಿಗೆ 45, ಕಲ್ಯಾಡಿಯ 8 ಸ್ಧಾನಗಳಿಗೆ 23, ಉಂಡಿಗನಳಿನ 10 ಸ್ಧಾನಗಳಿಗೆ 30, ಹಂದ್ರಾಳಿನ 12 ಸ್ಧಾನಗಳಿಗೆ 29 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.